ದೆಹಲಿ:6 ಸೆಪ್ಟೆಂಬರ್ 2021
ನ@ದಿನಿ
ಕೆಎಸ್ಓಯು ಅಕ್ರಮ ವಿರೋಧಿಸಿ ದೆಹಲಿಯ ಯುಜಿಸಿ ಕಛೇರಿ ಮುಂದೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆ ಎಸ್ ಶಿವರಾಮು ಏಕಾಂಗಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಲವಾರು ಅಕ್ರಮಗಳು ಹಾಗೂ ಯು.ಜಿ.ಸಿ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕುಲಪತಿಗಳು ಹಾಗೂ ಅಧಿಕಾರಿಗಳ ಬೇಜವಾಬ್ಧಾರಿತನ ಹಾಗೂ 2012 ನೇ ಸಾಲಿನ ಭೋಧಕೇತರ ನೇಮಕಾತಿಗಾಗಿ ಅರ್ಜಿ ಕರೆದು ಲಕ್ಷಾಂತರ ಉದ್ಯೋಗಕಾಂಕ್ಷಿಗಳಿಂದ ಹಣ ಸಂದಾಯ ಮಾಡಿಕೊಂಡು ನೇಮಕಾತಿಯನ್ನು ಮಾಡದೆ ಹಣ ವಾಪಸ್ಸು ನೀಡದೆ ಬಡ ಉದ್ಯೋಗಕಾಂಕ್ಷಿಗಳ ಹಣ ಲೂಟಿ ಮಾಡಿರುವುದನ್ನು ವಿರೋಧಿಸಿ ಪ್ರತಿಭಟಿಸಿದರು.