ನಂದಿನಿ ಮೈಸೂರು
ಟಿ.ನರಸೀಪುರ:ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ.
ಸೊಮನಾಥಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ .ಆರ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣಕ್ಕೆ ವಿಧಾನ ಪರಿಷತ್ ನೌಕರ ಹಾಗೂ ಗ್ರಾಮದ ಮುಖಂಡ ವಿನೋದ್ ಕುಮಾರ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.
ಭೂಮಿಪೂಜೆ ಬಳಿಕ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಸಿ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿನೋದ್ ಕುಮಾರ್ ರವರು
ಸೋಮನಾಥಪುರ ಗ್ರಾಮ ಐತಿಹಾಸಿಕ ಹಿನ್ನಲೆ ಉಳ್ಳದ್ದಾಗಿದ್ದು ನಾಡಿಗೆ ಉನ್ನತ ಮಟ್ಟದ ಅಧಿಕಾರಿಗಳನ್ನು ನೀಡಿದೆ ಆದರೂ ಈ ಗ್ರಾಮದಲ್ಲಿ ಸಾಕಷ್ಟು ವರ್ಷಗಳಿಂದ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣ ಆಗಿರಲಿಲ್ಲ ಇದೀಗ ಎಲ್ಲಾ ಸಮುದಾಯದ ಮುಖಂಡರ ವಿಶ್ವಾಸದೊಂದಿಗೆ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದ್ದು ಅತೀ ಶೀಘ್ರವಾಗಿ ಪುತ್ಥಳಿ ನಿರ್ಮಿಸಿ ಉದ್ಘಾಟಿಸಲಾಗುದು ಎಂದರು
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರುಗಳಾದ ಪುಟ್ಟಸ್ವಾಮಿ,ವಾಜೀದ್, ದೊರೆಸ್ವಾಮಿ,ಪುರುಷಯ್ಯ,ನಿವೃತ್ತ ಸಹಾಯಕ ನಿಭಂಧಕರಾದ ಎಸ್.ಶಿವಸ್ವಾಮಿ,ಗ್ರಾಮದ ಯಜಮಾನರುಗಳಾದ ಕುಮಾರಸ್ವಾಮಿ ,ಪರಶಿವಮೂರ್ತಿ ಸೇರಿದಂತೆ ಜೈ ಭೀಮ್ ಯುವಕರ ಸಂಘದ ಯುವಕರ ಮಿತ್ರರು ಭಾಗವಹಿಸಿದ್ದರು.