ಮೈಸೂರು:8 ನವೆಂಬರ್ 2021
ನಂದಿನಿ
ರಮ್ಮನಹಳ್ಳಿಯಲ್ಲಿ ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ ರಕ್ತದಾನ ಹಾಗೂ ನೇತ್ರದಾನ ನೋಂದಣಿ ಶಿಬಿರಕ್ಕೆ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಚಾಲನೆ.
ನಗುಮೊಗದ ಸಾಮ್ರಾಟ್ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಹನ್ನೊಂದನೆ ದಿನದ ಸ್ಮರಣೆಯ ನಿಮಿತ್ತ ಶಬ್ಧವೇದಿ ಡಾ.ರಾಜ್ ಕುಮಾರ್ ಅಭಿಮಾನಿಗಳ ಕನ್ನಡ ಸಂಘ(ರಿ),ಶಿವರಾಜ್ ಕುಮಾರ್ ಸೇವಾ ಸಂಘ,ಅಪ್ಪು ಯೂಥ್ ಬ್ರಿಗೇಡ್ ಆಶ್ರಯದಲ್ಲಿ ರಮ್ಮನಹಳ್ಳಿ ಗ್ರಾಮದಲ್ಲಿ ಜರುಗಿದ ನೇತ್ರದಾನ ನೋಂದಣಿ ಹಾಗೂ ರಕ್ತದಾನ ಶಿಬಿರಕ್ಕೆ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ಚಾಲನೆ ನೀಡಿದರು.ಪಕ್ಕದ ಕಾಳಿ ಸಿದ್ದನಹುಂಡಿ ಗ್ರಾಮದಲ್ಲೂ ಯುವಸಮೂಹ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಸೋಮಶೇಖರ್,ಯುವಮುಖಂಡರಾದ ಜೈಸ್ವಾಮಿ,ರಾಜಶೇಖರ್ ,ಪುಟ್ಟಬುದ್ಧಿ,ಶಂಕರ,ದಳಪತಿ ಕುಮಾರ,ಮನು,ಪ್ರಮೋದ್,ನಾರಯಣ್,ಪುನೀತ್,ಶಿವು,ಗಣೇಶ್,ರಾಜು,ರಘು,ಬೋರಪ್ಪ,ಕಿರಣ್,ಕಿಶೋರ್,ಮಾಧು,ದ್ಯಾವಪ್ಪ ಮತ್ತಿತರರು ಹಾಜರಿದ್ದರು.ನೂರಕ್ಕೂ ಹೆಚ್ಚು ಜನ ರಕ್ತದಾನ ಹಾಗೂ ನೇತ್ರದಾನ ನೋಂದಣಿಯಲ್ಲಿ ಭಾಗವಹಿಸಿದರು.