ಸ್ನೇಹ ಬಳಗ, ಕೆ.ಹೆಚ್.ಬಿ ಬಡಾವಣೆಯ ವರ್ತಕರು ಮತ್ತು ನಿವಾಸಿಗಳಿಂದ 15 ನೇ ವರ್ಷದ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮತ್ತು ಉತ್ಸವ ಕಾರ್ಯಕ್ರಮ

ಮೈಸೂರು:21 ಜುಲೈ 2022

ನಂದಿನಿ ಮೈಸೂರು

ಸ್ನೇಹ ಬಳಗ, ಕೆ.ಹೆಚ್.ಬಿ ಬಡಾವಣೆಯ ವರ್ತಕರು ಮತ್ತು ನಿವಾಸಿಗಳೆಲ್ಲರೂ ಕೂಡಿ 15 ನೇ ವರ್ಷದ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮತ್ತು ಉತ್ಸವ ಕಾರ್ಯಕ್ರಮ ಜರುಗಿತು.

ಹೂಟಗಳ್ಳಿ ಬಡಾವಣೆಯಲ್ಲಿ ಶ್ರೀಚಾಮುಂಡೇಶ್ವರಿ ಮೂರ್ತಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಹಾ ಮಂಗಳಾರತಿ ಸಲ್ಲಿಸಿದರು.9 ಜನ ಮುತ್ತೈದೆಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.ನಗಾರಿ ಸದ್ದು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತು.

ಸ್ನೇಹ ಬಳಗದ ಅಧ್ಯಕ್ಷ ಆರ್.ಸಿ.ಗಂಗನಗೌಡ ಮಾತನಾಡಿ ನಮ್ಮ ಬಡಾವಣಿಯಲ್ಲಿ ಶ್ರೀ ಚಾಮುಂಡೇಶ್ವರಿ ವರ್ದಂತಿ ಉತ್ಸವ ನಡೆಸುತ್ತಿದ್ದೇವೆ.
ಶ್ರೀಚಾಮುಂಡೇಶ್ವರಿ ತಾಯಿಯ ಮೂರ್ತಿಯನ್ನ ರಥದಲ್ಲಿ ಪ್ರತಿಷ್ಠಾಪಿಸಿ ಬಡಾವಣೆ ಸುತ್ತಾ ಮೆರವಣಿಗೆ ನಡೆಸಲಾಗುವುದು.ನಂತರ ವೇದಿಕೆಯ ಮೇಲೆ ಪೂಜಾ ಕಾರ್ಯಕ್ರಮ ನೆರವೇರಲಿದೆ.
ನಾಳೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಭಕ್ತರಿಗೆ ಪ್ರಸಾದ ವಿತರಿಸಲಾಗುವುದು ಎಂದು ತಿಳಿಸಿದರು.

ಉತ್ಸವ ಕಾರ್ಯಕ್ರಮದಲ್ಲಿ ಸ್ನೇಹ ಬಳಗದ ಸದಸ್ಯರು,ವರ್ತಕರು,ಬಡಾವಣೆ ನಿವಾಸಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *