ಚಿತ್ರದುರ್ಗ ಮುರುಘಾ ಮಠದಲ್ಲಿದ್ದ ಮುರುಘಾ ಸ್ವಾಮಿ ಫೋಟೋ ಕಳವು

ಚಿತ್ರದುರ್ಗ ಮುರುಘಾ ಮಠದಲ್ಲಿದ್ದ ಮುರುಘಾ ಸ್ವಾಮಿ ಫೋಟೋಗಳ ಕಳವಾದ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನೂ ಮಠದ ರಾಜಾಂಗಣದಲ್ಲಿದ್ದ 47 ಪೋಟೋಗಳು ರಾತ್ರೋ ರಾತ್ರಿ ಕಳವಾಗಿದ್ದು ಬಸವಶ್ರೀ ಪ್ರಶಸ್ತಿ ಪ್ರಧಾನ ಮಾಡಿದ್ದ ವೇಳೆಯ ಗಣ್ಯರ ಫೋಟೋಗಳು ಕಳುವಾಗಿದ್ದು ಈ ಕುರಿತು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು
SJM ವಿದ್ಯಾಪೀಠದ ಕಾರ್ಯದರ್ಶಿ ವಸ್ತ್ರಮಠ ಅವರು ಠಾಣೆಗೆ ದೂರು ನೀಡಿದ್ದು ಮುರುಘಾ ಸ್ವಾಮಿ ಫೋಟೊ ಕಳವು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ
ಅಣ್ಣಾ ಹಜಾರೆ, ದಲಾಯಿಲಾಮ, ಮೇಧಾಪಾಟ್ಕರ್, ಸ್ವಾಮಿ ಅಗ್ನಿವೇಶ್, ಪಿಟಿ ಉಷಾ , ನಾರಾಯಣಮೂರ್ತಿ, ಬಿಎಸ್ವೈ, ಅಮತ್ ಶಾ, ದೇವೇಗೌಡರು ಸೇರಿದಂತೆ ಹಲವು ರಾಜಕೀಯ ನಾಯಕರ ಜೊತೆ ಮುರುಘಾ ಸ್ವಾಮಿ ಇದ್ದ ಫೋಟೋಗಳು ಕಳುವಾಗಿದ್ದು
ಮಠದ ಕೆಲ ನೌಕರರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು ಶರಣ ಸಂಸ್ಕೃತಿ ಉತ್ಸವದ ವೇಳೆಯೇ ಮುರುಘಾ ಸ್ವಾಮಿ ಫೋಟೋ ಕಳವುವಾಗಿದ್ದು
ವಸ್ತ್ರಮಠ್ ನೀಡಿದ ದೂರು ಆಧರಿಸಿ ಪೋಲೀಸರು FIR ದಾಖಲಿಸಿದ್ದಾರೆ. ಮಠದ ಗೋಡೆಗೆ ಹಾಕಿದ್ದ ಇತರೆ ಫೋಟೋಗಳು ಕಳ್ಳತನವಾಗಿದ್ದು ಫೋಟೋಗಳನ್ನ ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ಕುರಿತು ಚಿತ್ರದುರ್ಗದ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *