131 Views
ಮೈಸೂರು:12 ಏಪ್ರಿಲ್ 2022
ನಂದಿನಿ ಮೈಸೂರು
ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ರವರಿಗೆ ಭಾರತ ರತ್ನ ನೀಡಬೇಕೆಂದು ಡಾ.ರಾಜ್ ಕುಮಾರ್ ಒಕ್ಕೂಟದ ರಾಮೇಗೌಡ ಸರ್ಕಾರಕ್ಕೆ ಒತ್ತಾಯಿಸಿದರು.
ಇಂದು ಡಾ.ರಾಜ್ ಕುಮಾರ್ ರವರ 16 ನೇ ವರ್ಷದ ಪುಣ್ಯ ಸ್ಮರಣೆ.ಇಂದು ಕರಾಳ ದಿನವೆಂದು ಆಚರಿಸುತ್ತಿದ್ದೇವೆ.ಡಾ.ರಾಜ್ ಕುಮಾರರವರು ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ.ರಾಜ್ ಕುಮಾರ್ ರವರು ನೂರಾರೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.ಬೇರೆ ಭಾಷೆಯ ಕಡೆ ಹೆಜ್ಜೆ ಹಾಕದೇ ಕನ್ನಡ ಭಾಷೆಗಳಲ್ಲಿಯೇ ನಟನೇ ಮಾಡಿದ್ರು.ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾಗಳನ್ನು ಮಾಡಿದ್ರು.2006 ರಲ್ಲಿ ಡಾ.ರಾಜ್ ಕುಮಾರ್ ನಿಧನರಾದರು.ಸಾವಿನಲ್ಲೂ ನೇತ್ರದಾನ ಮಾಡಿ ಸಾರ್ಥಕತೆ ಮೆರೆದಿದ್ದರು.ಸರ್ಕಾರದ ಡಾ.ರಾಜ್ ಕುಮಾರ್ ರವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದರು.