ನಾನಿದ್ದೇನೆ ಭಯಪಡಬೇಡಿ ಕೋವಿಡ್ 19 ವ್ಯಾಕ್ಸೀನ್ ಸಿರಿಂಜ್ ಹಿಡಿದು ಧರೆಗಿಳಿದ ಗಣೇಶ್

61 Views

ಮೈಸೂರು:4 ಸೆಪ್ಟೆಂಬರ್ 2021

ಸ್ಪೇಷಲ್ ಸ್ಟೋರಿ:ನ@ದಿನಿ

ಕೋರೋನಾ ಸ್ಪೀಡ್ ನೋಡಿದ್ರೇ ಭಯ ಆಗ್ತೀದೆ.ಕೋರೋನಾ ಕಂಟ್ರೋಲ್ ಮಾಡೋಕೆ ಆ ದೇವರೇ ಧರೆಗಿಳಿದು ಬರಬೇಕು ಅನ್ನೋ ಮಾತುಗಳು ಕೇಳಿ ಬರ್ತ್ತೀದೆ.ಅದನ್ನ ಕೇಳಿಸಿಕೊಂಡ ಗಾಡ್ ಗಣೇಶ ಕೋರೋನಾ ವ್ಯಾಕ್ಸೀನ್ ಸೂಜಿ ಹಿಡಿದುಕೊಂಡು ಬಂದೇ ಬಿಡೋದಾ.

ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ಕೋವಿಡ್ ರೋಗಿಗೆ ಸ್ವತಃ ಗಜಮುಖನೇ ನಾನಿದ್ದೇನೆ ಭಯ ಪಡಬೇಡಿ ಮಾಸ್ಕ್ ಹಾಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಕ್ಸೀನ್ ಹಾಕಿಸಿಕೊಳ್ಳಿ ಎಂದು ಸೂಜಿ ಹಿಡಿದು ಧರೆಗಿಳಿದಿರುವಂತೆ ವಿದ್ಯಾರ್ಥಿಯೋರ್ವ ತನ್ನ ಕೈ ಚಳಕದ ಮೂಲಕ ಕೋರೋನಾ ಜಾಗೃತಿ ಮೂಡಿಸಿದ್ದಾರೆ. ಸೆಳೆಯುತ್ತಿದೆ.


ಹೌದು ಮೈಸೂರಿನ ಅಶೋಕ ರಸ್ತೆಯಲ್ಲಿರುವ ಕುಂಬಾರಗೇರಿಯ ಶ್ರೀವಿದ್ಯಾಗಣಪತಿ ಕಲಾ ನಿಲಯದಲ್ಲಿರುವ ಕುಮಾರ್ ಶೋಭಾ ದಂಪತಿ ಪುತ್ರ18 ವರ್ಷದ ಯಶವಂತ್ ಎಂಬ ವಿದ್ಯಾರ್ಥಿ ಕೋರೋನಾ ವ್ಯಾಕ್ಸೀನ್ ಗಣಪತಿ ತಯಾರಿಸಿದ್ದಾರೆ.ಅದಲ್ಲದೇ ಡಾ.ರಾಜ್ ಕುಮಾರ್ ನಟನೆಯ
ಎರಡು ಕನಸು ಚಿತ್ರದಲ್ಲಿ ರಾಜ್ ಕುಮಾರ್ ಬಜಾಜ್ ನಲ್ಲಿ ಓಡಾಡಿದ ಗಣೇಶ ಮೂರ್ತಿ,
ಅಣ್ಣ ಬಾಂಡ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಬೈಕ್ ಮೇಲೆ ಕುಳಿತಿರುವ ಗಣೇಶ್,ಜೀಮ್ ಗಣೇಶ,ಅಮ್ಮ ಗೌರಿ ಲಾಡು ತಯಾರಿಸುತ್ತಿದ್ದರೇ ಅಮ್ಮನನ್ನ ಒಂದು ಲಾಡು ಕೊಡಿ ಎಂದು ಮುದ್ದುಮಾಡುತ್ತಿರುವ ಆಕೃತಿಯ ಗಣೇಶ,ಯಾವುದೇ ಯೋಚನೆ ಇಲ್ಲದೇ
ಉಯ್ಯಾಲೆಯ ಮೇಲೆ ಆಯಾಗಿ ಕುಳಿತಿರೋ ಗಣೇಶ್,ಗಣೇಶನ ಜೊತೆ ಜಾಲೀ ರೈಡ್ ಹೊರಟ ಮೂಶಿಕ ಗಣೇಶ್ ,ಪಂಡುರಂಗ ಅವತಾರದ ಗಣೇಶ,ಕೃಷ್ಣನ ಗಣೇಶ,ಆಮೆಯ ಮೇಲೆ ಹೊರಟ ಗಣೇಶ್,,ಅಪ್ಪನ ಕೈಯಲ್ಲಿ ಮುದ್ದಾಗಿ ಮಲಗಿರುವ ಗಣೇಶ,ಡಮರುಗ ಬಾರಿಸುತ್ತಿರುವ ಶೈಲಿಯ ಗಣಪತಿ,ಆನೆಯ ಮೇಲೆ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರೆಗೆ ಆನೆ ಏರಿ ಹೊರಟ ಮಾವುತ ಗಣಪತಿ ಸೇರಿದಂತೆ ಪ್ರಸ್ತುತ ಯುವ ಸಮೂಹಕ್ಕೆ ಇಷ್ಟವಾಗುವ ಗಣಪತಿ ತಯಾರಿಸಿ ಗ್ರಾಹಕರನ್ನ ಕೈ ಬೀಸಿ ಕರೆಯುತ್ತಿದ್ದಾರೆ.

ಕಲಾವಿದ ಯಶವಂತ್ ಸುದೀಪ್ ಅಭಿಮಾನಿಯಾಗಿದ್ದು
ಸುದೀಪ್ ಹುಟ್ಟು ಹಬ್ಬ ಹಿನ್ನಲೆ ವಿಕ್ರಾಂತ್ ರೋಣ ಗಣಪತಿ ತಯಾರುಮಾಡಿದ್ದಾರೆ. ಕಳೆದ 5 ವರ್ಷಗಳಿಂದ ಗಣೇಶನ ಮೂರ್ತಿ ತಯಾರು ಮಾಡುತ್ತಿದ್ದೇನೆ.ತಂದೆಯಿಂದ ಕಲಿತ ಕಲೆ ಇದಾಗಿದೆ.ಅಣ್ಣ ರವಿಕುಮಾರ್ ರವರು ನನಗೆ ಗಣಪತಿ ತಯಾರಿ ಮಾಡೋದನ್ನ ಹೇಳಿಕೊಟ್ಟಿದ್ದಾರೆ.ನನ್ನ ತಾಯಿ ಶೋಭಾರವರು ಮೂರ್ತಿಗೆ ಕಣ್ಣು ಬರೆಯುವುದನ್ನ ಹೇಳಿಕೊಟ್ಟಿದ್ದಾರೆ ಎನ್ನುತ್ತಾರೆ ಯಶವಂತ.

ಕೋರೋನಾ ಜಾಗೃತಿ ಮೂಡಿಸುತ್ತಿರುವ ಕಲಾವಿದರ ಬದುಕಿನ ಮೇಲೂ ಸಂಕಷ್ಟದ ಸೋಂಕು ಆಚರಿಸಿದೆ ಎನ್ನುತ್ತಾರೆ ಕಲಾವಿಕ ಮಹೇಶ್ ಹಾಗೂ ಶೋಭಾ ದಂಪತಿಗಳು.

ಸಂಸ್ಕೃತಿ ಪರಂಪರೆ,ಸಂಸ್ಕಾರ,ಗುರು ಹಿರಿಯರ ಮಾರ್ಗದರ್ಶನದಿಂದ ಹಬ್ಬ ಮತ್ತು ವಿಶೇಷ ದಿನ ಆಚರಿಸಿದ್ರೇ, ವಿಘ್ನ ವಿನಾಶಕನ ಪೂಜಿಸಿದ್ರೇ ಕೋರೋನಾದಂತಹ ಸಾಂಕ್ರಾಮಿಕ ರೋಗ ಬರೋದಿಲ್ಲ ಅಂತಿದ್ದಾರೆ ಗಣೇಶ ಖರೀದಿಸಿದ ಗ್ರಾಹಕರು.

ಒಟ್ಟಾರೆ ಹೇಳುವುದಾದರೆ
ಈ ಜಾಲ ನಂದೇ ಈ ಗಾಳ ನಂದೇ ಈ ಕಾಲ ನಂದೇ ಅಂತ ಹಾಡು ಹೇಳಿಕೊಂಡು ಬರುತ್ತಿದ್ದವ ಗಣೇಶ್ ಈ ಬಾರಿ ವ್ಯಾಕ್ಸೀನ್ ಸಿರಿಂಜ್ ಹಿಡಿದು ಎಂಟ್ರಿ ಕೊಟ್ಟಿದ್ದಾಗಿದೆ.ಇನ್ನೇನಿದ್ರೂ ಸಂಹಾರ ಒಂದೇ ಬಾಕಿ.

 

Leave a Reply

Your email address will not be published.