ನಂದಿನಿ ಮೈಸೂರು
ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ಬಿಳಿ ಕಡವೆ ಪತ್ತೆಯಾಗಿದ್ದು, ಪ್ರವಾಸಿಗರ ಗಮನಸೆಳೆದಿದ್ದು ಎಲ್ಲರೂ ಅಚ್ಚರಿಯ ನೋಟ ಬೀರುತ್ತಿದ್ದಾರೆ.
ಚಿರತೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮತ್ತು ತಂಡ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ ನಲ್ಲಿ ಅಪರೂಪದ ಬಿಳಿಬಣ್ಣದ ಹೆಣ್ಣು ಕಡವೆಯ ಚಿತ್ರ ಸೆರೆಯಾಗಿದೆ.
ಹಲವು ವನ್ಯಜೀವಿಗಳಿಗೆ ಆಶ್ರಯ ನೀಡಿರುವ ಕಾವೇರಿ ವನ್ಯಧಾಮ ರಾಮನಗರ ಜಿಲ್ಲೆಗೂ ವಿಸ್ತರಿಸಿದೆ. ಈ ಅರಣ್ಯ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಬಿಳಿ ಕಡವೆ ಕಂಡು ಬಂದಿದೆ.
2014ರಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಳಿ ಬಣ್ಣದ ಕಡವೆಯೊಂದು ದಾಖಲಾಗಿತ್ತು ಎಂದು ಗುಬ್ಬಿಯವರ ತಂಡ ಮಾಹಿತಿ ನೀಡಿದೆ.