ಬೊಂಬೆ ಲೋಕವನ್ನೊಮ್ಮೆ ಸುತ್ತಿ ಬರೋಣ ಬನ್ನಿ

 

ಮೈಸೂರು:29 ಸೆಪ್ಟೆಂಬರ್ 2021

ಸ್ಪೇಷಲ್ ಸ್ಟೋರಿ : ನ@ದಿನಿ

                          ಸಿಂಗಾರದ ಬೊಂಬೆ,ವೈಯಾರದ ಬೊಂಬೆ,ಬಾಗಿ ಬಳಕುತ್ತಿರುವ ಬೊಂಬೆ, ಕುಳಿತಿರುವ ಬೊಂಬೆ,ನಿಂತಿರುವ ಬೊಂಬೆ, ನಗುತ್ತಿರುವ, ನಗಿಸುತ್ತಿರುವ ಗೊಂಬೆ,ಅಂಗೈಯಲ್ಲಿ ಹಿಡಿಯುವ ಪುಟಾಣಿ ಬೊಂಬೆಯಿಂದ ಹಿಡಿದು ಆಳೆತ್ತರದ ಸಾವಿರಾರು ಬೊಂಬೆಗಳು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಬೊಂಬೆ ಲೋಕವನ್ನೊಮ್ಮೆ ಸುತ್ತಿ ಬರೋಣ ಬನ್ನಿ.

                           ಹೌದು,ರಾಮ್ ಸನ್ಸ್ ಪ್ರತಿಷ್ಠಾನಕ್ಕೆ ಭೇಟಿ ಕೊಟ್ರೆ ಸಾಕು.ಬೊಂಬೆಗಳ ಸಾಮ್ರಾಜ್ಯವೇ ಇಲ್ಲಿ ತೆರೆದಿಡುತ್ತದೆ. ಕಳೆದ 17 ವರ್ಷದಿಂದ ಬೊಂಬೆಗಳ ಪ್ರದರ್ಶನ ಆಯೋಜನೆ‌ ಮಾಡುತ್ತಿದೆ. ಬೊಂಬೆ ಮನೆಯಲ್ಲಿ ಒಂದೇ ಸೂರಿನಡಿಯಲ್ಲಿ 
ದಸರಾ ವೈಭವ ಕಣ್ಮುಂದೆ ಕಾಣಿಸುವಂತಹ ಬೊಂಬೆಗಳು ಪ್ರದರ್ಶನಗೊಂಡಿವೆ.
ಮೈಸೂರು ಸಂಸ್ಥಾನವನ್ನ ಆಳಿದ ರಾಜಮಹಾರಾಜರ ಬೊಂಬೆಗಳು,ಪುಣ್ಯಪುರುಷರ ಬೊಂಬೆಗಳು,ದೇಶಕ್ಕೆ ಸ್ವತಂತ್ರ ತರಲು ಹೋರಾಡಿದ ಮಹಾತ್ಮರ ಬೊಂಬೆಗಳು, ವಿಶ್ವದ ಅತ್ಯಂತ ಜನಪ್ರಿಯ ಬಾರ್ಬಿ ಗೊಂಬೆ ಹೀಗೆ ವೆರೈಟಿ ವೆರೈಟಿ ಬೊಂಬೆಗಳು, ಹಬ್ಬಕ್ಕೆ ಮೆರಗು ನೀಡುವ ಎಲ್ಲಾ ರೀತಿಯ ಬೊಂಬೆಗಳನ್ನ ಕಾಣಬಹುದಾಗಿದೆ.

                         ಕಳೆದ ೧೫ ವರ್ಷಗಳಿಂದ ದಸರಾ ವೇಳೆಯಲ್ಲಿ ಈ ಬೊಂಬೆ ಪ್ರದರ್ಶನ ಮಾಡಿಕೊಂಡು ಬರುತ್ತಿದೆ. ಅದರಲ್ಲು ದಸರೆಯ ವೈಭವವನ್ನು ನೆನಪಿಸುವ ಗೊಂಬೆಗಳ ಲೋಕವೇ ಇಲ್ಲಿದೆ.ಅಂಬಾರಿ ಹೊತ್ತ ಆನೆ, ಕುದುರೆ, ಕಾಲಾಳುಗಳು ಸೇರಿದಂತೆ ಜಂಬೂಸವಾರಿಯನ್ನು ನೆನಪಿಸುವ ಗೊಂಬೆಗಳು
ಎಲ್ಲರನ್ನು ಸೆಳೆಯುತ್ತವೆ. ಅಲ್ಲದೆ ಅಂಬಾವಿಲಾಸ ಅರಮನೆ, ದೊಡ್ಡ ಗಡಿಯಾರ, ಚಿಕ್ಕಗಡಿಯಾರ ಹೀಗೆ ಸಾಕಷ್ಟು ಬಗೆಯ ಪಾರಂಪರಿಕ ಕಟ್ಟಡಗಳ ನಿಜರೂಪಗಳು ಇಲ್ಲಿ ಮೇಳೈಸುವೆ.  ಪಿಂಗಾಣಿ, ಮಣ್ಣು, ಗಾಜು, ಮರಗಳಿಂದ ತಯಾರಾದ  ಗೊಂಬೆಗಳೂ ಈ ಪ್ರದರ್ಶನದಲ್ಲಿ ಲಭ್ಯ.ಬೊಂಬೆ ಖರೀದಿಸಲೂ ಮೈಸೂರಿನಿಂದ ಮತ್ತೆ ಬೇರೇ ಬೇರೆ ರಾಜ್ಯದಿಂದ ಬಂದು ನೋಡಿ ಖರೀದಿಸುತ್ತಾರೆ.

           ‌‌     ‌‌ಬೊಂಬೆ ಮನೆಯಯಲ್ಲಿ ವಿಠಲ್ ವಾರ್ ಕರಿ,ಹಂಪಿಯಿಂದ ಪಂಢರಪುರಕ್ಕೆ ಹೋಗುತ್ತಿರುವ ದೃಶ್ಯ,75 ನೇ ಸ್ವಾತಂತ್ರ್ಯ ಹಿನ್ನಲೆ ಸ್ವಾತಂತ್ರ್ಯ ಸಂಗ್ರಾಮ ಮುದ್ರಿತ ಚಿತ್ರ,ಕ್ಯಾಲೆಂಡರ್ ದೃಶ್ಯಾವಳಿ,ಮೈಸೂರು ಮಹಾನಗರ ಪಾಲಿಕೆ ನೂರರ ಸಂಭ್ರಮ,ಹಳೆಯ ಅಠಾರಾ ಕಚೇರಿ,ಡಿಸಿ ಕಛೇರಿ 125 ನೇ ವರ್ಷದ ಸಂಭ್ರಮಾಚರಣೆ,ಸೇಂಟ್ ಫಿಲೋಮಿನಾ ಚರ್ಚಿನ ಮಾದರಿ ಈ ಬಾರೀಯ ವಿಶೇಷ ಬೊಂಬೆ ಅಂಕಣ ಅನಾವರಣಗೊಂಡಿದೆ ಎನ್ನುತ್ತಾರೆ ಪ್ರತಿಷ್ಠಾನದ ರಘು

                      ಒಟ್ಟಾರೆ ಹೇಳೋದಾದರೇ ದಸರಾ ಸಂದರ್ಭದಲ್ಲಿ ರಾಜಮನೆತನದ ಒಡೆಯರು ಅರಮನೆಯಲ್ಲಿ ಹೇಗೆ ದರ್ಬಾರ್ ಮಾಡುತ್ತಾರೋ ಅದೇ ರೀತಿಯಲ್ಲಿ ಗೊಂಬೆ ಮನೆಯಲ್ಲಿ ಗೊಂಬೆಗಳು ದರ್ಬಾರ್ ಮಾಡುತ್ತವೆ.ಆ ದರ್ಬಾರ್ ನೀವು ಕಣ್ತುಂಬಿಕೊಳ್ಳಬಹುದು ನೋಡಿ.

 

Leave a Reply

Your email address will not be published. Required fields are marked *