ನ್ಯೂ ಟೊಯೋಟಾ ಗ್ಲಾಂಜಾ ಕಾರ್ ಲೋಕಾರ್ಪಣೆಗೊಳಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ್

99 Views

ಮೈಸೂರು:5 ಏಪ್ರಿಲ್ 2022

ನಂದಿನಿ ಮೈಸೂರು

ಹೂಟಗಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶೋರೂಂ ನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಬಹುನಿರೀಕ್ಷಿತ ನ್ಯೂ ಟೊಯೋಟಾ ಗ್ಲಾಂಜಾ ಕಾರ್ ಅನ್ನು ಲೋಕಾರ್ಪಣೆಗೊಳಿಸಿತು.

ಭಾರತೀಯ ಮಾರುಕಟ್ಟೆಯಲ್ಲಿ ಟೊಯೋಟಾದ ಅತ್ಯಂತ ಕೈಗೆಟುಕುವ ಕೊಡುಗೆ ನೀಡುತ್ತಿದ್ದು, ಟೊಯೊಟಾ ಗ್ಲಾಂಜಾ ಕಾರನ್ನು
ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಭೀಮನಗೌಡ ಪಾಟೀಲ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

6.45 ಲಕ್ಷದಿಂದ ಆರಂಭವಾಗಿ 11 ಲಕ್ಷದವರೆಗೂ ಇದೆ.ಮಧ್ಯಮ ವರ್ಗದವರು ಈ ಕಾರನ್ನು ಕೊಂಡುಕೊಳ್ಳಬಹುದಾಗಿದೆ.ಒಂದು ಲೀಟರ್ ಗೆ 23 ಕಿಲೋಮೀಟರ್ ಸಂಚರಿಸಬಹುದಾಗಿದೆ. ಸ್ಮಾರ್ಟ್ ಫೋನ್ ಮತ್ತು ಸ್ಮಾರ್ಟ್ ವಾಚ್ ಮೂಲಕ ಸಕ್ರಿಯಗೊಳಿಸಲಾಗಿದೆ.ಹೋಮ್ ಗ್ರೋನ್ ತಂತ್ರಜ್ಞಾನದೊಂದಿಗೆ ಸಂಪರ್ಕ ವೈಶಿಷ್ಟ್ಯಗಳು, ಸೇವೆ ಮತ್ತು ಮೌಲ್ಯವರ್ಧಿತ ಸೇವೆಗಳೊಂದಿಗೆ ಸಂಯೋಜಿಸಲಾದ ಒಂದು ಅಪ್ಲಿಕೇಶನ್ ಟೊಯೋಟಾ ಐ-ಕನೆಕ್ಟ್ ನೊಂದಿಗೆ ಪರಿಶೀಲಿಸಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

 

ಮೊದಲ ದಿನವೇ ೨೦ ಕಾರುಗಳು ಮಾರಾಟವಾಗಿದ್ದು ಭೀಮನಗೌಡ ಪಾಟೀಲ್ ರವರು ಕಾರನ್ನು ಗ್ರಾಹಕರಿಗೆ ನೀಡಿದರು.

ನಂದಿನಿ ಭಾರತ್ ನ್ಯೂಸ್ ಟಿವಿ ಮೈಸೂರು

Leave a Reply

Your email address will not be published.