ಬೃಂದಾವನ ಡ್ಯಾಫೊಡಿಲ್ಸ್ ಹೆಸರಿನ ವಿನೂತನ ಕಾಸ್ಮೆಟಿಕ್ ಪ್ಲಾಸ್ಟಿಕ್ ಮತ್ತು ಚರ್ಮರೋಗಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ನಂದಿನಿ ಮೈಸೂರು

ಮೈಸೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಇದೇ ಮೊದಲ ಬಾರಿಗೆ ಬೃಂದಾವನ ಡ್ಯಾಫೊಡಿಲ್ಸ್ ಹೆಸರಿನ ವಿನೂತನ ಕಾಸ್ಮೆಟಿಕ್ ಪ್ಲಾಸ್ಟಿಕ್ ಮತ್ತು ಚರ್ಮರೋಗಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಿದೆ.

ಮೈಸೂರಿನ ಹುಣಸೂರು ಮುಖ್ಯ ರಸ್ತೆಯಲ್ಲಿರುವ ಬೃಂದಾವನ ಆಸ್ಪತ್ರೆಯ ಘಟಕ ಬೃಂದಾವನ ಡ್ಯಾಫೊಡಿಲ್ಸ್ ಸೂಪ ಟಿವಿರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪಿಆರ್ ಕೆ ಪ್ರೊಡಕ್ಷನ್ ಮತ್ತು ಪಿಆರ್ ಕೆ ಆಡಿಯೋ ಸಂಸ್ಥಾಪಕರಾದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಟೇಪ್ ಕತ್ತರಿಸುವ ಮೂಲಕ ಲೋಕಾರ್ಪಣೆ ಮಾಡಿದರು.ನಂತರ ರೋಗಿಗಳ ಚಿಕಿತ್ಸೆಗೆ ಅನುಕೂಲವಾಗಲೆಂದು
ಆಸ್ಪತ್ರೆಯ ವೆಬ್ಸೈಟ್ ಅನ್ನು  ಬಿಡುಗಡೆಗೊಳಿಸಿದರು.

ಪ್ಲಾಸ್ಟಿಕ್ ಹಾಗೂ ಕಾಸ್ಮೆಟಿಕ್ ಸರ್ಜನ್       ಡಾ.ಧಾರಿಣೆ ಶಶಾಂಕ್,ಡಾ.ರವೀಂದ್ರ ನಾಥ್,ಡಾ.ಜಯಶ್ರೀ ಜಾವರ್, ಹಾಗೂ ಕಂದೇಶ್ ರವರು ಜನರ ಸೇವೆಗಾಗಿ ಆರಂಭಿಸಿರುವ ಆಸ್ಪತ್ರೆಗೆ ಅಶ್ವಿನಿ ಪುನೀತ್ ರಾಜ್ ಕುಮಾರ್,ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್ ಹಾಗೂ ಅರ್ಪಿತ ಪ್ರತಾಪ್ ಸಿಂಹ,ಪಾಲಿಕೆ ಸದಸ್ಯೆ ಭಾಗ್ಯ ಮಾದೇಶ್ ಆಸ್ಪತ್ರೆಗೆ ಶುಭಹಾರೈಸಿದರು.

ಬೃಂದಾವನ  ಡ್ಯಾಫೊಡಿಲ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ,  ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆ ,
ಬೊಜ್ಜು ನಿರ್ಮೂಲನೆ, ದೇಹಾಕೃತಿ ಚಿಕಿತ್ಸೆ, ಡೊಳ್ಳು ಹೊಟ್ಟೆ ಶಸ್ತ್ರಚಿಕಿತ್ಸೆ, ಸ್ತನ ಸರಿಪಡಿಸುವ ಶಸ್ತ್ರಚಿಕಿತ್ಸೆ, ಮೂಗು ಚಿಕಿತ್ಸೆ, ಬೊಕ್ಕ ತಲೆಗೆ ಕೂದಲು ಜೋಡಣೆ, ಕೊಬ್ಬು ವರ್ಗಾವಣಾ ಚಿಕಿತ್ಸೆ, ಕೆನ್ನೆಗುಳಿ ನಿರ್ಮಾಣ ಚಿಕಿತ್ಸೆ, ಕೆನ್ನೆ ರೆಪ್ಪೆ ಚಿಕಿತ್ಸೆ ಪುರುಷರ ಎದೆ ಉಬ್ಬು ನಿರ್ಮೂಲನಾ ಶಸ್ತ್ರಚಿಕಿತ್ಸೆ  ಸೇರಿದಂತೆ ಹಲವು ಸೇವೆಗಳು ಲಭ್ಯವಿದೆ.

ಹೈಡ್ರಾಫೇಶಿಯಲ್, ವಾಂಪೈರ್ ಫೇಶಿಯಲ್, ಹಾಲಿವುಡ್ ಫೇಶಿಯಲ್, ಕಾರ್ಬನ್ ಫೇಶಿಯಲ್, ವಿಟಮಿನ್ ಸಹಿತ ಫೇಶಿಯಲ್ ಚಿಕಿತ್ಸೆ ಒಳಗೊಂಡ ಅನೇಕ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿದೆ.

ಅನಗತ್ಯ ಕೂದಲಿಗೆ ಲೇಸರ್ ಚಿಕಿತ್ಸೆ, ಮಚ್ಚೆ, ಕಾರಾಳು  ಹಾಗೂ ಗಾಯಗಳಿಗೆ ಚಿಕಿತ್ಸೆ, ಆಕ್ನೆ ಹಾಗೂ ಮೊಡವೆ ಚಿಕಿತ್ಸೆ, ಕಪ್ಪು ಕಲೆಗಳ ಚಿಕಿತ್ಸೆ, ಕೆಮಿಕಲ್ ಫೀಲ್ ಚಿಕಿತ್ಸೆ, ಚರ್ಮ ಸುಧಾರಣಾ ಚಿಕಿತ್ಸೆ, ಸಹಜ ಸುಕ್ಕು ನಿವಾರಣೆಗಳಂತಹ ಸುರೂಪ ಚಿಕಿತ್ಸೆಗಳು ಲಭ್ಯವಿದೆ.

ಚರ್ಮ ಸಂಬಂಧಿ ವೈದ್ಯಕೀಯ ಚಿಕಿತ್ಸೆಗಳಾದ ಚರ್ಮದ ಅಲರ್ಜಿ, ಚರ್ಮದ ಸೋಂಕುಗಳು, ತೊನ್ನು ಹಾಗೂ ಬಿಳಿ ಮೆಚ್ಚುಗಳು, ಸೋರಿಯಾಸಿಸ್ ಗೆ ಚಿಕಿತ್ಸೆ ದೊರೆಯುತ್ತದೆ.

ಬೃಂದಾವನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಗತ್ಯಾನುಸಾರ ಒಳ ಹಾಗೂ ಹೊರ ರೋಗಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿನೂತನ ತಂತ್ರಜ್ಞಾನ ಹಾಗೂ ವಿದ್ಯುತ್ ಆಧಾರಿತ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದ್ದು, ಮುಖ್ಯ ಶಸ್ತ್ರಚಿಕಿತ್ಸಾಗಾರಗಳು, ಆಕ್ಸಿಜನ್ ಘಟಕ, ಅಗ್ನಿಶಾಮಕ ವ್ಯವಸ್ಥೆ, ವ್ಯವಸ್ಥಿತ ತ್ಯಾಜ್ಯನಿರ್ಮೂಲನಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ನುರಿತ ಚರ್ಮರೋಗ ಚಿಕಿತ್ಸಕರು, ನರ್ಸಿಂಗ್ ಸೇವಾ ಸಿಬ್ಬಂದಿ, ಹಾಗೂ ಆಂಬುಲೆನ್ಸ್ ಸೌಕರ್ಯಗಳು ಲಭ್ಯವಿದೆ. ಕಾಸ್ಮೆಟಿಕ್, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ಹಾಗೂ ಚರ್ಮ ರೋಗಗಳಿಗೆಂದೆ ಮೀಸಲಾದ ಪ್ರತ್ಯೇಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದಾಗಿದೆ.

 

Leave a Reply

Your email address will not be published. Required fields are marked *