ನಾಡಹಬ್ಬದಲ್ಲಿ ಚಲನಚಿತ್ರ ದಸರಾವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ:ಜೋಗಿ ಮಂಜು

ನಂದಿನಿ ಮನುಪ್ರಸಾದ್ ನಾಯಕ್

 

ಚಲನಚಿತ್ರ ದಸರಾ ರದ್ದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ….


ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ.
ಈ ನಾಡಹಬ್ಬದಲ್ಲಿ ಕನ್ನಡ ಚಲನಚಿತ್ರರಂಗಕ್ಕೆ ನೀಡಲಾಗುತ್ತಿದ್ದ ಚಲನಚಿತ್ರ ದಸರಾವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ’..

ಚಲನಚಿತ್ರ ದಸರಾವನ್ನು ರದ್ದುಪಡಿಸುವ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸಿ, ರದ್ದುಗೊಳಿಸಿ, ಈ ವರ್ಷವೇ ಚಲನಚಿತ್ರ ದಸರಾವನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಪ್ರೇಕ್ಷಕರ ಸ್ಪಂದನೆ ಕಡಿಮೆಯಾಗಿದೆ ಎಂಬ ಕಾರಣವಿದ್ದರೆ, ಅದಕ್ಕೆ ಕಾರ್ಯಕ್ರಮವನ್ನು ರದ್ದುಪಡಿಸುವುದು ಪರಿಹಾರವಲ್ಲ. ಕಾರ್ಯಕ್ರಮದ ಗುಣಮಟ್ಟ ಹೆಚ್ಚಿಸಿ, ವ್ಯಾಪಕ ಪ್ರಚಾರ ನೀಡಿ, ಕನ್ನಡದ ಹಿರಿಯ ಕಲಾವಿದರು, ಯುವ ಪ್ರತಿಭೆಗಳು, ನಿರ್ದೇಶಕರು, ತಂತ್ರಜ್ಞರು ಹಾಗೂ ಚಿತ್ರಪ್ರೇಮಿಗಳನ್ನು ಒಳಗೊಳ್ಳುವ ಮೂಲಕ ಚಲನಚಿತ್ರ ದಸರಾವನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು.
ಕನ್ನಡ ಚಿತ್ರರಂಗವು ನಮ್ಮ ನಾಡಿನ ಸಂಸ್ಕೃತಿಯ ಪ್ರಮುಖ ಭಾಗ. ಮೈಸೂರು ದಸರಾ ವೇದಿಕೆಯಲ್ಲಿ ಅದಕ್ಕೆ ಸೂಕ್ತ ಸ್ಥಾನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಸರ್ಕಾರ ಈ ನಿರ್ಧಾರವನ್ನು ಹಠಮಾರಿತನದಿಂದ ಮುಂದುವರಿಸದೆ, ಕನ್ನಡ ಚಿತ್ರರಂಗದ ಭಾವನೆಗಳಿಗೆ ಸ್ಪಂದಿಸಬೇಕು
ಚಲನಚಿತ್ರ ದಸರಾ ಉಳಿಯಲಿ.
ಕನ್ನಡ ಚಿತ್ರರಂಗ ಬೆಳೆಯಲಿ.
ಮೈಸೂರು ದಸರಾ ಇನ್ನಷ್ಟು ವೈಭವದಿಂದ ಕಂಗೊಳಿಸಲಿ ಎಂದು ಒತ್ತಾಯ…

ಜೋಗಿ ಮಂಜು
ಸಂಚಾಲಕರು
ಯುವ ಭಾರತ್ ಸಂಘಟನೆ, ಮೈಸೂರು

Leave a Reply

Your email address will not be published. Required fields are marked *