ವನ್ಯಜೀವಿ ಛಾಯಾಗ್ರಹಣ ವಿಶ್ವವಿದ್ಯಾಲಯ ಇದ್ದಂತೆ.ಇದೊಂದು ಅಂತ್ಯವಿಲ್ಲದ ಹವ್ಯಾಸ

 

ದಿನೇಶ್ ಚಲವಾದಿ
ಬೆಳ್ಳುರು, ನಾಗಮಂಗಲ, ಮಂಡ್ಯ.

                        ವನ್ಯಜೀವಿ ಛಾಯಾಗ್ರಹಣ ಎಂಬುದು ಬರಿ ಮನರಂಜನೆ ಗಾಗಿ ಮಾತ್ರ ಅಲ್ಲ ಅದರಲ್ಲಿ ಒಂದು ಶ್ರಮವಿದೆ. ವನ್ಯ ದಲ್ಲಿ ಸಿಗುವ ಪ್ರಾಣಿ, ಪಕ್ಷಿಗಳು, ಸರಿಸೃಪಗಳು ಹಾಗೂ ಇತರೆ ಸಣ್ಣ ಜೀವಿಗಳು ಬಿನ್ನ ಬಿನ್ನವಾದ ಪ್ರದೇಶಗಳಲ್ಲಿ ಜೀವಿಸುತ್ತದೆ ಹಾಗೂ ವಾತಾವರಣಕ್ಕೆ ತಕ್ಕಂತೆ ಹೊರಬರುತ್ತವೆ ಅಂತಹ ಸಮಯದಲ್ಲಿ ಅವುಗಳನ್ನು ಹುಡುಕಿ ಅವುಗಳ ಚಿತ್ರ ತೆಗೆಯುವುದು ಒಂದು ಚಾಲೆಂಜಿಂಗ್ ಆಗಿರುತ್ತದೆ.

                       ಎಲ್ಲಾ ಪ್ರಾಣಿಗಳನ್ನು ಅಥವಾ ಜೀವಿಗಳನ್ನು ಒಂದೇ ಕ್ಯಾಮರದಲ್ಲಿ ಸೆರೆಹಿಡಿದರೂ ಆ ಜೀವಿಗಳಿಗೆ ತಕ್ಕಂತೆ ಲೆನ್ಸ್ ಗಳ ಅವಶ್ಯಕತೆ ತುಂಬಾ ಮುಖ್ಯವಾಗಿರುತ್ತದೆ. ಪ್ರಾಣಿ -ಪಕ್ಷಿಗಳಿಗೆಗಳಿಗೆ ಒಂದು ಬಗೆಯ ಲೆನ್ಸ್ ಬಳಸಿದರೆ ಕ್ರಿಮಿಕೀಟಗಳಿಗೆ ಮ್ಯಾಕ್ರೋ ದಂತಹ ಸಣ್ಣ ಲೆನ್ಸ್ ಗಳನ್ನು ಬಳಸಿ ಛಾಯಾಚಿತ್ರಗಳನ್ನು ತೆಗೆಯಬೇಕಾಗುತ್ತದೆ. ವನ್ಯಜೀವಿ ಛಾಯಾಗ್ರಹಣ ಮನಸ್ಸಿಗೆ ಎಷ್ಟು ಸಂತೋಷ ಕೊಡುತ್ತದೂ ಅದೇ ರೀತಿ ಜೇಬಿಗೂ ಅಷ್ಟೇ ಕತ್ತರಿ ಬೀಳುತ್ತದೆ. ಈ ನಡುವೆ ಅರಣ್ಯ ಇಲಾಖೆಯಲ್ಲಿ ಸಫಾರಿ ಹಾಗೂ ಕ್ಯಾಮೆರಾ ಲೆನ್ಸ್ ಗಳ ಶುಲ್ಕಗಳು ಅತಿ ದುಬಾರಿಯಾಗಿರುವುದರಿಂದ ರಾಷ್ಟ್ರೀಯ ಉದ್ಯಾನವನಗಳು ತೆರಳುವುದು ಕಷ್ಟಕರದ ವಿಷಯವಾಗಿದೆ.

                        ನಿಶಾಚಾರಿ ಜೀವಸಂಕುಲಗಳನ್ನು ಸೆರೆ ಹಿಡಿಯಬೇಕಾದರೆ ಒತ್ತು ಗೊತ್ತು ನೋಡದೆ ರಾತ್ರಿ ಹಗಲು ಎನ್ನದೆ ಕಾಡಿನಲ್ಲಿ ಅಲೆದು ಚಿತ್ರಗಳನ್ನು ತೆಗೆಯಬೇಕಾಗುತ್ತದೆ.

                       ಸರಿಸೃಪಗಳಾದ ಹಾವು ಕಪ್ಪೆಗಳನ್ನು ತೆಗೆಯಲು ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಅಲೆಯುವುದು ಒಂದು ವಿಶೇಷವಾದ ಅನುಭವ ಅದರಲ್ಲೂ ಮಳೆಗಾಲದಲ್ಲಿ ಕ್ಯಾಮರಾವನ್ನು ಜೋಪಾನವಾಗಿ ಮಳೆ ನೀರಿಂದ ರಕ್ಷಿಸಿಕೊಂಡು ಕಾಡುಮೇಡುಗಳಲ್ಲಿ ಅಲೆದು ಚಿತ್ರವನ್ನು ಕ್ಲಿಕ್ಕಿಸಿದಾಗ ಸಿಗುವ ಸಂತೋಷ ಹೇಳತೀರದು. ಏನೇ ಆದರೂ ಈ ವನ್ಯಜೀವಿ ಛಾಯಾಗ್ರಹಣ ಎಂಬುದು ಒಂದು ವಿಶ್ವವಿದ್ಯಾಲಯ ಇದ್ದಂತೆ. ಇದು ಒಂದು ಅಂತ್ಯವಿಲ್ಲದ ಹವ್ಯಾಸ.

-ದಿನೇಶ್ ಚಲವಾದಿ

Leave a Reply

Your email address will not be published. Required fields are marked *