ಸಿದ್ದರಾಮಯ್ಯ ನವರಿಗೆ ನನ್ನದೇ ಸ್ಥಿತಿ ಬರುತ್ತೆ:ಸಿ ಎಂ ಇಬ್ರಾಹಿಂ

ಮೈಸೂರು:2 ಫೆಬ್ರವರಿ 2022

ನಂದಿನಿ ಮೈಸೂರು

ಫೆಬ್ರವರಿ 14 ಪ್ರೇಮಿಗಳ ದಿನದಂದು ನಾನು ಪರಿಷತ್ ಸದಸ್ಯತ್ವ ರಾಜೀನಾಮೆ ನೀಡುತ್ತೇನೆ. ಹೂವಿನ ಹಾರ ಹಾಕಿ ಹೋರಾಟ ಶುರು ಮಾಡುತ್ತೇನೆ. ಸಿದ್ದರಾಮಯ್ಯ ನವರಿಗೆ ನನ್ನದೇ ಸ್ಥಿತಿ ಬರುತ್ತೆ. ಕಾಲ ತಸ್ಮೈಯೇ ನಮಃ ಎಂದು ಇಬ್ರಾಹಿಂ ತಿಳಿಸಿದರು.

ಮೈಸೂರಿಗೆ ಆಗಮಿಸಿದ ಇಬ್ರಾಹಿಂ ಅವರನ್ನು ಅವರ ಅಭಿಮಾನಿಗಳು ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.

ನಂತರ ಮಾತನಾಡಿದ ಅವರು, ಆರಂಭದಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ‌ಗೆ ಪ್ರಶ್ನೆ ಹಾಕಿದರು. ವಿಧಾನ ಪರಿಷತ್ತಿನ ಸದಸ್ಯರು ಸೇರಿ ನಾಯಕರನ್ನು ಆಯ್ಕೆ ಮಾಡಬೇಕಿತ್ತು. 22 ಕಾಂಗ್ರೆಸ್ ಸದಸ್ಯರ ಪೈಕಿ 19 ಎಂಎಲ್‌ಸಿಗಳು ನನ್ನ ಪರ ಇದ್ದಾರೆ‌. ಹೀಗಿದ್ದರೂ ನನ್ನನ್ನು ಆಯ್ಕೆ ಮಾಡಲಿಲ್ಲ. ದೆಹಲಿಯಿಂದ ವೇಣುಗೋಪಾಲ್ ಮಾತನಾಡಿದ್ದರು. ಆದರೆ ಏಕಾಏಕಿ ಬದಲಾವಣೆ ಆಯ್ತು. ಅಲ್ಪಸಂಖ್ಯಾತರ ಕಣ್ಣಿಗೆ ಮಣ್ಣು ಎರಚಲು ಯು‌.ಟಿ.ಖಾದರ್‌ನನ್ನು ಉಪನಾಯಕ ಮಾಡಿದ್ದೀರಿ ಎಂದು ಆರೋಪಿಸಿದರು. 

ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ನಾನು ಪ್ರಾಣ ಒತ್ತೆ ಇಟ್ಟಿದ್ದೆ. 260 ವೋಟಲ್ಲಿ ಗೆದ್ರು. ನಾವು ಕೈಬಿಟ್ಟಿದ್ದರೆ ಮುಗಿದೇ ಹೋಗಿತ್ತು ಎಂದು ಸಿದ್ದರಾಮಯ್ಯ ಅವರ ಹಿಂದಿನ ರಾಜಕೀಯ ಪರಿಸ್ಥಿತಿಯನ್ನು ಇಬ್ರಾಹಿಂ ಮೆಲುಕು ಹಾಕಿದರು.

ಅವರು ಅಹಿಂದ ಅಂದ್ರು. ನಾನು ಅಲಿಂಗೌ ಅಂತ ಚಳವಳಿ ಘೋಷಣೆ ಮಾಡಿದ್ದೇನೆ. ಅಲ್ಪಸಂಖ್ಯಾತರು, ಲಿಂಗಾಯತರು, ಒಕ್ಕಲಿಗರನ್ನು ಒಗ್ಗೂಡಿಸಿ ಚಳವಳಿ ಮಾಡುತ್ತೇನೆ. ನಾನು ಇನ್ನೂ ಹೊರಟಿಲ್ಲ. ಪ್ರವಾಸ ಮಾಡುತ್ತಿದ್ದೇನೆ ಅಷ್ಟೆ. ಈಗಲೂ ಅನ್ಯಾಯ ಸರಿ ಪಡಿಸಬೇಕು. ಫೆಬ್ರವರಿ 14 ರಿಂದ ಸ್ಪಷ್ಟವಾದ ನಿದರ್ಶನವನ್ನು ಕೊಡುತ್ತೇನೆ. ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸಂಪರ್ಕದಲ್ಲಿದ್ದೇನೆ. ಹಿಂದೆ ವೀರಪ್ಪ ಮೊಯ್ಲಿ ರಾಜ್ಯಸಭೆ ತಪ್ಪಿಸಿದರು. ದೇವೇಗೌಡರು ಪ್ರಧಾನಿಯಾದರು. ಈಗ ಮತ್ತೆ ಅವಕಾಶ ತಪ್ಪಿಸಿದ್ದಾರೆ. 2023ಕ್ಕೆ ಏನಾಗುತ್ತೆ ಅಂತ ನೋಡಿ ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರಿಗೆ ಡೋಸ್ ಕೊಟ್ಟರು.

ಮೈಸೂರು- ಕಾಂಗ್ರೆಸ್ ಗೆ ಗುಡ್ ಬೈ ಹೇಳಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲೆ ಸಿದ್ದುಗೆ ಟಾಂಗ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *