ದ್ವಿಚಕ್ರ ವಾಹನ ಕಳ್ಳತನ ಆರೋಪಿ ಬಂಧನ, 1,35,000 ರೂ ಮೌಲ್ಯದ ಮೂರು ದ್ವಿಚಕ್ರ ವಾಹನಗಳ ವಶಪಡಿಸಿಕೊಂಡ ಕುವೆಂಪುನಗರ ಪೋಲಿಸರು

ಮೈಸೂರು:14 ನವೆಂಬರ್ 2021

ನಂದಿನಿ

ಕುವೆಂಪುನಗರ ಪೊಲೀಸರು ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧಿಸಿ 1,35,000 ರೂ ಮೌಲ್ಯದ ಮೂರು ದ್ವಿಚಕ್ರ ವಾಹನಗಳ ವಶಪಡಿಸಿಕೊಂಡಿದ್ದಾರೆ.

ನ. 10ರಂದು ರಾತ್ರಿ ಸಮಯದಲ್ಲಿ ಕುವೆಂಪುನಗರ 3 ನೇ ಹಂತ ಎಲ್ಐಜಿ 119 ರ ಮನೆಯ ಮುಂಭಾಗ ಬೀಗ ಹಾಕಿ ನಿಲ್ಲಿಸಿದ್ದ ಹೀರೊ ಪ್ಲೆಷರ್ ಸ್ಕೂಟರ್‌ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು , ಇದರ ಸಂಭಂದ ಕುವೆಂಪು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ದಿನ ಅಂದರೆ ದಿನಾಂಕ : 14/11/2021 ರಂದು ಠಾಣಾ ಅಪರಾಧ ವಿಭಾಗದ ಸಿಬ್ಬಂದಿಯವರು ಪ್ರಕರಣದ ಮಾಲು ಮತ್ತು ಆರೋಪಿ ಪತ್ತೆಕಾರ್ಯದಲ್ಲಿದ್ದಾಗ ಬಾತ್ಮೀದಾರರ ಮಾಹಿತಿ ಮೇರೆಗೆ , ಉದಯಗಿರಿ ಮಹದೇವಪುರ ಮುಖ್ಯರಸ್ತೆಯಲ್ಲಿ ಸ್ಕೂಟರ್ ಮೇಲೆ ವೀಲಿಂಗ್ ಮಾಡಿಕೊಂಡು ಬರುತ್ತಿದ್ದ ಆರೋಪಿಯಾದ ಗೌಸ್ ಆಹಮ್ಮದ್ ಬಿನ್ ಲೇಟ್ ನಾಸಿರ್ ಅಹಮ್ಮದ್ , 19 ವರ್ಷ , ಎಂಬಾತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರ ಮಾಡಿದಾಗ , ಕಳ್ಳತನ ಮಾಡಿರುವ ಸ್ಕೂಟರ್ ಎಂದು ತಿಳಿದು ಬಂದ ಮೇರೆಗೆ , ಆತನನ್ನು ದಸ್ತಗಿರಿಮಾಡಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕುವೆಂಪುನಗರ ಠಾಣೆಯ ಎರಡು ಪ್ರಕರಣಗಳು ಮತ್ತು ಜಯಪುರ ಠಾಣೆಯ ಒಂದು ಪ್ರಕರಣ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿದೆ.

ಸದರಿ ಆರೋಪಿತರ ಪತ್ತೆ ಕಾರ್ಯದಲ್ಲಿ ಸಂಚಾರ ಮತ್ತು ಅಪರಾಧ ವಿಭಾಗದ ಆಯುಕ್ತರು ಗೀತಾ ರವರ ಮಾರ್ಗದರ್ಶನದಲ್ಲಿ , ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯಕ್ತರಾದ  ಎಸ್ ಪೂರ್ಣಚಂದ್ರ ತೇಜಸ್ವಿ ರವರ ಉಸ್ತುವಾರಿಯಲ್ಲಿ , ಕುವೆಂಪುನಗರ ಪೊಲೀಸ್ ಠಾಣೆಯ ಪಿ.ಐ ರವರಾದ  ಷಣ್ಮುಗ ವರ್ಮ ಕೆ ,  ರವರಾದ ಇರ್ಷಾದ್ ಸಿ , CEN ಪಿಎಸ್‌ಐ ರವರಾದ ಅನಿಲ್ ಕುಮಾರ್ , ಪ್ರೊಪಿಎಸ್‌ಐ ರವರಾದ ಗಂಗಾಧರ್‌ , ಜ್ಯೋತ್ಸಾ ರಾಜ್ , ಎಎಸ್‌ಐ ರವರಾದ ಮಹದೇವ , ಹಾಗೂ ಅಪರಾಧ ವಿಭಾಗದ ಸಿಬ್ಬಂದಿಯವರಾದ ಮಂಜುನಾಥ , ಯೋಗೇಶ , ಹಜರತ್ , ಪುಟ್ಟಪ್ಪ , ನಾಗೇಶ ರವರುಗಳು ಭಾಗಿಯಾಗಿದ್ದರು.

ಈ ಪತ್ತೆ ಕಾರ್ಯಕ್ಕೆ ಪೊಲೀಸ್ ಆಯುಕ್ತರಾದ  ಡಾ . ಚಂದ್ರಗುಪ್ತ , ಕಾನೂನು ಸುವ್ಯವಸ್ಥೆ ವಿಭಾಗದ ಪ್ರದೀಪ್ ಗುಂಟಿ  ರವರು ಪ್ರಶಂಶಿಸಿರುತ್ತಾರೆ.

Leave a Reply

Your email address will not be published. Required fields are marked *