ರೇಣುಕಾ ಇನ್ನೊವೇಟಿವ್ ಪಿಯು ಕಾಲೇಜ್ ಟ್ರಸ್ಟಿಗಳ ಕಿತ್ತಾಟ : ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಮೈಸೂರು:24 ಡಿಸೆಂಬರ್ 2021

ರೇಣುಕಾ ಇನ್ನೋವೇಟಿವ್ ಪದವಿಪೂರ್ವ ಕಾಲೇಜು ವಿಜಯ ನಗರ ನಾಲ್ಕನೇ ಹಂತ ಇದರ ಪ್ರಾಂಶುಪಾಲರಾದ ರೇಣುಕ ಎಸ್ ಸಿ ಅವರ ಮೇಲೆ ಕೆಲವು ದಿನಗಳ ಹಿಂದೆ ಹಲ್ಲೆ ನಡೆದಿತ್ತು. ಕೊಲೆ ಬೆದರಿಕೆಯೂ ಬಂದಿತ್ತು.  ಈ ಕುರಿತು ನ್ಯಾಯಾಲಯದಲ್ಲಿ ಅವರು ದೂರು ದಾಖಲಿಸಿದ್ದರು. ನ್ಯಾಯಾಲಯದ ಆದೇಶದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದೀಗ ಉಪನಿರ್ದೇಶಕರ ಕಛೇರಿ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಇವರು ಪೊಲೀಸ್ ಆಯುಕ್ತರಲ್ಲಿ ರೇಣುಕಾ ಅವರು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಲು ಸೂಕ್ತ ಭದ್ರತೆಯನ್ನು ಕಲ್ಪಿಸಿಕೊಡುವಂತೆ ಕೋರಿದ್ದಾರೆ.

ಇಂದು ಡಿಡಿಪಿಐ ಶ್ರೀನಿವಾಸ್ ಮೂರ್ತಿ ಅವರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಅವರು ರೇಣುಕಾ ಇನ್ನೋವೇಟಿವ್ ಕಾಲೇಜ್ ಬಂದಿದ್ದೇನೆ.  ಕೆಲವು ಪೋಷಕರು ಬಂದು  ಈ ರೀತಿ ಸಮಸ್ಯೆ ಇದೆ ಅಂತ ಹೇಳಿದ್ದರು. ಹಿಂದೆಯೂ ಬಂದಿದ್ದೆ. ಪರೀಕ್ಷೆ ನಡೆಯುತ್ತಿತ್ತು.  ಈ ಸಂದರ್ಭದಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳನ್ನು ಸಂಪರ್ಕಿಸಿದೆ. ಇಲ್ಲಿ ಏನೂ ಸಮಸ್ಯೆ ಇಲ್ಲ. ನಮಗೆ ಪಾಠ ನಡೆಯುತ್ತಿದೆ. ಕೆಮೆಸ್ಟ್ರಿ ಸಮಸ್ಯೆ ಒಂದು ತೊಂದರೆ ಇದೆ. ಅದನ್ನು ಛೇಂಜ್ ಮಾಡಿ ಕೆಮೆಸ್ಟ್ರಿಯನ್ನು ಮೂರ್ನಾಲಕ್ಕು ಅವಧಿ ತಗೋತಾರೆ. ಮೂರು ಗಂಟೆ ಪಾಠ ಮಾಡುತ್ತಾರೆ ಅಂದರು. ಅದು ಬಿಟ್ಟರೆ ಇನ್ನೇನು ಇದೆಯಪ್ಪ ಅಂತ ಕೇಳಿದೆ. ಇನ್ನೇನೂ ಸಮಸ್ಯೆ ಇಲ್ಲ ಎಂದರು. ಮತ್ತೆ ಉಪನ್ಯಾಸಕರ ಸಭೆ ಕರೆದೆ. ಏನಪ್ಪ ಸಮಸ್ಯೆ ಇದೆ ಅಂತ ಹೇಳಿದೆ. ಯಾಕೆ ಒಂದೇ ದಿನ ಮೂರ್ನಾಲ್ಕು ಗಂಟೆ  ಪಾಠ ಮಾಡುತ್ತೀರಿ, ಸೈನ್ಸ್ ಗೆ ಒಂದೇ ದಿನ ಅಷ್ಟು ಪಾಠ ಮಾಡಿದರೆ ಕಷ್ಟ ಆಗತ್ತಲ್ಲ ಅಂತ ಕೇಳಿದೆ. ಅದಕ್ಕೆ ಅವರು ಪರೀಕ್ಷೆ ಬಂತಲ್ಲ, ಸಿಲೆಬಸ್ ಹಿಂದುಳಿದಿತ್ತು. ಅದಕ್ಕೆ ಆ ತರ ತಗೋತಿದ್ದೆ ಅಂದರು. ಆ ತರ ತಗೋಬೇಡಿ. ಒಂದು ದಿನದಲ್ಲಿ ಎರಡು ಗಂಟೆ ತಗೊಳಿ. ಕಂಟಿನ್ಯೂ ತಗೋಬೇಡಿ ಒಂದು ಗಂಟೆ ತಗೊಂಡು ಗ್ಯಾಪ್ ಬಿಟ್ಟು ಮತ್ತೆ ಒಂದು ಗಂಟೆ ತಗೊಳಿ ಅಂತ ಹೇಳಿದ್ದೆ, ಆವತ್ತಿನ ಸಮಸ್ಯೆ ಬಗೆಹರಿದಿತ್ತು. ನಿನ್ನೆ ಬಂದು ನಮ್ಮ ಮಕ್ಕಳಿಗೆ ತೊಂದರೆಯಾಗುತ್ತಿದೆ. ರೇಣುಕಾ ಮೇಡಂ ರಜೆ ಹಾಕಿದ್ದಾರೆ. ಪ್ರಿನ್ಸಿಪಾಲ್ ಅವರನ್ನೇ ತಗೋಬೇಕು ಅಂತ ಪೋಷಕರು ಹೇಳಿದರು. ನೀವು ಮುಂದುವರಿಸಲು ಆಗತ್ತಾ ಅಂತ ಕೇಳಿದಾಗ ಇಲ್ಲ ಆಗಲ್ಲ ಅಂತ ಹೇಳಿದರು. ರಿಸೈನ್ ಮಾಡಿದ್ದಾರೆ. ಲೆಟರ್ ಹೆಡ್ ಲ್ಲಿ ಸಹಿ ಇದೆ ಎಂದು ತಿಳಿಸಿದರು.

ಪ್ರಾಂಶುಪಾಲರಾದ ರೇಣುಕಾ ಮಾತನಾಡಿ  ಫಂಡ್ ದುರುಪಯೋಗ ಪಡಿಸಿಕೊಂಡಿದ್ದಾರೆಂದು ನನ್ನ ಮೇಲೆ ಆರೋಪ ಮಾಡಿದ್ದಾರೆ. 12ನೇ ತಾರೀಖು ಪ್ರಾಂಶುಪಾಲರ ಸ್ಥಾನಕ್ಕೆ ಮತ್ತು ಟ್ರಸ್ಟಿಗೆ ರಾಜೀನಾಮೆ ಕೊಟ್ಟಿದ್ದೇನೆಂದು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ನೀವು ಇವತ್ತು ವಿದ್ಯಾರ್ಥಿಗಳಲ್ಲಿ ಕೇಳಿ ನಾನು 22ನೇ ತಾರೀಖಿನವರೆಗೂ ಕ್ಯಾಂಪಸ್ ನಲ್ಲಿದ್ದೇನೆ. 22ನೇ ತಾರೀಖು ಕನಕದಾಸ ಜಯಂತಿಯನ್ನು ಆಚರಿಸಿದ್ದೇನೆ. ವಿದ್ಯಾರ್ಥಿಗಳ ಜೊತೆ ಫೋಟೋ ತೆಗೆದುಕೊಂಡಿದ್ದೇನೆ. ಅದರ ಟೈಮಿಂಗ್ ಇದೆ. ಸೋಫಾ ಮೇಲೆ ಕುಳಿತು ಫೋಟೋ ತೆಗೆದುಕೊಂಡಿದ್ದೇನೆ. ಎಲ್ಲ ಮಾಹಿತಿ ಇದೆ. ಇವರು ಸುಳ್ಳು ದಾಖಲೆ ಸೃಷ್ಟಿಸಿದ್ದು ನಾನು ಹೈಕೋರ್ಟ್ ಮೆಟ್ಟಿಲೇರಿದ್ದೇನೆ. ನಾನು   ಸಾಯ್ತೀನೋ ಬಿಡ್ತಿನೋ ಸುಪ್ರೀಂಕೋರ್ಟ್ ಗೆ ಹೋದರೂ ಪರವಾಗಿಲ್ಲ. ನನ್ನ ಜೊತೆ ಇರೋದು ವಿದ್ಯಾರ್ಥಿಗಳ ಪವರ್. ನನ್ನ ಬಳಿ ದುಡ್ಡಿಲ್ಲದೇ ಇರಬಹುದು. ನಾನು ಇವತ್ತು ತಾಳಿ ಮಾರಿದ್ದೇನೆ. ನಾನು ಎಂತಹ ರಾಯಲ್ ಲೈಫ್ ನ ನಡೆಸಿದ್ದೇನೆ 25 ವರ್ಷ ಎಂದರೆ ಇಂದು ನನ್ನ ಪಾಠದಿಂದ ಎಲ್ಲ ಪೋಷಕರೂ ನನ್ನ ಜೊತೆ ನಿಂತಿದ್ದಾರೆ. ನಾನು ಪಾಠದಲ್ಲಿ ಪವರ್ ಫುಲ್, ನನ್ನ ಪಾಠದ ಬಗ್ಗೆ ಮಕ್ಕಳ ಹತ್ತಿರ ಸೈನ್ ಮಾಡಿಸಿಕೊಂಡು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಅವಳು ಕ್ಲಾಸ್ ತಗೊಂಡೇ ಇಲ್ಲ ಅಂತ ಸಹಿ ಹಾಕಿಸಿಕೊಂಡಿದ್ದಾರೆ. ಈಗ ಫಂಡ್ ದುರುಪಯೋಗ ಮಾಡಿಕೊಂಡಿದ್ದೇನೆಂದು ನಾನು ಚೇಂಬರಿನಲ್ಲಿರಿಸಿದ್ದ ಆಕೃತಿ ಪೇಪರ್ ಖಾಲಿ ಪೇಪರ್ ಗಳನ್ನು ನನ್ನ ಸಹಿಯನ್ನು ಫೆಬ್ರಿಕೇಟ್  ಮಾನಿಪ್ಲುಯೇಟ್ ಮಾಡಿ ಈಗ ಏನೋನೋ ಕೋರ್ಟ್ ಗೆ ಸಬ್ ಮಿಟ್ ಮಾಡಿದ್ದಾರೆ. ಸರ್ ನನ್ನದೊಂದು ವಿನಂತಿ ಕಾಲೇಜಿನಲ್ಲಿ ಮಿಸ್ಸಾಪ್ರಿಯೇಶನ್ ಫಂಡ್ ಅಂತ ಆದರೆ ನೀವು ಡಿಪಾರ್ಟ್ ಮೆಂಟ್ ಆಡಿಟ್ ನಡೆಸಿ, ನನ್ನ ಕಡೆ ಆಡಿಟರ್ ಕೂಡ ಬೇಡ, ಅವರ ಕಡೆ ಆಡಿಟರ್ ಕೂಡ ಬೇಡ. ನಾನೇ ಏನಾದರೂ ತಪ್ಪಿತಸ್ಥೆ ಅಂತಿದ್ದರೆ ನನಗೆ ಶಿಕ್ಷೆ ಕೊಡಲಿ, ನಾನು ಸ್ವೀಕರಿಸಲು ಸಿದ್ಧಳಿದ್ದೇನೆ. ನಾನು ಇಲ್ಲಿ ನಿಂತಿರೋದು ಪಾಠಕ್ಕೆ, ರಾಜಕೀಯ ಮಾಡಲು ಅಲ್ಲ ಎಂದಿದ್ದಾರೆ.
ನನ್ನ ಪತಿ ಮತ್ತು ಶಿವಕುಮಾರ್ ಅವರು ಟ್ರಸ್ಟ್ ಡೀಡ್ ಮಾಡಿದ್ದಾರೆ. ಅಮಾಯಕ ಮಹಿಳೆಯನ್ನು ಎಲ್ಲರೂ ಸೇರಿ ಹೊಡೆದು ಆಚೆ ಹಾಕಿದ್ದಾರೆ. ನನಗೆ ಕೊಲೆ ಬೆದರಿಕೆ ಇದೆ. ಜೀವ ಬೆದರಿಕೆ ಇದೆ. ಉಪನ್ಯಾಸಕರ ಸಂಘಕ್ಕೆ ಸಾಯಂಕಾಲ ಹೋಗಿ ದೂರು ನೀಡುತ್ತೇನೆ. ನನಗೂ ಗೌರವವವಿದೆ.  ನನ್ನ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ  ಎಂದು ತಿಳಿಸಿದರು.
ಪೇರೆಂಟ್ ಪ್ರಭಾವತಿ ಮಾತನಾಡಿ ನಾವು ರೇಣುಕಾ ಮೇಡಂ ನೋಡಿ ಬಂದಿದ್ದು, ಮಕ್ಕಳನ್ನು ಒಟ್ಟಾಗಿ ಸೇರಿಸಿ ಚೆನ್ನಾಗಿ ಪಾಠ ಮಾಡುತ್ತಿದ್ದರು. ಈಗ ಯಾರೋ ಮ್ಯಾನೇಜ್ ಮೆಂಟ್ ಅಂತ ಬಂದಿದ್ದಾರೆ.  ನಮಗೆ ಅದರ ಬಗ್ಗೆ ಗೊತ್ತಿಲ್ಲ. ನಮಗೆ ರೇಣುಕಾ ಬೇಕು. ಅದಕ್ಕಾಗಿ ನಾವು ನಮ್ಮ ಮಕ್ಕಳನ್ನು 12ಕಿಮೀ ದೂರ ಇದ್ದರೂ ಸೇರಿಸಿರೋದು. ಅವರ ಟ್ರಸ್ಟ್ ಗಲಾಟೆ ನಮಗೆ ಗೊತ್ತಿಲ್ಲ. ಅವರು ಸ್ಥಾಪಕರೋ, ಉದ್ಯೋಗಿಯೋ ಮತ್ತೊಂದೋ ಅದು ವನಿತಾ ಮತ್ತು ರೇಣುಕಾ ಅವರಿಗೆ ಬಿಟ್ಟಿರೋದು.  20 ದಿನದಿಂದ ಇದೇ ವಿಷಯ ಆಗಿದೆ. ಗಟ್ಟಿ ಮಾತನಾಡಿದ್ದಕ್ಕೆ ಕೆಟ್ಟ ಪೋಷಕರಾಗಿದ್ದೇವೆ. ನಾವು ಯಾರನ್ನೂ ಒಟ್ಟುಗೂಡಿಸಿಲ್ಲ ಇಲ್ಲಿ. ವನಿತಾ ಅವರ ಬಳಿಯೂ ರೇಣುಕಾ ಅಂತ ಯಾಕೆ ಬೋರ್ಡ್ ಹಾಕಿಕೊಂಡಿದ್ದೀರಿ, ನಾವು ಅವರನ್ನು ನೋಡಿ ಸೇರಿಸಿದ್ದು ಅಂತ ಹೇಳಿದ್ದೇವೆ. ವನಿತಾ ನಮಗೆ ಬೇಕಾಗಿಲ್ಲ.  ಅವರೇನೋ ಇವರೇನೋ ನಮಗೆ ಬೇಕಾಗಿಲ್ಲ. ನಮಗೆ ಬೇಕಾಗಿರುವುದು ರೇಣುಕಾ ಅವರು ಪಾಠ ಮುಗಿಸಿ ಹೊರಡಲಿ ಎಂದರು.

ಮತ್ತೋರ್ವ ಪೋಷಕರು ಮಾತನಾಡಿ ಒಂದು ಮಕ್ಕಳು ಮನೆಗೆ ಬಂದು ಹೊಸ ಮ್ಯಾನೇಜ್ ಮೆಂಟ್ ನವರು ರೇಣುಕಾ ಮೇಡಂ ಗೆ ಹೊಡೆದಿದ್ದಾರೆ ಅಂತ   ಹೇಳಿದರು. ನಾವು ಪೋಷಕರು ಬಂದು ಕೇಳಿದಾಗ ನಮ್ಮ ಉದ್ಯೋಗಿಯಾಗಿದ್ದರು. ಅವರನ್ನು ನಾವು ತೆಗೆದಿದ್ದೇವೆ. ಅವರೀಗ ಇಲ್ಲಿಲ್ಲ ಅಂತ ಹೇಳಿದರು. ಈಗ ಅವರನ್ನು ತೆಗೆದಿದ್ದು ಸರಿ ಇಲ್ಲ. ಅಕಾಡೆಮಿಕ್ ಇಯರ್ ವರೆಗೆ ಇಟ್ಟುಕೊಳ್ಳಬೇಕಿತ್ತು. ಬೋರ್ಡ್ ರೇಣುಕಾ ಇನ್ನೋವೇಟಿವ್ ಪಿಯು ಕಾಲೇಜ್ ಅಂತ ಇದೆ. ಅದನ್ನು ನೋಡಿ ನಾವು ನಮ್ಮ ಮಕ್ಕಳನ್ನು ಸೇರಿಸಿದ್ದೇವೆ. ಈ ರೀತಿ ಮಾಡಬಾರದು ಅಂತ ಹೇಳಿದ್ದೇವೆ. ಈಗ ನನ್ನ ಮಗನನ್ನು ಟಾರ್ಗೆಟ್ ಮಾಡಿದ್ದು ಹೊರಗಡೆ ಬರುವಾಗ ಏ ನಿಲ್ಲಯ್ಯಾ ನಿನ್ನ ಬ್ಯಾಗ್ ತೋರಿಸು, ನಿನ್ನ ಬ್ಯಾಗ್ ನಲ್ಲಿ ಏನಿಟ್ಟುಕೊಂಡು ಹೋಗುತ್ತಿದ್ದೀಯಾ ಅಂತ ಪ್ರಶ್ನಿಸುತ್ತಾರಂತೆ. ನನ್ನ ಮಗನ ಸ್ನೇಹಿತನ ಬಳಿ ನನ್ನ ಮಗನ ಜೊತೆ ಮಾತಾಡಬೇಡ ಅವನು ಸರಿ ಇಲ್ಲ ಅಂತ ಹೇಳಿಕೊಟ್ಟು ಮಕ್ಕಳ ದಾರಿ ತಪ್ಪಿಸುತ್ತಿದ್ದಾರೆ. ಮಾನಸಿಕವಾಗಿ ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾರೆ. ಈಗ ಕಾಲೇಜು ಬಗ್ಗೆ ಮಾತಾಡೋದೆ, ನಮಗೇನು ಪಾಠ ನಡೆಯುತ್ತಿಲ್ಲವೆಂದು ಮಕ್ಕಳು ದೂರುತ್ತಿದ್ದಾರೆಂದರು.

Leave a Reply

Your email address will not be published. Required fields are marked *