ಮೈಸೂರು:4 ಏಪ್ರಿಲ್ 2022
ನಂದಿನಿ ಮೈಸೂರು
ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಆನ್ಲೈನ್(online) ಮೂಲಕ ಭಗವದ್ಗೀತೆ ಸ್ಪರ್ಧೆ ಆಯೋಜಿಸಿದ್ದು ಮೈಸೂರು ಜಿಲ್ಲಾ ವ್ಯಾಪ್ತಿ ಒಳಗೊಂಡಂತೆ ಸ್ಪರ್ಧೆಯಲ್ಲಿ 8ರಿಂದ 18ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು ಎಪ್ರಿಲ್ 8 ನೇ ತಾರೀಖಿನ ಒಳಗೆ ಮಕ್ಕಳು ಭಾಗವಹಿಸಿ ಭಗವದ್ಗೀತೆ ಯ ಶ್ಲೋಕಗಳನ್ನು ಮೂರು ನಿಮಿಷಗಳ ವಿಡಿಯೋ ತುಣುಕುಗಳನ್ನು ವಾಟ್ಸಪ್ ಮೂಲಕ ವಿಡಿಯೋ ತುಣುಕನ್ನು ಸಂಖ್ಯೆಗೆ 9880304324/9060543667 /9742144933/ಕಳಿಹಿಸಿಕೊಡಬಹುದಾಗಿದೆ.
ಸನಾತನ ಧರ್ಮದ ಹಿಂದುಗಳ ಪ್ರತೀಕವಾದ 14 ಅಧ್ಯಾಯ ದ ಶ್ಲೋಕ ವನ್ನು ಪಠಣಮಾಡಿ ಪ್ರಸ್ತುತಪಡಿಸಬಹುದು.
ಸ್ಫರ್ಧಿಗಳ ಭಾಷಾ ಶೈಲಿ, ಸಂಹವನ ಕೌಶಲ್ಯ ಸ್ಪಷ್ಟತೆಯ ಆಧಾರದ ಮೇಲೆ ಬಹುಮಾನ ನೀಡಲಾಗುವುದು,
ಪ್ರಥಮ ಬಹುಮಾನ 2ಸಾವಿರ ಮತ್ತು ದ್ವಿತೀಯ ಬಹುಮಾನ 1000ಸಾವಿರ ತೃತೀಯ ಬಹುಮಾನ 500ರೂ ಹಾಗೂ ಪಾರಿತೋಷಕ ನೀಡಲಾಗುವುದು ಭಾಗವಹಿಸಿದ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು..
ಕಾರ್ಯಕ್ರಮದ ಭಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದ ನಗರ ಅಧ್ಯಕ್ಷರಾದ ಟಿ.ಎಸ್. ಶ್ರೀ ವತ್ಸ
ಹಿಂದೂಗಳ ಪಾಲಿನ ಪವಿತ್ರ ಗ್ರಂಥಗಳಲ್ಲಿ ಒಂದಾದ ಭಗವದ್ಗೀತೆ ,
ಭಗವದ್ಗೀತೆ ಪ್ರತಿಯೊಂದು ಶ್ಲೋಕ ಜ್ಞಾನದ ಕಿಡಿ,
ಭಗವದ್ಗೀತೆ ಒಂದು ಬೆಂಕಿ ಪೊಟ್ಟಣವಿದ್ದಂತೆ. ಅದರಲ್ಲಿನ ಪ್ರತಿಯೊಂದು ಶ್ಲೋಕವೂ ಜ್ಞಾನದ ಬೆಳಕು ನೀಡುತ್ತದೆ ಎಂದರು.
ನಮ್ಮ ಜೀವನ ಶೈಲಿ ಬದಲಾಗುತ್ತಿದೆ. ಶರೀರಕ್ಕೆ ಕೆಲಸ ಕಡಿಮೆಯಾಗಿ, ಮನಸಿಗೆ ಉದ್ವೇಗ ಜಾಸ್ತಿ ಆಗುತ್ತಿದೆ. ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಡಯಾಬಿಟಿಸ್, ರಕ್ತದೊತ್ತಡ, ಹೃದಯ ತೊಂದರೆ ಹಾಗೂ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಭಗವದ್ಗೀತೆಯಲ್ಲಿ ತಿಳಿಸಿದ ರೀತಿಯಲ್ಲಿ ಜೀವನ ಕ್ರಮ ಅನುಸರಿಸಬೇಕು ಎಂದರು. ಮಾನಸಿಕ ಆರೋಗ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ. ಪಾಲಕರ ಒತ್ತಡ ತಾಳಲಾಗದೇ ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಮುಕ್ತವಾಗಿ ಅಧ್ಯಯನ ಮಾಡಲು ಪೂರಕ ವಾತಾವರಣ ಸೃಷ್ಟಿಸಬೇಕು. ನಮ್ಮ ದೇಶದ ಜ್ವಲಂತ ಸಮಸ್ಯೆಗಳಿಗೆ ಭಗವದ್ಗೀತೆ ಪರಿಹಾರ ನೀಡಬಲ್ಲದು ಎಂದು ತಿಳಿಸಿದರು.
ಸಂಧರ್ಭದಲ್ಲಿ ನಗರದ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ,ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿ ಮಂಜು, ಮಾಜಿ ಅಧ್ಯಕ್ಷರಾದ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಗಳಾದ ಗಿರೀಧರ್,ವಾಣೀಶ್ ಕುಮಾರ್, ಗೋಪಾಲ ರಾವ್, ನಗರ ಪಾಲಿಕೆ ಸದಸ್ಯರಾದ ಕೆ.ಜೆ.ರಮೇಶ್, ಮಾಜಿ ನಗರ ಪಾಲಿಕೆ ಸದಸ್ಯ ಜಯರಾಮ್,ಉಮೇಶ್ ಪ್ರಧಾನ ಕಾರ್ಯದರ್ಶಿ ಗೋಪಾಲ್, ಮಾಧ್ಯಮ ವಕ್ತಾರ ಮಹೇಶ್ ರಾಜ್ ಅರಸ್,ಕೇಬಲ್ ಮಹೇಶ್ ಪರಮೇಶ್ ಗೌಡ,ಚೇತನ್,ಮನೋಜ್,ಮುಂತಾದವರು ಇದ್ದರು.