ನಂದಿನಿ ಮೈಸೂರು
ಸುತ್ತೂರು:ಕರ್ನಾಟಕ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯರವರು ತಮಗೆ ಮತ ಹಾಕಿ ಗೆಲ್ಲಿಸಿದ ವರುಣಾ ಕ್ಷೇತ್ರದ ಮತದಾರಿಗೆ ಕೃತಕ್ಷತಾ ಕಾರ್ಯಕ್ರಮ ಏರ್ಪಡಿಸಿದ್ದು ಕಾರ್ಯಕ್ರಮದ ಸಿದ್ದತೆಗಳು ಭರದಿಂದ ಸಾಗುತ್ತಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಸುತ್ತೂರು ಬೋರೆಯಲ್ಲಿ ಜೂ.10 ರಂದು ಕೃತಜ್ಞತಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಿಎಂ ಸ್ಥಾನಪಡೆದು ಮೊದಲ ಬಾರಿಗೆ ಮೈಸೂರು ಜಿಲ್ಲೆಗೆ ಆಗಮಿಸುತ್ತಿರುವ ಸಿದ್ದರಾಮಯ್ಯರವರಿಗೆ ಬೃಹತ್ ವೇದಿಕೆ ಸಿದ್ದವಾಗಿದೆ.
ವರುಣ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾರಂಭದ ಸಿದ್ಧತೆಯನ್ನು ಮಾಜಿ ಶಾಸಕ ಕಳಲೆ ಕೇಶವಮೂರ್ತಿ., ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಮುದ್ದೇಗೌಡ, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹಾಡ್ಯ ರಂಗಸ್ವಾಮಿ, ಮಹದೇವು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಿಳಿಗೆರೆ ಪುಟ್ಟಸ್ವಾಮಿ. ಪುಟ್ಟಲಿಂಗ ಶೆಟ್ಟಿ. ಪಿಡಬ್ಲ್ಯೂ ಇಲಾಖೆಯ. ಅಧಿಕಾರಿಗಳಾದ. ವಸಂತ. ನವೀನ್ ಕುಮಾರ್
ಹಾಗೂ ವರುಣ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಸಿದ್ದತೆ ಪರಿಶೀಲಿಸಿದರು.
ಕೃತಜ್ಞತಾ ಸಮಾರಂಭಕ್ಕೆ ಮೈಸೂರು, ಮಂಡ್ಯ,ಚಾಮರಾಜನಗರ ಸೇರಿದಂತೆ ಸುಮಾರು 20 ಸಾವಿರ ಜನರು ಬರುವ ನಿರೀಕ್ಷೇ ಇದೆ.ಬೃಹತ್ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ನಂತರ ಸಮಾರಂಭ ಉದ್ದೇಶಿಸಿ ಮಾತನಾಡಲಿದ್ದಾರೆ.