“ಕರೊನಾಸರಣಿ” ಪುಸ್ತಕ ಲೋಕಾರ್ಪಣೆ

ಮೈಸೂರು:31 ಡಿಸೆಂಬರ್ 2021

ನಂದಿನಿ

ಒಂದಷ್ಟು ಐಟಿ ಹೈಕ್ಳುಗಳು ಕರೊನಾ ಕಾಲದಲ್ಲಿ ವರ್ಕ್ ಫ್ರಮ್ ಹೋಮ್ ಜೊತೆಗೆ ವರ್ಕ್ ಫ್ರಮ್ ಹಾರ್ಟ್ ಕೂಡಾ ಮಾಡಿದ್ದಾರೆ ಅಂದ್ರೆ ತಪ್ಪಾಗಲ್ಲ! ಅವರ ಈ ಸಣ್ಣ ಪ್ರಯತ್ನ ದ ಪ್ರತಿಯೇ ಈ “ಕರೊನಾಸರಣಿ” ಪುಸ್ತಕ.

ಗೆಳೆಯರೇ ಗೀಚಿದ ಪದ, ಪದ್ಯ, ಕಥೆ, ಕಲೆ ಗಳ ಸಂಕಲನದ ಸಮ್ಮ್ ಈಸ್ #ಕರೋನಾಸರಣಿ ಅಂತಾರೆ ಈ ಪುಸ್ತಕದ ಬರಹಗಾರರಾದ ‘ಮಧು ಕೆ.ಪಿ., ಮೃತ್ಯುಂಜಯ ಕೌಟಿ, ವಿಜಯ್ ಮತ್ತು ಮಧುರ ಎಂ.

ಕರೋನಾಸರಣಿ ಪುಸ್ತಕ ಬಿಡುಗಡೆ ಸಮಾರಂಭವು, ಅಕ್ಷಯ ಅಹಾರ ಫೌಂಡೇಷನ್ ಕಚೇರಿಯಲ್ಲಿ, ಸಮಾಜ ಸೇವಕ, ಅನ್ನದಾತ ರಾಜೇಂದ್ರ ಅವರಿಂದ ನೆರವೇರಿತು. ಬರಹಗಾರರು ಮತ್ತವರ ಹಿತೈಷಿಗಳು ಉಪಸ್ಥಿತರಿದ್ದರು.

ಈ ಪುಸ್ತಕವು ಸಣ್ಣ ಟಿಪ್ಪಣಿಗಳು, ಕವನಗಳು, ಕಥೆಗಳು, ಸಿನಿಮಾ ವಿಮರ್ಷೆಗಳು ಮತ್ತು ಚಿತ್ರಕಲೆಗಳ ವಿಭಿನ್ನ ಸಂಕಲನವಾಗಿದ್ದು, ನಿಮ್ಮನ್ನು ರಂಜಿಸುವ ಪ್ರಯತ್ನವಷ್ಟೆ! ನಿಮ್ಮ ಆಶಿರ್ವಾದ ಮತ್ತು ಬೆಂಬಲ ಬರಹಗಾರರಿಗೆ ಪ್ರೋತ್ಸಾಹ!

Leave a Reply

Your email address will not be published. Required fields are marked *