ನಂದಿನಿ ಮೈಸೂರು
ಕೈ ಕೆಸರಾದರೇ ಬಾಯಿ ಮೊಸರು ಎಂಬ ಗಾದೆಯಂತೆ ವರ್ಷದಲ್ಲಿ ಯಾವ ಕಾಲದಲ್ಲಾದರೂ ಮಳೆ ಬರದೇ ಇದ್ದರೂ ಬೇಸಿಗೆ ಕಾಲದಲ್ಲಿ ಉತ್ತಮ ಫಸಲು ಬೆಳೆಯಬಹುದು ಎಂಬುದನ್ನ ರೈತ ತೋರಿಸಿಕೊಟ್ಟಿದ್ದಾನೆ.
ಭತ್ತ ಕಟಾವೂ ಮಾಡಿಸುತ್ತಿರುವ ಈ ರೈತನ ಹೆಸರು ಸುತ್ತೂರು ಲಿಂಗರಾಜು.ಇವರು ಬೇಸಿಗೆ ಬೆಳೆಯಲ್ಲಿ ಉತ್ತಮ ಫಸಲು ಹಾಗೂ ಉತ್ತಮ ಇಳುವರಿ ಪಡೆದಿದ್ದಾರೆ.
ಕಬಿನಿ ನದಿ ವ್ಯಾಪ್ತಿಯಲ್ಲಿರುವ ಸುತ್ತೂರು,ಹುಲ್ಲಳ್ಳಿ,ರಾಂಪುರ ನಾಲೆಗಳಲ್ಲಿ ಈ ಬಾರಿ ಬೇಸಿಗೆ ಬೆಳೆ ಬೆಳೆಯಲಾಗಿತ್ತು. ರೈತರು ಬೆಳೆದ ಭತ್ತದ ಫಸಲಿಗೆ ಕೀಟ ಬಾದೆಯಿಂದ ಯಾವ ರೋಗವು ಕಾಣದೆ ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಕಡಿಮೆ ಮಳೆಯಾದರೂ ಭತ್ತದ ಹಾಗೂ ಇತರ ಫಸಲಿಗೆ ಯಾವ ರೋಗವು ಕಾಣದೆ.ಉತ್ತಮ ಬೆಳೆ ಬಂದಿದೆ.ಇಂದು ಕಟಾವು ಮಾಡಿ ಒಕ್ಕಣೆ ಮಾಡುತ್ತಿದ್ದೇವೆ.
ಅಲ್ಲದೆ ಭತ್ತದ ಬೆಳೆಗೆ ಉತ್ತಮ ಬೆಲೆಯೂ ಇದೆ.1 ಕ್ವಿಂಟಾಲ್ ಭಕ್ತಕ್ಕೆ 2700. ರೂಗಳು ಸಿಗುತ್ತದೆ ಎಂದು ಸಂತಸ ಹಂಚಿಕೊಂಡಿದ್ದಾರೆ.