ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ರಚಿಸಿರುವ ಅರಮನೆಯ ದೃಶ್ಯಕಲೆ ಮತ್ತು ಕಲಾವಿದರು ಹಾಗೂ ಕನ್ನಡ ನಾಡಿನ ವಚನಕಾರರು ಸಚಿತ್ರ ಕಥಾ ಮಾಲಿಕೆ -1 ಕೃತಿಗಳ ಲೋಕಾರ್ಪಣೆಗೊಳಿಸಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಮೈಸೂರು:25 ಜುಲೈ 2022

ನಂದಿನಿ ಮೈಸೂರು

ಶ್ರೀ ನಟರಾಜ ಪ್ರತಿಷ್ಠಾನ , ಶ್ರೀ ಹೊಸಮಠ , ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು , ಕನ್ನಡ ಸಾಹಿತ್ಯ ಕಲಾಕೂಟ , ಮೈಸೂರು ಆರ್ಟ್ ಗ್ಯಾಲರಿ , ಸಂಯುಕ್ತ ಆಶ್ರಯದಲ್ಲಿ
ಹಿರಿಯ ಕಲಾವಿದರು , ಲೇಖಕರು ಆದ ಎಲ್.ಶಿವಲಿಂಗಪ್ಪ ರಚಿಸಿರುವ ಅರಮನೆಯ ದೃಶ್ಯಕಲೆ ಮತ್ತು ಕಲಾವಿದರು ಹಾಗೂ ಕನ್ನಡ ನಾಡಿನ ವಚನಕಾರರು ಸಚಿತ್ರ ಕಥಾ ಮಾಲಿಕೆ -1 ಕೃತಿಗಳ ಲೋಕಾರ್ಪಣೆ ಸಮಾರಂಭ ಜರುಗಿತು.

ನಟರಾಜ ಕಾಲೇಜು ಸಭಾಂಗಣದಲ್ಲಿ ಶ್ರೀ ಹೊಸಮಠ ಅಧ್ಯಕ್ಷ ಶ್ರೀ ಚಿದಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮೈಸೂರು ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರು ರಾಜವಂಶಸ್ಥರು , ವಿಧಾನ ಪರಿಷತ್ತು ಸದಸ್ಯರು ಹಾಗೂ ಲೇಖಕರಾದ ಅಡಗೂರು ಹೆಚ್ . ವಿಶ್ವನಾಥ್ ರವರು ಕೃತಿಗಳನ್ನ ಲೋಕಾರ್ಪಣೆಗೊಳಿಸಿದರು.

ಒಡೆಯರ್ ಮಾತನಾಡಿ ಶಿವಲಿಂಗಪ್ಪನವರು ಕೃತಿಯಲ್ಲಿ ಮುನ್ನುಡಿ ಬರೆಯುವುದಕ್ಕೂ ಮುನ್ನ ಮುಮ್ಮಡಿ ಕೃಷ್ಣರಾಜ ಒಡೆಯರ್ ಬಗ್ಗೆ ಬರೆದಿದ್ದಾರೆ ಖುಷಿಯ ಸಂಗತಿ.ಮೊದಲಿಗೆ
ಕಲೆ ಬೀಜ ಬಿತ್ತಿದ್ದು ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು.ಜೋಗ್ ಜಲಪಾತದಲ್ಲಿ ಸಿದ್ದಲಿಂಗೇಶ್ವರ ಏಕಶಿಲೆಯನ್ನು ಎಲ್ಲರೂ ನೋಡಬೇಕು. ಅದ್ಬುತವಾಗಿ ಶಿಲೆ ಕೆತ್ತನೆ ಮಾಡಿದ್ದಾರೆ. ಸಾಕಷ್ಟು ನುರಿತ ಅದ್ಬುತ ಕಲಾವಿದರು ಮೈಸೂರಿನಲ್ಲಿದ್ದಾರೆ.ನಾನು ಚಿಕ್ಕವನಿದ್ದಾಗ ಲಕ್ಷ್ಮೀಪುರಂ ನಲ್ಲಿರುವ ಲಲಿತ ಕಲಾ ಶಾಲೆಯಲ್ಲಿ ವಾರಂಧ್ಯದಲ್ಲಿ ಲಲಿತ ಕಲೆ ನಡೆಯುತ್ತಿತ್ತು. ನಾನೇ ಎಷ್ಟೋ ಬಾರಿ ಅಂದುಕೊಂಡಿದ್ದೇ ಇದನ್ನೇಲ್ಲ ಯಾರು ನೋಡ್ತಾರೆ ಅಂತ.ಈಗ ಗೊತ್ತಾಗುತ್ತದೆ ಅದರ ಬೆಲೆ ಏನೆಂದು.ನಾವು ಕಲೆಗೆ ಸದಾ ಪ್ರೋತ್ಸಾಹ ನೀಡುತ್ತೇವೆ.ಮತ್ತೆ ಸುವರ್ಣಯುಗ ಆರಂಭ ಆಗಬೇಕು. ಅದಕ್ಕೆ ನಿಮ್ಮ ಸಹಕಾರ ಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈವಿವಿ ಪ್ರಾಧ್ಯಾಪಕಾದ
ಡಾ.ಸಿ.ನಾಗಣ್ಣ, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್ . ಸುಬ್ರಹ್ಮಣ್ಯ,ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡಿಕೇರಿ ಗೋಪಾಲ್,
ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ
ಡಾ.ಎಸ್.ಶಿವರಾಜಪ್ಪ,ಕನ್ನಡ ಸಾಹಿತ್ಯ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್,ಸೇರಿದಂತೆ ಕಾಲೇಜಿನ ಶಿಕ್ಷಕರು,ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *