ಮೈಸೂರು:1 ಅಕ್ಟೋಬರ್ 2022
ನಂದಿನಿ ಮೈಸೂರು
ಕರ್ನಾಟಕ ಸೇನಾ ಪಡೆ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಗ್ರಹಾರ ವೃತ್ತದಲ್ಲಿ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಭಾವ ಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿ,ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ ಜಿ ಗಂಗಾಧರ್ ರವರು ಸಿಹಿ ವಿತರಣೆ ಮಾಡಿದರು.
ಕಾಂಗ್ರೆಸ್ ಮುಖಂಡರಾದ ನವೀನ್ ಕುಮಾರ್ ಎನ್ ಎಂ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧೀಜಿ ಪಾತ್ರ ಮಹತ್ವದ್ದು, ಶತಮಾನದ ನಾಯಕರು ಹಾಗೆಯೇ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜೈ ಜವಾನ್ – ಜೈ ಕಿಸಾನ್ ಎಂಬ ಘೋಷಣೆಯನ್ನು ಕೂಗಿ ದೇಶವನ್ನು ಕಾಯುವವರಿಗೆ ಮಹತ್ವವಾದ ಸ್ಥಾನವನ್ನು ಕೊಟ್ಟರು. ದೇಶದಲ್ಲಿ ಹಸಿರು ಕ್ರಾಂತಿ ಮಾಡಿದರು. ನಮ್ಮ ದೇಶ ಕಂಡ ಅತೀ ಸರಳ ಪ್ರಧಾನಿ ಇವರು. ಇವರ ಮಾರ್ಗದರ್ಶನವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ನಂತರ ಹಿರಿಯ ಸಮಾಜ ಸೇವಕರಾದ ಡಾ. ರಘುರಾಂ ಕೆ ವಾಜಪೇಯಿ ಅವರು ಮಾತನಾಡಿ ಇಡೀ ದೇಶದ ಸ್ವಾತಂತ್ರ ಹೋರಾಟದಲ್ಲೇ, ಪ್ರತಿಯೊಬ್ಬ ಹೋರಾಟಗಾರರು ಕ್ರಾಂತಿಯಿಂದ ಹೋರಾಟ ಮಾಡಿದರೆ, ಮಹಾತ್ಮ ಗಾಂಧೀಜಿ ಅವರು ಶಾಂತಿಯಿಂದ, ಅಹಿಂಸೆಯಿಂದ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಅವರ ಆದರ್ಶ ಪ್ರತಿಯೊಬ್ಬರೂ ನೆನೆಯಬೇಕು -ಪಾಲಿಸಬೇಕು. ಅವರು ವಿಶ್ವದ ನಾಯಕ. ಇಡೀ ಪ್ರಪಂಚದಲ್ಲಿ ಗಾಂಧಿ ಯವರ ಪ್ರತಿಮೆ ಗಳಷ್ಟು ಪ್ರತಿಮೆ ಗಳು ಯಾರದೂ ಇಲ್ಲ. ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ 2 ನೇ ಪ್ರಧಾನಿ. ಬಹಳಷ್ಟು ಕೃಷಿ ಹಾಗೂ ಕೈಗಾರಿಕಾ ಯೋಜನೆಗಳನ್ನು ಜಾರಿಗೆ ತಂದವರು. ಸರ್ಕಾರ ಅವರಿಗೆ ಹೆಚ್ಚು ಸಂಬಳ ನೀಡುತ್ತಿದೆ ಎಂದು ಪತ್ರ ಬರೆದು ಕಡಿಮೆ ಮಾಡಲು ಮನವಿ ಮಾಡಿದ್ದಂತವರು. ಈಗಿನ ರಾಜಕಾರಣಿಗಳು ಇವರ ಸರಳತೆಯನ್ನು ನೋಡಿ ಕಲಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್ ಗೋಲ್ಡ್, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಮೈಸೂರು ಚಾಮರಾಜನಗರ ಒಕ್ಕಲಿಗರ ಸಂಘದ ಕಾರ್ಯದರ್ಶಿ ಚೇತನ್, ಗುರುರಾಜ್, ಡಾ. ಶಾಂತರಾಜೇಅರಸ್, ವಿ ಜಯಣ್ಣ, ಪ್ರಭುಶಂಕರ, ವಿಜಯೇಂದ್ರ,. ಎಳನೀರು ರಾಮಣ್ಣ, ದರ್ಶನ್ ಗೌಡ, ಬಂಗಾರಪ್ಪ, ಕೃಷ್ಣಯ್ಯ ಸಿ ಎಚ್, ಬಸವರಾಜು, ಪ್ರದೀಪ್, ಕುಮಾರ್, ಸುಬ್ಬೇಗೌಡ, ಸಿದ್ದರಾಜು, ನಾಗಣ್ಣ, ಅಂಬಾ ಅರಸ್, ಸ್ವಾಮಿ, ಶಿವರಾಂ, ಕೃಷ್ಣಮೂರ್ತಿ, ರಾಧಾಕೃಷ್ಣ, ಶ್ರೀನಿವಾಸ ಉಪಸ್ಥಿತರಿದ್ದರು.