ಮೈಸೂರು:14 ಜುಲೈ 2022
ನಂದಿನಿ ಮೈಸೂರು
ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಣ ಆರಂಭವಾಗಿದ್ದು ಮಕ್ಕಳ ಕಲಿಕೆ,ಶೈಕ್ಷಣಿಕ ಚಟುವಟಿಕೆ, ಶಿಕ್ಷಕರು ಹಾಗೂ ಮಕ್ಕಳ ನಡುವೆ ಅನ್ನೋನ್ಯತೆ ಹೇಗಿದೆ ಎಂಬುದನ್ನ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಾರಾಧ್ಯ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರಿನ ವನಿತಾ ಸದನ ಶಾಲೆಗೆ ಭೇಟಿ ಕೊಟ್ಟ ರಾಮಾರಾಧ್ಯ ರವರು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪ್ರತಿಯೊಂದು ಕೊಠಡಿಗೂ ತೆರಳಿ ಮಕ್ಕಳ ವಿದ್ಯಾಭ್ಯಾಸ ಗಮನಿಸಿದರು.ವಿಜ್ಞಾನ ಪಾಠದಲ್ಲಿ ಬರುವ ಚಿತ್ರಗಳು ಕಷ್ಟವಾಗಿರುತ್ತದೇ ಎಂದು ಮಕ್ಕಳು ತಿಳಿಸಿದಾಗ ಸ್ವತಃ ತಾವೇ ಬಳಪ ಹಿಡಿದು ಸುಲಭ ವಿಧಾನದಲ್ಲಿ ಚಿತ್ರ ಬಿಡಿಸಿ ಮಕ್ಕಳಿಗೆ ಅರ್ಥ ಮಾಡಿಸಿದರು.ಮಕ್ಕಳಿಂದಲೂ ಚಪ್ಪಾಳೆ ಪಡೆದರು.
ಕೆಲ ಶಾಲೆಗಳಲ್ಲಿ ಮಕ್ಕಳ ಮೇಲೆ ಹಲ್ಲೆಯಾಗುತ್ತಿದೆ.ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಸೌತ್ ಬ್ಲಾಕ್ ನಲ್ಲಿ ಮಕ್ಕಳ ಹಾಗೂ ಶಿಕ್ಷಕರ ನಡುವೆ ಅನ್ನೋನ್ನತೆ ಹೇಗಿದೆ ಎಂದು ಪರಿಶೀಲಿಸಿದ್ದೇನೆ.ಮಕ್ಕಳು ಕೂಡ ಶಿಕ್ಷಕರು ಉತ್ತಮವಾಗಿ ಪಾಠ ಮಾಡುತ್ತಿದ್ದಾರೆ ಎಂದಿದ್ದಾರೆ.ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಬಾರದು.ಕಲಿಕೆ ಕಷ್ಟ ಎಂದು ಭಾವಿಸಬಾರದು ಶಿಕ್ಷಕರು ಪಾಠ ಮಾಡುವಾಗ ತಾಳ್ಮೆಯಿಂದ ಗ್ರಹಿಸಿದರೇ ಉತ್ತಮ ಅಂಕ ಪಡೆಯಬಹುದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದ್ದೇನೆ ಎಂದರು .
ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನ,ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶಿವಮ್ಮ ಟಿ.
ಸಿಂಧುಮತಿ,ಭಾರತಿ,ರವಿಕುಮಾರ್,ಅಮೀದ್ ಸೇರಿದಂತೆ ಶಾಲಾ ಸಿಬ್ಬಂದಿಗಳು ಹಾಜರಿದ್ದರು.