ಆರ್. ಲಕ್ಷ್ಮಿಕಾಂತ್ ರವರನ್ನ ಚುನಾವಣೆಯಲ್ಲಿ ಬೆಂಬಲಿಸುವಂತೆ ಡಿಟಿ.ಪ್ರಕಾಶ್ ಮನವಿ

ಮೈಸೂರು:27 ನವೆಂಬರ್ 2021

ನಂದಿನಿ 

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2021 ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಆರ್. ಲಕ್ಷ್ಮಿಕಾಂತ್ ರವರನ್ನ‌ ಬೆಂಬಲಿಸುವಂತೆ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಪದಾಧಿಕಾರಿಗಳ ಸಭೆಯಲ್ಲಿ ಕರೆ ನೀಡಿದರು.

ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘ ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರದಲ್ಲಿ ಆಯೋಜಿಸಿದ್ದ ವಿಪ್ರ ಮುಖಂಡರ ಸಭೆಯಲ್ಲಿ ಬ್ರಾಹ್ಮಣ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಆರ್. ಲಕ್ಷ್ಮಿಕಾಂತ್ ರವರನ್ನ ಚುನಾವಣೆಯಲ್ಲಿ ಬೆಂಬಲಿಸುವಂತೆ ಬಹುಮತದಿಂದ ನಿರ್ಣಯ ಕೈಗೊಂಡರು.

ಇದೇ ಸಂಧರ್ಭದಲ್ಲಿ ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರು ಮಾತನಾಡಿ ಕಳೆದ 4ದಶಕಗಳಿಂದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮೂಲಕ ಗುರುತಿಸಿಕೊಂಡು ರಾಜ್ಯದೆಲ್ಲಡೆ ಸಂಘಟನೆ ಮಾಡಿ ಹೋರಾಟಗಳು ಸಮಾವೇಶವನ್ನ ಆಯೋಜಿಸಿ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಸರ್ಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರ್ ಲಕ್ಷ್ಮಿಕಾಂತ್ ರವರನ್ನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯರು ಮತ್ತು ವಿಪ್ರ ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಬಹುಮತದಿಂದ ಬೆಂಬಲಿಸುವಂತೆ ಮುಂದಾಗಬೇಕು ಎಂದು ಮನವಿ ಮಾಡಿದರು, ಮೈಸೂರು ನಗರದ ಕೃಷ್ಣಮೂರ್ತಿಪುರಂ ಬಡಾವಣೆಯಲ್ಲಿರುವ ಭಗೀನಿ ಸೇವಾ ಸಮಾಜ ಶಾಲೆಯಲ್ಡಿ ಡಿಸೆಂಬರ್ 12ರ ಭಾನುವಾರ ಬೆಳಗ್ಗೆ 10ರಿಂದ‌ 4ರವರೆಗೆ ಮತದಾನ ನಡೆಯಲಿದ್ದು ಸದಸ್ಯರು ಮತದಾನದಲ್ಲಿ ಭಾಗವಹಿಸಬಹುದಾಗಿದೆ, ಹಿರಿಯ ನಾಗರೀಕರ ಕ್ಷೇಮದ ದೃಷ್ಟಿಯಿಂದ ವಿಪ್ರಸಹಾಯವಾಣಿಯಿಂದ ಸಾರಿಗೆ ವ್ಯವಸ್ಥೆಯನ್ನ ಕಲ್ಪಿಸಲಾಗಿದ್ದು ಸದಸ್ಯರು ಹೆಚ್ಚಿನ ಮಾಹಿತಿಗಾಗಿ‌ 9945266832 ಸಂಪರ್ಕಿಸಬಹುದಾಗಿದೆ ಎಂದರು

ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಹಿರಿಯ ಬ್ರಾಹ್ಮಣ ಮುಖಂಡರಾದ ಕೆ ರಘುರಾಂ ವಾಜಪೇಯಿ ,ಕರ್ನಾಟಕ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ ,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್ ,ಗ್ರಾಮಾಂತರ ಅಧ್ಯಕ್ಷ ರಾದ ಗೋಪಾಲ್ ರಾವ್ ,
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಗೌರವ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್ ,ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ,
ಹರೀಶ್ ,ಕಡಕೊಳ ಜಗದೀಶ್ ,ರಾಜ್ ಕುಮಾರ್ ,ವಿ ಎನ್ ಕೃಷ್ಣ ,ರಂಗನಾಥ್ ,ಕಲ್ಕೆರೆ ನಾಗರಾಜ್ ,ಸುಚೀಂದ್ರ,ವಿನಯ್ ಕಣಗಾಲ್ ,ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್ , ಚಕ್ರಪಾಣಿ ,ಎಂ ಡಿ ಗೋಪಿನಾಥ್ ,ಮಾಜಿ ನಗರ ಪಾಲಿಕಾ ಸದಸ್ಯರಾದ ಸೌಭಾಗ್ಯ ಮೂರ್ತಿ ,ಡಾ ಲಕ್ಷ್ಮಿ ,ಕೆ ಎಂ ನಿಶಾಂತ್ ,ಶಂಕರನಾರಾಯಣ ಶಾಸ್ತ್ರಿ ,ವಿಜಯ್ ಕುಮಾರ್, ಲತಾ ಮೋಹನ್, ವೀಣಾ, ಜ್ಯೋತಿ, ನಾಗಶ್ರೀ , ಅಶ್ವಿನ್, ಮುರಳಿ , ಪ್ರಶಾಂತ್ ,ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *