ಸಮಾಜದ ಪರಿವರ್ತನೆ ಮೂಲ ಗುರು ಮಡಿವಾಳ ಮಾಚಿ ದೇವ: ಟಿ.ಎಸ್.ಶ್ರೀ ವತ್ಸ

ನಂದಿನಿ ಮೈಸೂರು: ಮಡಿವಾಳ ಮಾಚಿ ದೇವರ ಜಯಂತಿಯನ್ನು ಬಾ.ಜ.ಪ.ನಗರ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಆಚರಿಸಲಾಯಿತು.

ನಂತರ ಮಾತನಾಡಿದ ಕೌಟಿಲ್ಯ ರಘು ಸಮಾಜದ ಅಂಕು ಡೊಂಕು ಗಳನ್ನು ವಚನದ ಮೂಲಕ ಸಮಾಜದಲ್ಲಿ ಪರಿವರ್ತನೆ ಮಾಡಿದವರು ,ಬಸವಣ್ಣ ನ ಅನುಯಾಯಿಗಳು, ಬಟ್ಟೆಗಳನ್ನು ತೊಳೆಯುವ ಮೂಲಕ ನಿಮ್ಮ ಮನಸ್ಸು ಗಳನ್ನು ಕೂಡ ಕಲ್ಮಶ ದಿಂದ ತೊಳೆದು ಸಾರ್ಥಕ ಜೀವನ ನಡೆಸಬೇಕು ಎಂದರು.

ಶ್ರೀ ವತ್ಸ ರವರು ಮಾತನಾಡಿ ಭಾ.ಜ.ಪ.ಸಣ್ಣ ಸಣ್ಷ ಸಮಾಜದಲ್ಲಿ ಆರ್ಥಿಕ ವಾಗಿ,ಸಾಮಾಜಿಕ ವಾಗಿ,ಶೈಕ್ಷಣಿಕ ವಾಗಿ ಹಿಂದುಳಿದ ವರ್ಗಗಳ ಒಟ್ಟುಗೂಡಿಸುವ ಮುಖೇನ ತೀರ ಹಿಂದುಳಿದ ವರ್ಗ ದವರಿಗೆ ನ್ಯಾಯ ಕೊಡಿಸುವುದೆ ಮೂಲ ಗುರಿ,ಹಿಂದೆ ಮಾಡಿದ ಸಮಾಜ ಪುರುಷರ ಹಾದಿಯಲ್ಲೇ ನಾವೆಲ್ಲರೂ ಸಾಗೊಣ,ಎಂದು ತಿಳಿಸಿದರು.

ಸಂಧರ್ಭದಲ್ಲಿ ನಗರ ಅಧ್ಯಕ್ಷರಾದ ಟಿ.ಎಸ್. ಶ್ರೀ ವತ್ಸ,ಮಹಾ ಪೌರರಾದ ಶಿವಕುಮಾರ್, ಮೈಲಾಕ್ ಅಧ್ಯಕ್ಷರಾದ ಕೌಟಿಲ್ಯ ರಘು,ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು, ನಗರ ಪ್ರಧಾನ ಕಾರ್ಯದರ್ಶಿ ವಾಣೀಶ್ ಕುಮಾರ್, ಗಿರೀಧರ್,ಮೊರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ್‌, ಮಣಿರತ್ನಂ, ಮಾಜಿ ನಗರ ಪಾಲಿಕೆ ಸದಸ್ಯ ಶಂಕರ್,ಮಹಿಳಾ ಮೊರ್ಚಾ ಅಧ್ಯಕ್ಷರಾದ ಹೇಮಾ ನಂದಿಶ್,ಮುಖಂಡರಾದ ಶ್ರೀನಿವಾಸ್, ಕೇಶವ, ಜಯರಾಮ್, ಶಿವರಾಜ್,ಮಹದೇವ್,ಜೀವನ್,ಪುರುಷೋತ್ತಮ, ಪ್ರಸಾದ್,ರಮೇಶ್, ಕಿಶೋರ್, ಸೋಮು,ರವಿ,ನಾಗೇಶ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *