ಅ15 ರಂದು 2:45 – 3 :15ರ ಶುಭ ಲಗ್ನದಲ್ಲಿ ಜಂಬೂ ಸವಾರಿ,6 ಕೋಟಿಯಲ್ಲಿ ಸರಳ ದಸರಾ:ಎಸ್.ಟಿ.ಸೋಮಶೇಖರ್

 

ಬೆಂಗಳೂರು:3 ಸೆಪ್ಟೆಂಬರ್ 2021

ನ@ದಿನಿ

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2021 ಆ.7 ರಿಂದ 15 ರವರಗೆ ನಡೆಯಲಿರುವ ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು 6 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಆ.7 ರಂದು ಬೆ.8:15 ರಿಂದ 8:45 ಶುಭ ಲಗ್ನದಲ್ಲಿ ದಸರಾ ಉದ್ಘಾಟನೆ ಸಮಯ ನಿಗಧಿಯಾಗಿದೆ.ಅ.15 ರಂದು 2:45 ನಿಂದ 3 :15 ಜಂಬೂ ಸವಾರಿ ನಡೆಯಲಿದೆ. ಮುಖ್ಯಮಂತ್ರಿಗಳು ಎಲ್ಲಾ ವಿಶ್ವಾಸ ತೆಗೆದುಕೊಂಡು ಉದ್ಘಾಟಕರು ಯಾರು ಎಂದು ತಿಳಿಸಲಿದ್ದಾರೆ.

ಕಳೆದ ಬಾರಿ 8 ಕೋಟಿ 9 ಲಕ್ಷ ಬಾಕಿ ಇತ್ತು.ಬಾಕಿ ಹಣವನ್ನ ಸಿಎಂ ಪೂರ್ಣವಾಗಿ ನೀಡಿದ್ದಾರೆ.ದಸರಾಕ್ಕೆ 6 ಕೋಟಿ ಹಣ ಘೋಷಣೆ ಮಾಡಿದ್ದಾರೆ. ಚಾಮರಾಜನಗರ, ಮೈಸೂರು, ಶ್ರೀರಂಗಪಟ್ಟಣಕ್ಕೆ ಕಳೆದ ವರ್ಷ ಏನು ಹಣಕೊಡುತ್ತಿದ್ದೇವೂ ಅಷ್ಟೇ ಕೊಡೋದು.ನಾನು 5 ಕೋಟಿ ಕೇಳಿದ್ದೇ ಸಿಎಂ ಇನ್ನೂ ಒಂದು ಕೋಟಿ ಅಂದರೇ 6 ಕೋಟಿ ಹಣ ನೀಡುವುದಾಗಿ ತಿಳಿಸಿದ್ದಾರೆ.ಸರಳ,ಸಾಂಪ್ರದಾಯಿಕವಾಗಿ ಆಚರಿಸುವಂತೆ ತಿಳಿಸಿದ್ದರು.ಕಳೆದ ಬಾರಿ 150 ಜನರಿಗೆ ಅವಕಾಶ ಇತ್ತು.ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 50 ಜನ ,ಜಂಬೂ ಸವಾರಿಗೆ 300 ಜನಕ್ಕೆ ಅವಕಾಶ ಇತ್ತು.ಈ ಬಾರೀ ಹೆಚ್ಚಿನ ಜನರಿಗೆ ಅವಕಾಶ ಕೊಡುವಂತೆ ಮನವಿ ಮಾಡಿದ್ದೇನೆ.ಮೂರನೇ ಅಲೆ ಇರೋದ್ರಿಂದ ಸೆ.20 ರ ನಂತರ ಹೆಚ್ಚಿನ ಅವಕಾಶ ನೀಡೋದೋ ಬಿಡೋದೋ ಎಂಬುದನ್ನ ನಿರ್ಧಾರ ಮಾಡಲಾಗುತ್ತದೆ.ಮೈಸೂರು ದಸರಾಗೆ ದೀಪಾಲಂಕಾರವೇ ಕಳೆ.ಕಾರ್ಯಕಾರಿ ಸಮಿತಿಯಿಂದ ಕಾರ್ಯಕ್ರಮ ನಡೆಯಲಿದೆ ಎಂದರು.

Leave a Reply

Your email address will not be published. Required fields are marked *