ಶುಭ ವೃಶ್ಚಿಕ ಲಗ್ನದಲ್ಲಿ ನಾದಬ್ರಹ್ಮ ಹಂಸಲೇಖರಿಂದ ದಸರಾ ಉದ್ಘಾಟನೆ

ನಂದಿನಿ ಮೈಸೂರು

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2023 ಕ್ಕೆ ಇಂದು ಅಧಿಕೃತ ವಾಗಿ ಚಾಲನೆ ನೀಡಲಾಯಿತು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಳ್ಳಿಯ ರಥದಲ್ಲಿ ಹಸಿರು ಬಣ್ಣದ ಸೀರೆಯುಟ್ಟು ಕುಳಿತಿರುವ ನಾಡ ಅಧಿದೇವತೆಗೆ ಪುಷ್ಪಾರ್ಚನೆಗೈಯುವುದರ ಮೂಲಕ ನಾದಬ್ರಹ್ಮ ಡಾ.ಹಂಸಲೇಖ ಅವರು 10.15 ರಿಂದ 10.36 ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನ ದಲ್ಲಿ ನೆರವೇರಿಸಲಿದರು.

ಸಂವಿಧಾನ ಪೀಠಿಕೆಯನ್ನು ನಾದಬ್ರಹ್ಮ‌
ಹಂಸಲೇಖರವರೇ ಹಾಡಿದ್ದು ವೇದಿಕೆ ಮೇಲೆ ಪ್ರಸ್ತುತ ಪಡಿಸಿದರು. ದಸರಾ ಮಹೋತ್ಸವ ಉದ್ಘಾಟನೆಗೆ ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಿಎಂ.ಸಿದ್ದರಾಮಯ್ಯ,ಡಿಸಿಎಂ ಡಿಕೆ ಶಿವಕುಮಾರ್,ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ,ಕೆಜೆ ಜಾರ್ಜ್,ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ವೇದಿಕೆ ಗಣ್ಯರು ಮೈಸೂರು ಪೇಟ ತೋಡಿಸಿ ಶಾಲು ಹೊದಿಸಿ ನಾದಬ್ರಹ್ಮ ಹಂಸಲೇಖರವರಿಗೆ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ರೂಪ ,ಸಂಸದ ಪ್ರತಾಪ್ ಸಿಂಹ,ವಿಧಾನ ಪರಿಷತ್ ಸದಸ್ಯ ಮಂಜೇಗೌಡ ,ಶಾಸಕ ಹರೀಶ್ ಗೌಡ,ತನ್ವೀರ್ ಸೇಠ್,ದರ್ಶನ್ ದ್ರುವನಾರಾಯಣ್,ಅನಿಲ್ ಚಿಕ್ಕಮಾದು,ಶ್ರೀವತ್ಸ,ರವಿಶಂಕರ್,ಹುಣಸೂರು ಶಾಸಕ ಹರೀಶ್ ಗೌಡ,ಜಿಟಿ ದೇವೇಗೌಡ, ಶಿವರಾಜು ತಂಗಡಿಗಿ ,ಡಾ.ತಿಮ್ಮಯ್ಯ,ಮರಿತಿಬ್ಬೇಗೌಡ ಸೇರಿದಂತೆ ಇತರೇ ಗಣ್ಯರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *