ಚಾಮುಂಡೇಶ್ವರಿ ರಥೋತ್ಸವಕ್ಕೆ ರಾಜವಂಶಸ್ಥರಿಂದ ಚಾಲನೆ ಸಾವಿರಾರು ಭಕ್ತರು ಸಾಕ್ಷಿ

ನಂದಿನಿ ಮೈಸೂರು

ಮೈಸೂರು: ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು.

ಮುಂಜಾನೆಯೇ ದೇವಾಲಯದಲ್ಲಿ ತಾಯಿಗೆ ವಿವಿಧ ಅಭಿಷೇಕ ವಿಶೇಷ ಪೂಜೆ ಸಲ್ಲಿಸಲಾಯಿತು.ನಾಡ ಅಧಿದೇವತೆಗೆ ಹಸಿರು ಬಣ್ಣದ ಸೀರೆಯುಡಿಸಿ ಆಭರಣಗಳನ್ನು ಧರಿಸಲಾಗಿತ್ತು.ಮೊದಲಿಗೆ ರಥದಲ್ಲಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜಮಾತೆ ಪ್ರಮೋದಾದೇವಿ ಒಡೆಯರ್,ತ್ರಿಷಿಕಾ ಕುಮಾರಿ ಒಡೆಯರ್,ಶಾಸಕ ಜಿಟಿ ದೇವೇಗೌಡ ಅವರು ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಅರಮನೆ ಪೊಲೀಸ್ ತಂಡದಿಂದ ಸಂಗೀತ ವಾದ್ಯ ಮೊಳಗಿತು.ಸಿಎಆರ್ ಪೊಲೀಸರು ದೇವಸ್ಥಾನದ ಸುತ್ತಾ ಕುಶಾಲುತೋಪು ಸಿಡಿಸಿ ಚಾಮುಂಡೇಶ್ವರಿಗೆ ಗೌರವ ಸಲ್ಲಿಸಿದರು. ದೇವಸ್ಥಾನದ ಮುಖ್ಯಧ್ವಾರದಿಂದ ಸಿಂಗಾರಗೊಂಡು ನಿಂತಿದ್ದ ರಥವನ್ನು ಭಕ್ತರು ರಥದ ಹಗ್ಗ ಹಿಡಿದು ಎಳೆದು ಪುನೀತರಾದರು.ಇನ್ನೂ ಕೆಲವರು ಹಗ್ಗ ಮುಟ್ಟಿ ನಮಸ್ಕರಿಸಿದರು. ರಥೋತ್ಸವ ಮುಗಿದರೂ ಭಕ್ತರು ದೇವಸ್ಥಾನದತ್ತ ಆಗಮಿಸುತ್ತಿದ್ದರು. ಇದರಿಂದ, ವಾಹನ ದಟ್ಟಣೆ ಇಲ್ಲದೆ, ಸರಾಗವಾಗಿ ಜನರು ದೇವಸ್ಥಾನಕ್ಕೆ ಆಗಮಿಸಿದ್ರು.ಈ ಭಾರಿ ರಥೋತ್ಸವಕ್ಕೆ ಭಕ್ತರು ಕೊಂಚ ಕಡಿಮೆಯಾದಂತೆ ಕಂಡಿತು.

Leave a Reply

Your email address will not be published. Required fields are marked *