ಅರುಣೋದಯ ವಿಶೇಷ ಚೇತನ ಮಕ್ಕಳಿಗೆ ಸಮವಸ್ತ್ರ ವಿತರಿಸಿದ ಎಂಪಿ ಪ್ರತಾಪ್ ಸಿಂಹ

ಮೈಸೂರು:14 ಜುಲೈ 2022

ನಂದಿನಿ ಮೈಸೂರು

ಅರುಣೋದಯ ವಿಶೇಷ ಚೇತನ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಚಾಮುಂಡಿಪುರಂ 6ನೇ ಕ್ರಾಸಿನಲ್ಲಿರುವ ಅರುಣೋದಯ ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿದ ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹರವರು ಬೆಂಗಳೂರಿನ ಡಾ.ಪೂಜಾ ಪ್ರದೀಪ್ ಕೃಷ್ಣ,ಎಸ್.ರಂಗನಾಥ ರವರ ಮೂಲಕ ನೀಡಿದ ಸಮವಸ್ತ್ರವನ್ನ ಮಕ್ಕಳಿಗೆ ವಿತರಿಸಿದರು.

ನಂತರ ಮಾತನಾಡಿದ ಅವರು ವಿಶೇಷಚೇತನರು ದೇವರ ಮಕ್ಕಳು ಇಂಥ ಮಕ್ಕಳಿಗೆ ಉಚಿತವಾಗಿ ಶಾಲೆ ಮಾಡಿ ಪೋಷಿಸುತ್ತಿರುವುದು ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್ ರವರು ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ .
ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿ ಯವರು ಇಂತಹ ಮಕ್ಕಳನ್ನು ದಿವ್ಯಾಂಗ ಮಕ್ಕಳು ಎಂದು ಕರೆದರು , ಇಂಥವರಿಗೆ ಎಲ್ಲರೂ ಸಹಕಾರಿಯಾಗಿ ನಿಲ್ಲಬೇಕು.ಬಜೆಪಿಯವರು ಬೇರೆಯವರ ತರ ಬರಿ ಭಾಷಣ ಮಾಡೋದಲ್ಲಿ
ಅಂತಕರಣದಿಂದ ಸೇವೆ ಮಾಡುತ್ತೇವೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಹೆಚ್ ವಿ ರಾಜೀವ್ ರವರು ಮಾತನಾಡುತ್ತಾ ನಮ್ಮ ಬಿಜೆಪಿ ಸರ್ಕಾರ ಯಡಿಯೂರಪ್ಪನವರು ಇಂಥವರಿಗೆ ವೇತನವನ್ನು 1000ರೂ ಗಳಿಂದ 1400ರೂ ಗಳಾಗಿ ಹೆಚ್ಚಿಸಿದರೂ ಹಾಗೂ ಪ್ರಾಧಿಕಾರದಿಂದ ಇಂತಹ ಶಾಲೆಗಳಿಗೆ ಸಿಎ ನಿವೇಶನವನ್ನು ಮೀಸಲಾಗಿರಿಸಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮುಖಂಡರಾದ ಎಸ್ ರಂಗನಾಥ, ಸಂದೀಪ್,ವಿಕ್ರಮ್ ಅಯ್ಯಂಗಾರ್, ಜಯಸಿಂಹ, ಟಿ ಪಿ ಮಧುಸೂದನ್, ಸತೀಶ್, ಸುಚೀಂದ್ರ, ರಾಕೇಶ್ ಭಟ್, ರಾಜ್ ಕುಮಾರ್, ಬಸವರಾಜು, ಹರೀಶ ಆರಸ್ ರವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

 

Leave a Reply

Your email address will not be published. Required fields are marked *