ಮಾಜಿ ಸಿಎಂ ಸಿದ್ದರಾಮಯ್ಯ ಹುಟ್ಟು ಹಬ್ಬ ಐವರು ಸಾಧಕರಿಗೆ ಭಾಗ್ಯವಿಧಾತ ಶ್ರೀ ಸಿದ್ದರಾಮಯ್ಯ ರಾಜ್ಯ ಪ್ರಶಸ್ತಿ ಪ್ರಧಾನ

 

ಮೈಸೂರು:12 ಆಗಸ್ಟ್ 2021

ನ@ದಿನಿ

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜನ್ಮ ದಿನದ ಅಂಗವಾಗಿ ಐವರು ಸಾಧಕರಿಗೆ ಭಾಗ್ಯವಿಧಾತ ಶ್ರೀ ಸಿದ್ದರಾಮಯ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ವಿಮರ್ಶಕ ಬಂಜಗೆರೆ ಜಯಪ್ರಕಾಶ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸಿದ್ಧರಾಮಯ್ಯ ಸಿದ್ಧರೂ ಹೌದು, ಸಾಧಕರು ಹೌದು ಎನ್ನಬಹುದಾಗಿದೆ. ಹಲವು ಭಾಗ್ಯಗಳ ಜನರಿಗೆ ನೀಡುವ ಮೂಲಕ ಸಿದ್ಧರಾಗಿದ್ದಾರೆ. ಅಂತೆಯೇ ಸಾಧಕರಾಗಿ ಇಂದಿಗೂ ತಮ್ಮ ಚಿಂತನೆಯನ್ನು ಜನರಿಗಾಗಿ ಜೀವನ ಮುಡಿಪಾಗಿಟ್ಟವರಾಗಿದ್ದಾರೆ ಎಂದರು.

ಹಸಿವು, ಅವಮಾನದ ಬಗ್ಗೆ ಅರಿತವರು ಮಾತ್ರವೇ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಿದ್ಧರಾಮಯ್ಯ ಅವೆರಡನ್ನು ಸ್ವತಃ ಅನುಭವಿಸಿ ಸಮಾಜದ ಬದಲಾವಣೆಗೆ ನಿಂತವರಾಗಿದ್ದಾರೆ. ಸಮಾಜಕ್ಕೋಸ್ಕರ ಸಾಧನೆ ಮಾಡುವ ಸಾಧಕರನ್ನು ಬೆಳೆಸುವ ನಿಟ್ಟಿನಲ್ಲಿ ಹಲವು ಮಂದಿಯನ್ನು ಬೆಳೆಸಿದ್ದಾರೆ.

ಮುಖ್ಯಮಂತ್ರಿಯಾದವರು ರಾಜ್ಯದ ಜನರ ಆಪೇಕ್ಷೆಗೆ ಅನುಗುಣವಾಗಿ ಕೆಲಸ ಮಾಡಬೇಕು. ಆದರೆ, ಈಗಿನ ಸರ್ಕಾರದಲ್ಲಿ ಅದು ಇಲ್ಲವಾಗಿದೆ. ಮಂತ್ರಿ ಇರಲಿ ಖಾತೆ ನಡೆಸಲು ವರಿಷ್ಠರ ತೀರ್ಮಾನ ನಡೆಸಲು ದೆಹಲಿಗೆ ಹೋಗಬೇಕಾದ ಸ್ಥಿತಿಯಿದೆ‌. ಆದರೆ, ಐದು ವರ್ಷ ಸಮರ್ಥವಾಗಿ ರಾಜ್ಯದ ಜನರ ಅಪೇಕ್ಷೆಗೆ ಅನುಗುಣವಾಗಿ ಸರ್ಕಾರ ನಡೆಸಿದ ಜನನಾಯಕರಾಗಿದ್ದಾರೆ ಎಂದು ಹೇಳಿದರು.

ಕಲಾವಿದ ಡಾ.ಬಾಬುರಾವ್ ನಡೋನಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಯ ಅಧ್ಯಕ್ಷ ಡಾ.ಸಿ.ವೆಂಕಟೇಶ್, ಅಖಿಲ ಭಾರತ ಕ್ರೈಸ್ತ ಮಹಾಸಭಾ ರಾಜ್ಯ ಮಹಿಳಾ ಅಧ್ಯಕ್ಷ ರೀನಾ ಪ್ಯಾಟ್ರಿಕ್, ಸುಜೀವ್ ಸಂಸ್ಥೆ ಮುಖ್ಯಸ್ಥ ಎಸ್.ರಾಜಾರಂ, ಬುಡಕಟ್ಟು ಮಹಿಳಾ ಹೋರಾಟಗಾರ್ತಿ ವೀಣಾ ಪ್ರಭು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೈಸೂರು ವಿವಿ ಉಪಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಸಾಹಿತಿ ಪ್ರೊ.ಹಿ.ಸಿ.ರಾಮಚಂದ್ರೇಗೌಡ, ದಾಸ್ತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಡಿ.ತಿಮ್ಮಯ್ಯ, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಸಮಾಜ ಸೇವಕ ಕೆ.ರಘುರಾಮ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಪ್ರದೀಪಕುಮಾರ್, ದಿ ಸಿಟಿ ಕೋ- ಅಪರೇಟಿವ್ ಬ್ಯಾಂಕ್ ನಿರ್ದೇಶಕ ಎಂ.ಪುಟ್ಟಸ್ವಾಮಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಎಸ್.ಶಿವರಾಮು, ಮೈಸೂರು ವಿವಿ ದಲಿತ ವಿದ್ಯಾರ್ಥಿ ಒಕ್ಕೂಟದ ಕಿರಣ್, ಲೋಕೇಶ್ ಮಾದಾಪುರ ಇನ್ನಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *