ನಂದಿನಿ ಮೈಸೂರು
ವಿಜಯನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಚಾಮರಾಜ ಕ್ಷೇತ್ರದ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಬ್ರಿಜೇಶ್ ಪಥಕ್ ಭಾಗವಹಿಸಿದ್ದರು. ತಾಯಂದಿರು ಬಿಜೆಪಿಯ ಅಭ್ಯರ್ಥಿ ಎಲ್. ನಾಗೇಂದ್ರ ರವರಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದರು.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್ ಪಟಾಕ್ ಅವರು ಚಾಮರಾಜ ಕ್ಷೇತ್ರದ ಮಹಿಳಾ ಮೋರ್ಚಾದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಮಹಿಳೆಯರಿಗೆ ಸರ್ಕಾರದಿಂದ ಆಗಿರುವ ಅನುಕೂಲಗಳನ್ನು ಮನದಟ್ಟು ಮಾಡಿದರು ಈ ಯಡಿಯೂರಪ್ಪಜಿರವರ ಕಾಲದಲ್ಲಿ ಮಹಿಳೆಯರಿಗೆ ನೀಡುವ ಕೊಡುಗೆಗಳನ್ನು ವಿವರಿಸಿದರು ಶ್ರೀ ಬಸವರಾಜ ಬೊಮ್ಮಾಯಿ ರವರ ಸಂಪುಟದಲ್ಲಿ ಮಹಿಳೆಯರಿಗೆ ವಿವಿಧ ಸಾಲ ಸೌಲಭ್ಯಗಳು ಸ್ವಸಹಾಯ ಸಂಘಗಳಿಗೆ ನೀಡಿರುವ ಸೌಲಭ್ಯಗಳನ್ನು ಕುರಿತು ಮಾಹಿತಿ ನೀಡಿದರು ಸನ್ಮಾನ್ಯ ನಾಗೇಂದ್ರ ಅವರು ಮಾತನಾಡಿ ಕ್ಷೇತ್ರದಲ್ಲಿ ಶಾಸಕರ ಅವಧಿಯಲ್ಲಿ ಆಗಿರುವ ಪ್ರತಿಯೊಂದು ಕೆಲಸಗಳ ಬಗ್ಗೆ ಮಾಹಿತಿ ನೀಡಿದರು ಕರೋನ ಸಂದರ್ಭದಲ್ಲಿ ಮಹಿಳಾದ್ಯತಾ ಕುಟುಂಬಗಳಿಗೆ ನೀಡಿರುವ ಸೌಲತ್ತು ಕುರಿತು ಮನದಟ್ಟು ಮಾಡಿದ ವೈಯಕ್ತಿಕವಾಗಿ ಕೆಲ ಕಷ್ಟಕರ ಕುಟುಂಬಗಳಿಗೆ ಮಾಡಿರುವ ಕೆಲಸಗಳ ಕುರಿತು ತಿಳಿಸಿಕೊಟ್ಟರು ಮತ್ತೊಮ್ಮೆ ಚಾಮರಾಜ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿನ ಮತವನ್ನು ಬಿಜೆಪಿಗೆ ನೀಡುವಂತೆ ತನ್ನನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಎಲ್ ನಾಗೇಂದ್ರ ಮಹಿಳಾ ಮೋರ್ಚಾದ ಅಧ್ಯಕ್ಷ ಹೇಮಾ ನಂದಿಶ್. ಕ್ಷೇತ್ರದ ಅಧ್ಯಕ್ಷರಾದ ಸೋಮಶೇಖರ್. ಮೇಯರ್ ಶಿವಕುಮಾರ್. ಕೌಟಿಲ್ಯ ರಘು .ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಎಂ ಜೆ ಕಿರಣ್ ಗೌಡ .ನಗರಪಾಲಿಕ ಸದಸ್ಯರಾದ ವೇದಾವತಿ .ಪ್ರಮೀಳಾ ಭರತ್ .ಪ್ರಧಾನ ಕಾರ್ಯದರ್ಶಿಗಳಾದ ಪುನೀತ್ .ರಮೇಶ್ .ಮಹಿಳಾ ಮುಖಂಡರುಗಳಾದ ಶುಭ .ಪ್ರೇಮ. ರಾಜೇಶ್ವರಿ .ರೂಪ .ಲಲನಾ ಧನರಾಜ್. ತಮಿಳುನಾಡಿನಿಂದ ಆಗಮಿಸಿದ ಇಬ್ಬರು ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.