ನಂದಿನಿ ಮೈಸೂರು
*ಪ್ರಕೃತಿ,ನದಿ ಸೌಂದರ್ಯ ನೋಡಲು ಬಂದು ಮೋಜು ಮಸ್ತಿ ಮಾಡಿದ ಮಧ್ಯಪ್ರೀಯರೇ ಪರಿಸರ ಹಾಳು ಮಾಡಿ ಹೋಗಿಬಿಟ್ಟಿರಲ್ಲ ಯಾಕೆ?*
ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಎಷ್ಟೇ ಜಾಗೃತಿ ಮೂಡಿಸಿದ್ರೂ ಮಧ್ಯಪ್ರೀಯರು ಕ್ಯಾರೇ ಎನ್ನಲ್ಲ. ತಾವು ಕುಡಿಯುವುದಲ್ಲದೇ ನದಿಯ ನೀರನ್ನ ಹಾಗೂ ನದಿಯ ಸುತ್ತಾ ಮುತ್ತಲಿನ ಪರಿಸರವನ್ನ ಹಾಳು ಮಾಡುತ್ತಿದ್ದಾರೆ.
ನದಿ ನೀರು ಜನರಿಗೆ ಕುಡಿಯುವುದಕ್ಕೆ,ಕೃಷಿ,ನೀರಾವರಿಗೆ ನಾನಾ ರೀತಿ ಉಪಯೋಗವಾಗುತ್ತದೆ.
ನದಿಯಲ್ಲಿ ಪುಣ್ಯಸ್ನಾನ ಮಾಡಿ ಭಕ್ತಿಯಿಂದ ಪೂಜಿಸುವ ನಮ್ಮ ಸಮಾಜ ಒಂದು ಕಡೆಯಾದರೇ ಮತ್ತೊಂದು ಕಡೆ ನದಿ ಕಣ್ತುಂಬಿಕೊಳ್ಳಲು ಬಂದವರು ಮೋಜು ಮಸ್ತಿ ಮಾಡಿದ್ದಲ್ಲದೇ ಕಂಠಪೂರ್ತಿ ಕುಡಿದು ರಾಶಿ ಗಟ್ಟಲೇ ಖಾಲಿ ಬಾಟಲುಗಳನ್ನ ಬಿಸಾಡಿ ಹೋಗಿದ್ದಾರೆ.
ಯುವಾ ಬ್ರಿಗೇಡ್ ಮೈಸೂರು ತಂಡದ ವತಿಯಿಂದ ಆನಂದೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮೀನಾಕ್ಷಿಪುರ ಕೆ.ಆರ್.ಎಸ್ ಹಿನ್ನೀರಿನ ಪ್ರದೇಶದಲ್ಲಿ NIE IT ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಸ್ವಚ್ಚತಾ ಕಾರ್ಯ ಕೈಗೊಂಡು 70ಕ್ಕು ಹೆಚ್ಚು ಸ್ವಯಂ ಸೇವಕರು ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿ ನದಿ ತೀರದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್,ವಾಟರ್ ಬಾಟಲ್ ಸೇರಿದಂತೆ ತ್ಯಾಜ್ಯವನ್ನ
ಸಂಗ್ರಹಿಸಿದ್ದಾರೆ.
ನದಿ ತೀರದಲ್ಲಿ ಮೋಜು ಮಸ್ತಿಗೆಂದು ಬರುವ ಜನ ಕುಡಿದು ಬಿಸಾಡಿರುವ ಸಾವಿರಾರು ಹೆಂಡದ ಬಾಟಲಿಗಳನ್ನು ತೆಗದು ಸ್ವಚ್ಚತೆ ಮಾಡಿದ್ದಾರೆ.ಒಂದು ಟ್ರ್ಯಾಕ್ಟರ್ ನಷ್ಟು ಬಾಟಲ್ ಹಾಗೂ ತ್ಯಾಜ್ಯಗಳನ್ನು ಗ್ರಾಮ ಪಂಚಾಯತಿ ಕಸವಿಲೇವಾರಿ ವಾಹನಕ್ಕೆ ನೀಡಲಾಯಿತು.
ಈ ಪ್ರದೇಶದಲ್ಲಿ ಕಸದ ತೊಟ್ಟಿ ಅಳವಡಿಸಿ, ಹೆಂಡದ ಬಾಟಲ್ ತರುವವರಿಗೆ ಪ್ರವೇಶ ನೀಡದಂತೆ ನಿಬಂಧ ಹೇರಿ ಮತ್ತು ಸೂಚನಾ ಫಲಕಗಳನ್ನು ಅಳವಡಿಸಿ ಎಂದು ಯುವಾಬ್ರಿಗೇಡ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಗ್ರಾಮ ಪಂಚಾಯತಿ ಕಾರ್ಯದರ್ಶಿ ಅನ್ನಪೂರ್ಣ ಅವರಿಗೆ
ಮನವಿ ಮಾಡಿದರು.
ಈ ಕೆಲಸವನ್ನು ತ್ವರಿತವಾಗಿ ಮಾಡುತ್ತೆವೆ ಎಂದು ಅನ್ನಪೂರ್ಣ ಅವರು ಭರವಸೆ ನೀಡಿದರು.
ಸ್ವಚ್ಚತಾ ಕಾರ್ಯಕ್ಕೆ ಆನಂದೂರು ಗ್ರಾಮ ಪಂಚಾಯತಿ PDO ಗಿರೀಶ್ ಸಹಕಾರ ನೀಡಿದರು.
ಯುವಾ ಬ್ರಿಗೇಡ್ ಸದಸ್ಯರು, NIEIT ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ನದಿ,ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ಬಂದ ಕೆಲ ಮಧ್ಯಪಾನೀಯರಿಂದ ಪರಿಸರ ಹಾಳಾಗಿರುವುದಕ್ಕೆ ಇಲ್ಲಿ ಕಾಣುತ್ತಿರುವ ರಾಶಿ ರಾಶಿ ಹೆಂಡದ ಬಾಟಲುಗಳು ಇರೋದೆ ಸಾಕ್ಷಿ.
ಒಟ್ಟಾರೆ ಹೇಳೋದಾದರೇ ಮಧ್ಯಪಾನ ಸೇವನೆ ಅವರವರಿಗೆ ಬಿಟ್ಟಿದ್ದು ಕುಡಿಯುವ ನೆಪದಲ್ಲಿ ಪರಿಸರ ಹಾಳು ಮಾಡದಿರಿ ಎಂಬುದೇ ಭಾರತ್ ನ್ಯೂಸ್ ಟಿವಿ ಮನವಿ.