ಪ್ರಾಣಿಗಳ ಮೇಲೆ ಬಣ್ಣ ಎರಚದಂತೆ:ನಿಮಿಷಾಂಬ ಚೆಲುವರಾಯಸ್ವಾಮಿ ಮನವಿ

 

*ಪ್ರಾಣಿಗಳ ಮೇಲೆ ಬಣ್ಣ ಎರಚದಂತೆ:ನಿಮಿಷಾಂಬ ಚೆಲುವರಾಯಸ್ವಾಮಿ ಮನವಿ:*

ಹೋಳಿ ಹಬ್ಬದಲ್ಲಿ ಸಾರ್ವಜನಿಕರು ನಾಯಿಗಳು, ಬೆಕ್ಕುಗಳು, ಸಾಕು ಪ್ರಾಣಿಗಳು, ಹಸುಗಳು, ಆಡುಗಳು ಇತ್ಯಾದಿ ಯಾವುದೇ ಪ್ರಾಣಿಗಳ ಮೇಲೆ ಬಣ್ಣಗಳನ್ನು ಎರಚಬಾರದು ಎಂದು ಸಫೀಶಿಯಂಟ್ ಇಂಡಿಯಾ ಫೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಿಮಿಷಾಂಬ ಚೆಲುವರಾಯಸ್ವಾಮಿ ರವರು ಮನವಿ ಮಾಡಿದ್ದಾರೆ.

ಚರ್ಮ, ಬಾಯಿ, ಕಣ್ಣು, ಮೂಗು ಮೂಲಕ ಪ್ರಾಣಿಗಳ ದೇಹ ಸೇರುವ ಯಾವುದೇ ರಾಸಾಯನಿಕ ಅಥವಾ ನೈಸರ್ಗಿಕ ಬಣ್ಣವು ವಿವಿಧ ರೀತಿಯ ಅಲರ್ಜಿ, ವಾಂತಿ, ಕುರುಡುತನವನ್ನು ಪ್ರಾಣಿಗಳಲ್ಲಿ ಉಂಟು ಮಾಡಬಹುದು. ಪ್ರಾಣಿಗಳ ಮೇಲೆ ಹೋಳಿ ಹಬ್ಬದಲ್ಲಿ ಬಣ್ಣಗಳನ್ನು ಎರಚುವುದರಿಂದ ಅಂತಹ ಬಣ್ಣವು ಪ್ರಾಣಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದಲ್ಲದೆ, ಇದು ಪ್ರಾಣಿ ಹಿಂಸೆ ಕಾಯಿದೆ, 1960 (ಪಿಸಿಎಸಿಟಿ) ಅಡಿಯಲ್ಲಿ ಕಾನೂನು ಬಾಹಿರವಾಗಿದೆ ಮತ್ತು ಅಂತಹ ಯಾವುದೇ ಪ್ರಕರಣಗಳು ವರದಿಯದಲ್ಲಿ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಎಂದು ಒತ್ತಾಯಿಸಿದರು.

 

Leave a Reply

Your email address will not be published. Required fields are marked *