ಮೈಸೂರು:3 ಅಕ್ಟೋಬರ್ 2022
ನಂದಿನಿ ಮೈಸೂರು
ಮಹಾರಾಷ್ಟ್ರದ ನಾಗಪುರದಲ್ಲಿರುವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆ ಸಾಗಿದೆ.
ಮೈಸೂರಿನ ಪುರಭವನದಲ್ಲಿ
ಅರ್ಹ 133 ಮಂದಿ ಯಾತ್ರೆಗೆ ಹೊರಡಲು ಸಮಾಜ ಕಲ್ಯಾಣ ಇಲಾಖೆಯಿಂದ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಮೂರು ಐರಾವತ ಬಸ್ಗಳಲ್ಲಿ ದಮ್ಮಾ ದೀಕ್ಷೆ ಭೂಮಿಗೆ ಪ್ರಯಾಣ ಬೆಳೆಸುವವರಿಗೆ ಸಂಘಟನೆಯ ಹಲವಾರು ಮಂದಿ ಶುಭ ಹಾರೈಸಿದರು.
ಮಹಾರಾಷ್ಟ್ರದ ನಾಗಪುರದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬೌದ್ಧ ಧರ್ಮದ ದೀಕ್ಷಾ ಪಡೆದ ಭೂಮಿಯನ್ನು ” ದೀಕ್ಷಾ ಭೂಮಿ ” ಎಂದು ಪರಿಗಣಿಸಿ ಪ್ರತಿ ವರ್ಷವೂ ನಾಗಪುರದಲ್ಲಿರುವ ದೀಕ್ಷಾ ಭೂಮಿಗೆ ‘ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅನುಯಾಯಿಗಳು ಅಕ್ಟೋಬರ್ ತಿಂಗಳಲ್ಲಿ ನಡೆಯುವ “ ದಮ್ಮ ಪರಿವರ್ತನ ದಿನ ” ಕಾರ್ಯಕ್ರಮದಲ್ಲಿ ಭಾಗವಹಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಿಪಿಎಲ್ ಕಾರ್ಡ್ ಹೊಂದಿರುವ ಜನರು ನಾಗಪುರಕ್ಕೆ ಭೇಟಿ ನೀಡಲು ಅನುಕೂಲವಾಗುವಂತೆ ಬಸ್‌ಗಳ ಮೂಲಕ ಪ್ರಯಾಣದ ವ್ಯವಸ್ಥೆಯನ್ನು ಕಲ್ಲಿಸ ಲಾಗಿದ್ದು , ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ, ಹುಣಸೂರು ಕೆ.ಆರ್.ನಗರ, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ, ಸರಗೂರು, ತಿ.ನರಸೀಪುರ
ಒಟ್ಟಾರೆ 133 ಅರ್ಜಿಗಳು ಆನ್ ಲೈನ್ ಮೂಲಕ ಸ್ವೀಕೃತವಾಗಿದ್ದು , ಸದರಿ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳವರ ಅನುಮೋದನೆಯಂತೆ ನಾಗಪುರ ಯಾತ್ರೆಗೆ ಹೋಗಲು ಎಲ್ಲಾ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ದಿವಾಕರ್ ತಿಳಿಸಿದರು.
ಇದೇ ಸಂದರ್ಭದಲ್ಲಿ
ವೆಂಕಟರಾಜು, ರಾಕೇಶ್, ಚುಂಚನಹಳ್ಳಿ ಮಲ್ಲೇಶ್,ಸೋಮಯ್ಯ ಮಲಯೂರು,ಪ್ರತೀಪ್,ತಿಪ್ಪಣ್ಣ,ರಾಮಣ್ಣ ತುಂಬಲ,ಗೋಪಾಲಕೃಷ್ಣ ಮೂರ್ತಿ ಸೇರಿದಂತೆ ಇತರರು ಭಾಗಿಯಾಗಿದ್ದರು.