ಮೈಸೂರು:24 ಜುಲೈ 2022
ನಂದಿನಿ ಮೈಸೂರು
ಸಿಬಿಎಸ್ ಸಿ ಪರಿಕ್ಷೇಯಲ್ಲಿ ಕೌಟಿಲ್ಯ ವಿದ್ಯಾಲಯಕ್ಕೆ ಶೇ 100 % ಫಲಿತಾಂಶ ಬಂದಿದ್ದು ವಿದ್ಯಾರ್ಥಿಗಳಿಗಾಗಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ದಟ್ಟಗಳ್ಳಿಯ 3 ನೇ ಹಂತದಲ್ಲಿರುವ ಕೌಟಿಲ್ಯ ವಿದ್ಯಾಲಯದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು.
ಕೌಟಿಲ್ಯ ವಿದ್ಯಾಲಯದ 97 ವಿದ್ಯಾರ್ಥಿಗಳು
ಸಿಬಿಎಸ್ ಸಿ ಯಲ್ಲಿ ಉತ್ತಮ ಅಂಕ ಪಡೆದುಕೊಂಡಿದ್ದಾರೆ.97 ವಿದ್ಯಾರ್ಥಿಗಳಲ್ಲಿ 4 ವಿದ್ಯಾರ್ಥಿಗಳು ಟಾಪರ್ ಬಂದಿದ್ದಾರೆ.30 ಕ್ಕೂ ಹೆಚ್ಚು ಮಂದಿ ಡಿಸ್ಟಿಂಗ್ಷನ್ 59 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾರೆ.ಎಲ್ಲಾ ವಿದ್ಯಾರ್ಥಿಗಳಿಗೂ ಕೌಟಿಲ್ಯ ವಿದ್ಯಾಲಯದ ಆಡಳಿತ ಮಂಡಳಿ ಅಭಿನಂದಿಸುತ್ತದೆ ಎಂದು ಶಾಲೆ ಚೇರ್ ಮೆನ್ ಟಿ.ಬಾಬು ಹಾಗೂ ಪ್ರಾಂಶುಪಾಲರಾ ಶಶಿಕಲಾ ತಿಳಿಸಿದರು.
ರಾಜ್ ಅಶ್ರೀತ್,ಸಂಜನಾ,ರಾಕೇಶ್ ಶರತ್, ಮೀನಾಕ್ಷಿ ರಾಕೇಶ್ ಶಾಲೆಗೆ ಟಾಪರ್ ಅಗಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಹಾಗೂ ಸ್ನೇಹಿತರ ಜೊತೆ ಖುಷಿ ಹಂಚಿಕೊಂಡು ಸಂಭ್ರಮಿಸಿದರು.
ಅಭಿನಂದನಾ ಕಾರ್ಯಕ್ರಮದಲ್ಲಿ
ಉಪ ಪ್ರಾಂಶುಪಾಲರಾದ ರಾಧಿಕಾ,ಸಮುಧ್ಯುತಾ,ಭವ್ಯಾಶ್ರೀ ಸೇರಿದಂತೆ ಶಿಕ್ಷಕ ವೃಂದ ಹಾಗೂ ಪೋಷಕರು ಭಾಗಿಯಾಗಿದ್ದರು.