ನಂದಿನಿ ಮೈಸೂರು
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ “ವಿಜಯ ಸಂಕಲ್ಪ ಯಾತ್ರೆ ” ವಿಜೃಂಭಣೆಯಿಂದ ಜರುಗಿತು.
ಶಿವಮೊಗ್ಗ ಎಂಪಿ ಬಿವೈ ರಾಘವೇಂದ್ರ, ಮೈಸೂರು – ಕೊಡಗು ಎಂಪಿ ಪ್ರತಾಪ್ ಸಿಂಹ,ಸಚಿವ ಕೋಟಾ ಶ್ರೀನಿವಾಸ ಪೂಜಾರಿ,ನಗರ ಅಧ್ಯಕ್ಷರಾದ ಶ್ರೀವತ್ಸ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ,ಚಾಮುಂಡೇಶ್ವರಿ ಕ್ಷೇತ್ರದ ಟಿಕೇಟ್ ಆಕಾಂಕ್ಷಿ ನಾಗನಹಳ್ಳಿ ಜಗದೀಶ್ ಗೌಡ,ತಾಲ್ಲೂಕು ಅಧ್ಯಕ್ಷ ಮಹೇಶ್,ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಘು ತೆರೆದ ವಾಹನದಲ್ಲಿ ಸಂಚರಿಸಿದರು.ಚಾಮುಂಡೇಶ್ವರಿ ಟಿಕೇಟ್ ಆಕಾಂಕ್ಷಿ ಜಗದೀಶ್ ಗೌಡರ ಪರ ಕಾರ್ಯಕರ್ತರು ಘೋಷಣೆ ಕೂಗಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾಗಿದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನ ಕಂಡು ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಬಿವೈ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.