ಮೈಸೂರು:23 ಮಾರ್ಚ್ 2022
ನಂದಿನಿ ಮೈಸೂರು
ನಗರ್ಲೆ ಮಹದೇವಸ್ವಾಮಿ ಕೊಲೆಯಾಗಿ 3 ತಿಂಗಳಾದರೂ ಕಾಂಗ್ರೆಸ್ ಮುಖಂಡ ನಂಜುಂಡನಾಯ್ಕ,ಸರ್ವೇಶ ಇಬ್ಬರು ಕೊಲೆಗಾರರನ್ನು ಇನ್ನೂ ಬಂಧಿಸಿಲ್ಲ.
ಕುಟುಂಬವನ್ನೇ ಸರ್ವನಾಶ ಮಾಡ್ತಾವೇ ಅಂತ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ರಾಧಿಕ ಕಣ್ಣೀರು ಹಾಕಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೋಕು , ಬಿಳಿಗೆರೆ ಹೋಬಳಿ , ನಗರ್ಲೆ ಗ್ರಾಮದಲ್ಲಿ ವಾಸವಾಗಿದ್ದ ಮಹದೇವನಾಯ್ಕ ರವರ ಮಗನಾದ ಮಹದೇವಸ್ವಾಮಿ ( 32 ) ರವರ ಮೇಲೆ ದಿ. 31-12-2021 ರಂದು ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮುಖಂಡ ಸರ್ವೇಶ್ ದೊಡ್ಡಪ್ಪ ನಂಜುಂಡನಾಯ್ಕ ಹಾಗೂ ಅವರ ಮಕ್ಕಳಾದ ಪ್ರಕಾಶ,ಸುರೇಶ,ಶಿವು ಹಲ್ಲೆ ಮಾಡಿದ್ದು ,ಇವರನ್ನು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು, ಜೆ.ಎಸ್.ಎಸ್.ಆಸ್ಪತ್ರೆಗೆ ಸೇರಿಸಿದ್ದೇವು.ಚಿಕಿತ್ಸೆ ಫಲಕಾರಿಯಾಗದೆ ಇರುವ ಕಾರಣ ಮಹದೇವಸ್ವಾಮಿ 2 ಜನವರಿ 2022 ರಂದು ಮರಣ ಹೊಂದಿರುತ್ತಾರೆ . ಸರ್ವೇಶ್ ರವರು ಮತ್ತು ನಂಜುಂಡನಾಯ್ಕ ತಲೆಮರೆಸಿಕೊಂಡಿದ್ದಾರೆ. ಪೋಲಿಸರು ಕೊಲೆಗಾರರನ್ನು ಪತ್ತೆ ಹಚ್ಚಿ , ಕೊಲೆಯಾದ ವ್ಯಕ್ತಿ ಹಾಗೂ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ನಾಗೇಶ್, ಸಿದ್ದರಾಜು, ಪ್ರಮೀಳಾ ಹಾಜರಿದ್ದರು.