ಸರಗಳ್ಳರನ್ನ ಬಂಧಿಸಿದ ಕುವೆಂಪುನಗರ ಪೋಲೀಸರು

ಮೈಸೂರು:21 ಜನವರಿ 2022
ನಂದಿನಿ ಮೈಸೂರು

ಸರಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿ ಒಟ್ಟು 95 ಗ್ರಾಂ ತೂಕದ 4,27,500 ರೂ ಮೌಲ್ಯದ ಮೂರು ಚಿನ್ನದ ಸರ ,ಕೃತ್ಯಕ್ಕೆ ಬಳಸಿದ್ದ 50,000 ರೂ ಮೌಲ್ಯದ ಒಂದು ಸ್ಕೂಟರ್ ಅನ್ನು ಕುವೆಂಪು ನಗರ ಪೋಲೀಸರು ವಶಪಡಿಸಿಕೊಂಡಿದ್ದಾರೆ.

ರಾಮಕೃಷ್ಣನಗರದ ಐ ಬ್ಲಾಕ್ ಪಾರ್ಕ್ ಬಳಿ ಇರುವ , ಕ್ರಾಸ್ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ , ಹಿಂಭಾಗದಿಂದ ನಡೆದು ಕೊಂಡು ಬಂದ ಒಬ್ಬ ವ್ಯಕ್ತಿ ಕುತ್ತಿಗೆಯಲ್ಲಿದ್ದ ಸುಮಾರು 1,80,000 ರೂ ಮೌಲ್ಯದ 40 ಗ್ರಾಂ ತೂಕದ ಹಗ್ಗದ ಮಾದರಿಯ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದ ಆರೋಪಿಗಳಾದ ಎ l ) ಮಹದೇವಸ್ವಾಮಿ @ ತಮ್ಮಯ್ಯ ಬಿನ್ ಲೇಟ್ ರಂಗಸ್ವಾಮಿ ( 34 ವರ್ಷ) ,ಎ 2 ) ಜನಾರ್ಧನ್ @ ಜಾನು ಬಿನ್ ಮಹದೇವಯ್ಯ , (30 ವರ್ಷ )ಎಂಬುವವರುಗಳನ್ನು ವಶಕ್ಕೆ ಪಡೆದು , ಠಾಣೆಗೆ ಕರೆತಂದು ಹಾಜರುಪಡಿಸಿದ್ದು , ಸದರಿ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಕುವೆಂಪನಗರ ಠಾಣೆಯ ಎರಡು ಪ್ರಕರಣಗಳು ಹಾಗೂ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಒಂದು ಪ್ರಕರಣ ಒಟ್ಟು 3 ಸರಗಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತೆ . ಪ್ರಕರಣದಲ್ಲಿ ಒಟ್ಟು 95 ಗ್ರಾಂ ತೂಕದ 4 ಲಕ್ಷದ , 27 ಸಾವಿರದ 5 ನೂರು ( 4,27,500 ರೂ ) ಮೌಲ್ಯದ ಮೂರು ಚಿನ್ನದ ಮಾಂಗಲ್ಯ ಸರಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ .

ಡಿಸಿಪಿ ಗೀತಾ ಎಂ ಎಸ್ ರವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್ ಆಯಕ್ತರಾದ ಎಂ ಎಸ್ ಪೂರ್ಣಚಂದ್ರ ತೇಜಸ್ವಿ ರವರ ಉಸ್ತುವಾರಿಯಲ್ಲಿ , ಕುವೆಂಪುನಗರ ಪೊಲೀಸ್ ಠಾಣೆಯ ಪಿ.ಐ ರವರಾದ ಷಣ್ಮುಗ ವರ್ಮ ಕೆ , ವಿದ್ಯಾರಣ್ಯಪುರಂ ಠಾಣೆಯ ಪಿಐ ರವರಾದ  ಜೆ ಸಿ ರಾಜು , ಪಿಎಸ್‌ಐ ರವರಾದ ಇರ್ಷಾದ್ ಸಿ , CEN ಪಿಎಸ್‌ಐ ಅನಿಲ್ ಕುಮಾರ್ ಎನ್ , ಸಿಬ್ಬಂದಿಗಳಾದ ಮಂಜುನಾಥ ಎಂಪಿ , ಯೋಗೇಶ , ಪುಟ್ಟಪ್ಪ , ಹರ್ಷವರ್ಧನ , ಹಜರತ್ ಅಲಿ , ನಾಗೇಶ , ಶ್ರೀನಿವಾಸ , ಚಾಲಕರಾದ ಮಾದೇಶ್ , ಕೃಷ್ಣರಾಜ ವಿಭಾಗದ ಅಪರಾಧ ಪತ್ತೆದಳದ ಸಿಬ್ಬಂದಿಗಳು ಆರೋಪಿಗಳು ಮತ್ತು ಮಾಲು ಪತ್ತೆ ಮಾಡಲು ಶ್ರಮಿಸಿದ್ದು , ಈ ಪತ್ತೆ ಕಾರ್ಯಕ್ಕೆ ಪೊಲೀಸ್ ಆಯುಕ್ತರಾದ  ಡಾ . ಚಂದ್ರಗುಪ್ತ ಡಿಸಿಪಿ  ಪ್ರದೀಪ್ ಗುಂಟಿ ರವರು ಪ್ರಶಂಶಿಸಿದ್ದಾರೆ.

Leave a Reply

Your email address will not be published. Required fields are marked *