ನಂದಿನಿ ಮೈಸೂರು
ಛಾಯಾದೇವಿ ಆಶ್ರಮದ ಮಕ್ಕಳಿಂದ ಬಾರ್ಬೆಕ್ಯೂ ನೇಷನ್ ನೂತನ ಮಳಿಗೆ ಉದ್ಘಾಟನೆ
ಮೈಸೂರಿನ ನೆಕ್ಸಸ್ ಸೆಂಟರ್ ಸಿಟಿ ಮಾಲ್ನಲ್ಲಿ ತನ್ನ ನೂತನ ಮಳಿಗೆಯನ್ನು
ಬಾರ್ಬೆಕ್ಯೂ ನೇಷನ್ ಇಂದು ಆರಂಭಿಸಿದೆ. 4,546 ಚದರ ಅಡಿ ವಿಸ್ತೀರ್ಣವುಳ್ಳ ವಿಶಾಲವಾದ ಈ ಮಳಿಗೆ 12 ಜನರಿಗೆ ಆಸನಾವಕಾಶ ನೀಡಬಲ್ಲದು. ಅನೌಪಚಾರಿಕ ಭೋಜನ, ಕಾರ್ಪೋರೇಟ್ ಭೋಜನ ಮತ್ತು ಕುಟುಂಬ
ಸಮಾರಂಭಗಳಿಗೆ ಆತಿಥ್ಯ ವಹಿಸಲು ಶ್ರೇಷ್ಟ ಸ್ಥಳ ಇದಾಗಿದೆ. ಮಳಿಗೆಯಲ್ಲಿನ ಒಳಾಂಗಣ ವಿನ್ಯಾಸ ಆಕರ್ಷಕವಾಗಿದ್ದು,ಇಂದಿನ ಒಲವುಗಳಿಗೆ ತಕ್ಕಂತಿದೆ. ಅಲ್ಲದೆ, ಸಹಸ್ರಮಾನದ ಯುವಜನತೆಯ ಸೌಂದರ್ಯ ಅಭಿರುಚಿಗೆ ತಕ್ಕಂತೆ ಇದೆ.
ಬಾರ್ಬೆಕ್ಯೂ ನೇಷನ್ ಹಾಸ್ಪಿಟಾಲಿಟಿ ಲಿಮಿಟೆಡ್ ಮುಖ್ಯ ಕಾರ್ಯಾಚರಣೆ ಅಧಿಕಾರಿ ಫೈಟ್ ಅಝೀಮ್ ಅವರು ಮಾತನಾಡಿ, “ಮೈಸೂರಿನಲ್ಲಿ ಮತ್ತೊಂದು ಮಳಿಗೆಯನ್ನು ಆರಂಭಿಸಲು ನಾನು ಹರ್ಷಿಸುತ್ತೇನೆ. ಈ ಮಳಿಗೆಯಲ್ಲಿನ ಉತ್ಸಾಹಪೂರ್ಣ ಸಂತಸದ ವಾತಾವರಣ ಅತಿಥಿಗಳಿಗೆ ಉತ್ಸಾಹ ತುಂಬಲಿದೆ. ನಮ್ಮ ಆತಿಥ್ಯಕ್ಕೆ ನಾವು ಖ್ಯಾತಿ ಗಳಿಸಿದ್ದೇವೆ. ಅಲ್ಲದೆ, ನಮ್ಮ ಅತಿಥಿಗಳಿಗೆ ನಿರಾಸೆ ಆಗುವುದಿಲ್ಲ ಎಂಬ ಖಾತ್ರಿ ನಮಗಿದೆ” ಎಂದರು.
ನಿಮಗೆ ಬೇಕಾದುದ್ದೆಲ್ಲವನ್ನು ತಿನ್ನಲು ಅವಕಾಶ ಮಾಡಿಕೊಡುವ ಈಟ್ -ಆಲ್-ಯು-ಕ್ಯಾನ್ ಬಫೆ ಬಾರ್ಬೆಕ್ಯೂ ನೇಷನ್ನಲ್ಲಿ ಇದ್ದು, ಅನೇಕ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪದಾರ್ಥಗಳನ್ನು ಸಾದರಪಡಿಸುತ್ತದೆ. ಸ್ಟಾರ್ಟ್ರಗಳಲ್ಲಿ ಮಾಂಸಾಹಾರಿಗಳಿಗಾಗಿ ಮೆಕ್ಸಿಕನ್ ಚಿಲ್ಲಿ ಗಾರ್ಲಿಕ್ ಫಿಶ್, ಹಾಟ್ ಗಾರ್ಲಿಕ್ ಚಿಕನ್ ವಿಂಗ್ಸ್, ತಂದೂರಿ ಟಂಗಡಿ, ಕಾಜೂ ಸೀಕ್ ಕಬಾಬ್, ಕೋಸ್ಟಲ್ ಬಾರ್ಬೆಕ್ಯೂ ಪ್ರಾನ್ಸ್ ಮತ್ತು ಇನ್ನು ಹೆಚ್ಚಾದವು ಇರುತ್ತವೆ. ಸಸ್ಯಾಹಾರಿಗಳಿಗಾಗಿ ಬಾಯಲ್ಲಿ ನೀರೂರಿಸುವಂತಹ ಕುಟ ಮಿರ್ಚ್ ಕಾ ಪನ್ನೀರ್ ಟಿಕ್ಕಾ, ವಾಕ್ ಟಾಸ್ಟ್ ಸೀಕ್ ಕಬಾಬ್, ಶಬ್ನಮ್ ಕೇ ಮೋತಿ ಮಶ್ರೂಮ್, ಪೂರಿ ಕಬಾಬ್ ಮತ್ತು ಹನಿ ಸೆಸೇಮ್ ಸಿನಮನ್ ಪೈನಾಪಲ್ ಮುಂತಾದವು ಇರುತ್ತವೆ. ಮೈನ್ ಕೋರ್ಸ್ ವಿಭಾಗದಲ್ಲಿ ಮಾಂಸಾಹಾರಿಗಳಿಗಾಗಿ ಚಿಕನ್ ದಮ್ ಬಿರಿಯಾನಿ, ರಾಜಾಸ್ತಾನಿ ಲಾಲ್ ಮಾಸ್ ಮತ್ತು ದಮ್ ಕಾ ಮುರ್ಗ್ ಸೇರಿರುತ್ತವೆ. ಸಸ್ಯಾಹಾರಿಗಳಿಗಾಗಿ ಪನ್ನೀರ್ ಬಟರ್ ಮಸಾಲಾ, ಮೇಥಿ ಮಟ ಮಲಾಯ್, ದಾಲ್-ಎ-ದಮ್ ಮತ್ತು ವೆಜ್ ದಮ್ ಬಿರಿಯಾನಿ ಸೇರಿರುತ್ತದೆ. ಲೈವ್ ಕೌಂಟರ್ಗಳು ವೈವಿಧ್ಯಪೂರ್ಣ ಮಾಂಸಾಹಾರಿ/ಸಸ್ಯಾಹಾರಿ ಆಯ್ಕೆಗಳಾದ ಚಿಲ್ಲಿ ಕ್ರಿಸ್ಟಿ ಪೂರಿ, ಪಾಲಾಕ್ ಚಾಟ್, ಮಾರ್ಗರಿಟಾ ಪಿಜ್ಜಾ, ಕೀಮಾ ಪಾವ್ ಮತ್ತು ಚಿಕನ್ ಸೀಕ್ ಮುಂತಾದ ಆಯ್ಕೆಗಳನ್ನು ನೀಡುತ್ತವೆ. ಸಿಹಿ ಡಸರ್ಟ್ಗಳ ವಿಭಾಗದಲ್ಲಿ ಚಾಕಲೇಟ್ ಬ್ರೌನಿ, ರೆಡ್ ವೆಲ್ವೆಟ್ ಪೇಸ್ಟ್ರಿಗಳು, ಅಂಗೂರಿ ಗುಲಾಬ್ ಜಾಮೂನ್, ಕೇಸರಿ ಪಿರ್ನಿ ಮತ್ತು ಮುಂತಾದವುಗಳು ಇರುತ್ತವೆ. ರೆಸ್ಟೋರೆಂಟ್ನಲ್ಲಿ ಲಭ್ಯವಿರುವ ವೈವಿಧ್ಯಪೂರ್ಣ ಕುಲ್ಲಿಗಳು ಬಾಯಲ್ಲಿ ನೀರೂರಿಸುತ್ತವೆ. ಈ ಕುಲ್ಪಿಗಳನ್ನು ವಿವಿಧ ಸ್ವಾದಗಳ ಮಿಶ್ರಣದಲ್ಲಿ ಸೇರಿಸಬಹುದಾಗಿದೆ. ಇದರಿಂದ ವೈವಿಧ್ಯಪೂರ್ಣ ಮಿಶ್ರಣಗಳನ್ನು ಒಳಗೊಂಡ ನಿಮ್ಮ ಪ್ರೀತಿಯ ಡಸರ್ಟ್ ಆನಂದಿಸಬಹುದು.
ಬಾರ್ಬೆಕ್ಯು ನೇಷನ್ ಕುರಿತು
ಬಾರ್ಬೆಕ್ಯು ನೇಷನ್ 2006 ರಲ್ಲಿ ಮುಂಬೈನಲ್ಲಿ ತನ್ನ ಮೊದಲ ಅಂಗಡಿಯಿಂದ ಲೈವ್ ಆನ್-ದಿ-ಟೇಬಲ್ ಗ್ರಿಲ್ ಪರಿಕಲ್ಪನೆಯೊಂದಿಗೆ ‘ಡಿವೈಐ’ (ಡು-ಇಟ್-ಯುವರ್ ಸೆಲ್ಸ್) ಪಾಕಪದ್ಧತಿಯನ್ನು ಪ್ರೋತ್ಸಾಹಿಸುವಲ್ಲಿ ಭಾರತದಲ್ಲಿ ಆದ್ಯ ಪ್ರವರ್ತಕವಾಗಿದೆ. ಬಾರ್ಬೆಕ್ಯು ನೇಷನ್ ಅನ್ನು ಆಕರ್ಷಕ ಬೆಲೆಯಲ್ಲಿ ಗ್ರಾಹಕರಿಗೆ ಸಂಪೂರ್ಣ ಊಟದ ಅನುಭವವನ್ನು ಸಾದರಪಡಿಸುವ ಸರಳ ದೃಷ್ಟಿಕೋನದೊಂದಿಗೆ ಸ್ಥಾಪಿಸಲಾಯಿತು. ಸೇವೆಯ ಎಲ್ಲಾ ಅಂಶಗಳಿಗೆ
ಇದೇ ತತ್ವ ವಿಸ್ತರಿಸಿತು ಮತ್ತು ಮಳಿಗೆಗಳ ಸರಪಳಿಯು ವೇಗವಾಗಿ ವಿಸ್ತರಿಸಲು ಕಾರಣವಾಯಿತು. ಕಳೆದ 15ಕ್ಕೂ ಹೆಚ್ಚಿನ ವರ್ಷಗಳಲ್ಲಿ, ಬಾರ್ಬೆಕ್ಯು ನೇಷನ್ ಭಾರತದಲ್ಲಿ 178 ಔಟ್ಲೆಟ್ಗಳೊಂದಿಗೆ 83 ನಗರಗಳಿಗೆ ವಿಸ್ತರಿಸಿದೆ. ಈ ಅವಧಿಯಲ್ಲಿ, ಬ್ಯಾಂಡ್ ಸಂವಾದಾತ್ಮಕ ಲೈವ್ ಕೌಂಟರ್ಗಳು, ಬಹು ಕುಲ್ಪಿ ವೈವಿಧ್ಯಗಳು ಮತ್ತು ‘ಬಾರ್ಬೆಕ್ಯೂ ಇನ್-ಎ-ಬಾಕ್ಸ್’ನ ವಿಶಿಷ್ಟ ವಿತರಣಾ ಉತ್ಪನ್ನದ ಶ್ರೇಣಿಗಳ ನವೀನತೆ ಸಾದರಪಡಿಸಿದೆ.
1. ಅರೂಪ್ ಸರ್ – ರೀಜನಲ್ ಮ್ಯಾನೇಜರ್
2. ದೀಪಕ್ ಚೌಧರಿ – ARM
3. ಅನಿಲ್ – ಕ್ಲಸ್ಟರ್ ಮ್ಯಾನೇಜರ್
4. ಜಗದೀಪ್ ಸಿಂಗ್ – ಮಾರ್ಕೆಟಿಂಗ್ ಮ್ಯಾನೇಜರ್
5. ಆನಂದ್ – ಬಿಡಿ