ಎಸ್ತರ್ ನರೋನ ಈಗ ನಿರ್ದೇಶಕಿ….’ದಿ ವೆಕೆಂಟ್ ಹೌಸ್‌’‌ ಮೂಲಕ ಹೊಸ ಹೆಜ್ಜೆ ಇಟ್ಟ ಮಂಗಳೂರು ಸುಂದರಿ

ನಂದಿನಿ ಮೈಸೂರು

*ಎಸ್ತರ್ ನರೋನ ಈಗ ನಿರ್ದೇಶಕಿ….’ದಿ ವೆಕೆಂಟ್ ಹೌಸ್‌’‌ ಮೂಲಕ ಹೊಸ ಹೆಜ್ಜೆ ಇಟ್ಟ ಮಂಗಳೂರು ಸುಂದರಿ*

ಉಸಿರಿಗಿಂತ ನೀನೇ ಹತ್ತಿರ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಬಲಗಾಲಿಟ್ಟಿರುವ ಎಸ್ತರ್‌ ನರೋನ. ಮೂಲತಃ ಮಂಗಳೂರಿನವರಾದರು. ಬೆಳೆದದ್ದು ಮುಂಬೈನಲ್ಲಿ. ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದು ಕೂಡ ಬಾಲಿವುಡ್‌ನಿಂದ. ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಕಲಿತು ಹಿಂದಿ ಚಿತ್ರರಂಗ ಪ್ರವೇಶಿಸಿದ ಎಸ್ತರ್ ಮುಂದೆ ತೆಲುಗು, ತುಳು ಸಿನಿಮಾರಂಗದಲ್ಲಿಯೂ ಹೆಸರು ಮಾಡಿದರು. ನಾವಿಕ, ಅತಿರಥ, ನುಗ್ಗೇಕಾಯಿ, ಲೋಕಲ್ ಟ್ರೈನ್, ಲಂಕೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಗ್ಲಾಮರ್ ಬ್ಯೂಟಿ ಎಸ್ತರ್ ನರೋನ ಈಗ ಹೊಸ ಹೆಜ್ಜೆ ಇಟ್ಟಿದ್ದಾರೆ.

ಎಸ್ತರ್ ನರೋನಾ ಪ್ರತಿಭಾನ್ವಿತ ನಾಯಕಿ ಅನ್ನೋದನ್ನು ಸಾಬೀತುಪಡಿಸಿದ್ದಾರೆ. ಈಗ ನಿರ್ದೇಶಕಿಯಾಗಿ ಅದೃಷ್ಟ ಪರೀಕ್ಷೆಗಿಳಿದ್ದಾರೆ. ’ದಿ ವೆಕೆಂಟ್ ಹೌಸ್‌’‌ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನರೋನಾ, ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಚಿತ್ರ ತಯಾರಿಸ್ತಿದ್ದಾರೆ. ನಟನೆ, ನಿರ್ದೇಶನದ ಜೊತೆಗೆ ನರೋನಾ ನಿರ್ಮಾಣ, ಸಂಗೀತ, ಸಾಹಿತ್ಯ, ಕಥೆ, ಕಾಸ್ಟ್ಯೂಮ್ ಎಲ್ಲಾ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಎಸ್ತಾರ್ ಸಾರಥ್ಯದ ಚೊಚ್ಚಲ ’ದಿ ವೆಕೆಂಟ್ ಹೌಸ್‌’‌ ಫಸ್ಟ್ ಲುಕ್ ಅನಾವರಣಗೊಂಡಿದೆ. ಎರಡು ಮುದ್ದಾದ ಜೋಡಿಗಳ ಸುಂದರ ಪ್ರೇಮಕಥೆಯ ಫಸ್ಟ್ ಲುಕ್ ನೋಡುಗರನ್ನು ಇಂಪ್ರೆಸ್ ಮಾಡ್ತಿದೆ.

’ದಿ ವೆಕೆಂಟ್ ಹೌಸ್‌’‌ ಸಿನಿಮಾವನ್ನು ಜೆನೆಟ್ ನರೋನಾ ಪ್ರೊಡಕ್ಷನ್ ನಡಿ ನಿರ್ಮಾಣ ಮಾಡಲಾಗಿದ್ದು, ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನ ಸಿನಿಮಾಕ್ಕಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ’ದಿ ವೆಕೆಂಟ್ ಹೌಸ್‌’‌ ಚಿತ್ರವನ್ನು ಅಕ್ಟೋಬರ್ ಅಥವಾ ನವೆಂಬರ್ ಗೆ ತೆರೆಗೆ ಬರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Leave a Reply

Your email address will not be published. Required fields are marked *