ಪಡುವಾರಹಳ್ಳಿ ಸ್ನೇಹ ಬಳಗದಿಂದ ದಿ¶ ಡಿ.ದೇವರಾಜು ಅರಸು ರವರ ಜಯಂತಿ ಕಾರ್ಯಕ್ರಮ

ನಂದಿನಿ ಮೈಸೂರು

ಪಡುವಾರಹಳ್ಳಿ ಸ್ನೇಹ ಬಳಗದಿಂದ ಸಾಮಾಜಿಕ ಕ್ರಾಂತಿಯ ಹರಿಕಾರ ದಿವಂಗತ. ಡಿ.ದೇವರಾಜು ಅರಸು ರವರ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮೈಸೂರಿನ ಪಡುವಾರಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ನಾಮ ಫಲಕದ ಬಳಿ ಬಳಗದವರೆಲ್ಲಾ ಒಟ್ಟುಗೂಡಿ ಡಿ.ದೇವರಾಜು ಅರಸುರವರ ಭಾವಚಿತ್ರವಿರಿಸಿ ಪುಷ್ಪನಮನ ಸಲ್ಲಿಸಿದರು.

ಇದೇ ವೇಳೆ ದಿ ಮೈಸೂರು ಕೋ ಆಪರೇಟರ್ ಬ್ಯಾಂಕ್ ಮಾಜಿ ಅಧ್ಯಕ್ಷರು, ಹಾಗೂ ಹಾಲಿ ನಿರ್ದೇಶಕರು ಊಮಾಶಂಕರ್ ,ವಕೀಲರು ಹಾಗೂ ದಿ ಮೈಸೂರು ಕೋ ಆಪರೇಟರ್ ನಿರ್ದೇಶಕರಾದ
ಪಡುವಾರಹಳ್ಳಿ ಎಂ ರಾಮಕೃಷ್ಣ ರವರು ಡಿ.ದೇವರಾಜು ಅರಸುರವರ ಕೊಡುಗೆಯನ್ನು ಸ್ಮರಿಸಿದರಲ್ಲದೇ ಯುವ ಪೀಳಿಗೆವರರೂ ಡಿ.ದೇವರಾಜು ಅರಸುರವರ ಪುಸ್ತಕ ಓದಿ ತಿಳಿದುಕೊಳ್ಳಬೇಕು,ಅವರ ಹಾದಿಯಲ್ಲಿ ಸಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈ – ಚಾ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ,ನಿರ್ದೇಶಕರು
ಪಡುವಾರಹಳ್ಳಿ ರಾಮಕೃಷ್ಣ,ಮಾಜಿ ನಗರಪಾಲಿಕೆ ಸದಸ್ಯ ಚಿಕ್ಕವೆಂಕಟ,ಜನಹಿತ ವಿವಿದ್ದೋಧ್ಯೇಶ ಸಂಘದ ಉಪಾಧ್ಯಕ್ಷರಾದ ಸಂತೋಷ್,ನಿರ್ದೇಶಕರಾದ ಕೃಷ್ಣಕುಮಾರ್, ನಿರ್ದೇಶಕರಾದ ರಾಘವ್ ಎಂ ಗೌಡ,
ವಾರ್ಡ್ 22 ಕಾಂಗ್ರೆಸ್ ಅಧ್ಯಕ್ಷ ಬಿ.ಕುಮಾರ್,ಯುವ ಮುಖಂಡರಾದ ನಿತೀನ್ ಪುಟ್ಟಸ್ವಾಮಿ,ಕಿಟ್ಟಿ,ಸುರೇಂದ್ರ ಕುಮಾರ್,ಪ್ರಶಾಂತ್ ಪಚ್ಚಿ,ನರಸಿಂಹ,ಎನ್.ಬೆಟ್ಟೇಗೌಡ,ಬಸವರಾಜು,ಕಿರಣ್ ಮತ್ತು ಬಳಗದ ಸ್ನೇಹಿತರು ಭಾಗಿಯಾಗಿದ್ದರು.

 

 

Leave a Reply

Your email address will not be published. Required fields are marked *