ಮೈಸೂರು:7 ಮೇ 2022
ನಂದಿನಿ ಮೈಸೂರು
ಮನುಷ್ಯನ ಪ್ರಮುಖ ಅಂಗ ಕಣ್ಣು.ನೇತ್ರ ರೋಗಿಗಳಿಗೆ ಸೇವೆ ಮಾಡಲು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎ ಎಸ್ ಜಿ ಕಣ್ಣಿನ ಆಸ್ಪತ್ರೆ ಆರಂಭವಾಗಿದೆ ಎಂದು ಡಾ.ಮಹೇಶ್ ಕುಮಾರ್ ತಿಳಿಸಿದರು.
ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆ ಸಿದ್ದಪ್ಪ ವೃತ್ತದಲ್ಲಿ ಆರಂಭವಾಗಿರುವ ಆಸ್ಪತ್ರೆಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರದ ಪ್ರಮುಖ ಕಣ್ಣಿನ ಆಸ್ಪತ್ರೆ ಸರಪಳಿ ಎಎಸ್ ಜಿ ಕಣ್ಣಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕರ್ನಾಟಕದ ಮೈಸೂರಿನಲ್ಲಿ ಪ್ರಾರಂಭವಾಗಿದೆ.ಮೈಸೂರಿನಲ್ಲಿ ಇದೇ ಮೊದಲು
ಎಎಸ್ ಜಿ ಕಣ್ಣಿನ ಆಸ್ಪತ್ರೆ ಆರಂಭಿಸಲಾಗಿದೆ. ಭಾರತ, ಆಫ್ರಿಕಾ,ನೇಪಾಳದ
38 ನಗರದಲ್ಲಿ 44 ಶಾಖೆ ಹೊಂದಿದೆ.
2005 ರಲ್ಲಿ aiims ನ ಡಾ.ಅರುಣ್ ಸಿಂಘ್ವಿ ಮತ್ತು ಡಾ.ಶಿಲ್ಪಿ ಗ್ಯಾಂಗ್ ಇಬ್ಬರು ಪ್ರಾರಂಭಿಸಿದರು.ಒಂದೇ ಸೂರಿನಡಿ ಅತ್ಯಾಧುನಿಕ ತಂತ್ರಜ್ಞಾನ ದೊಂದಿಗೆ ಎಲ್ಲಾ ಕಣ್ಣಿನ ಸಂಬಂಧಿತ ಕಾಯಿಲೆಗಳು,ಸಂಕೀರ್ಣವಾದ ಅಥವಾ ಇತರ ರೋಗಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ.
ವಾರದ 7 ದಿನಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಸಿದ್ದವಾಗಿದ್ದಾರೆ.ಆರಂಭದ ಪ್ರಯುಕ್ತ ಒಂದು ತಿಂಗಳ ಕಾಲ ಉಚಿತ ಸಮಾಲೋಚನೆ ವ್ಯವಸ್ಥೆ ಮಾಡಲಾಗಿದೆ.ಕಣ್ಣಿನ ದೃಷ್ಟಿ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಅವರು ಯಾವ ಒಬ್ಬ ವ್ಯಕ್ತಿಯೂ ಕಣ್ಣಿನ ಬಗ್ಗೆ ನಿರ್ಲಕ್ಷಿಸಬೇಡಿ ಕಣ್ಣಿನ ಸಮಸ್ಯೆ ಇದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಎಂದರು.
ಡಾ. ರೋಷನ್ , ಡಾ.ವಸಂತ ,ಡಾ. ಪವನ್ ಜೋಷಿ, ಡಾ. ವಿನಿ ಬದ್ಲಾನಿ , ಡಾ. ಲೂಸಿ ಕಾವೇರಿ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.