ನಾನು ಲಸಿಕೆ ಪಡೆದಿರುತ್ತೇನೆ ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿದ ನಳಿನ್

 

ಮೈಸೂರು:21 ಅಕ್ಟೋಬರ್ 2021

ನ@ದಿನಿ

ಚಾಮರಾಜ ಕ್ಷೇತ್ರದ ನಜರ್ಬಾದ್ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ 100 ಕೋಟಿ ಕೋವಿಡ್ ಲಸಿಕೆ ನಮ್ಮ ದೇಶದಲ್ಲಿ ನೀಡಿದ ವಿಶ್ವ ದಾಖಲೆ ಘೋಷಣೆಯಾದ ಈ ದಿನದಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರ ಕಾರಿನ ಮುಂಭಾಗದಲ್ಲಿ “ನಾನು ಲಸಿಕೆ ಪಡೆದಿರುತ್ತೇನೆ, ಕಾರಣಕರ್ತದರಾದ ದೇಶದ ಹೆಮ್ಮೆಯ ಪ್ರಧಾನಿ ಮಾನ್ಯ ಶ್ರೀ ನರೇಂದ್ರಮೋದಿ ಜೀ ಅವರಿಗೆ ಧನ್ಯವಾದಗಳು” ಸ್ಟಿಕರ್ ಅನ್ನು ಅಂಟಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಚಿವರಾದ ನಾರಾಯಣ್ ಗೌಡ ರವರು, ಚಾಮರಾಜ ಕ್ಷೇತ್ರದ ಶಾಸಕರಾದ ಎಲ್ ನಾಗೇಂದ್ರ, ಮೈಸೂರು ನಗರ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ರಾದ ಶ್ರೀವತ್ಸ ರವರು, ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ, ನಗರ ಪಾಲಿಕೆ ಸದಸ್ಯ ಸತೀಶ್, ಶಿವಕುಮಾರ್, ಸುಬ್ಬಯ್ಯ, ಭಾರತೀಯ ಜನತಾ ಪಾರ್ಟಿಯ ವಕ್ತಾರರಾದ ಎಂ ಜಿ ಮಹೇಶ್ ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *