*ಆದಿವಾಸಿ ಯುವಕ/ಯವತಿ ಯಾರಿಗೆ ರಂಗಭೂಮಿ ತರಬೇತಿ*

 

ವರದಿ:
ಉಮೇಶ್. ಬಿ. ನೂರಲಕುಪ್ಪೆ/ನಂದಿನಿ ಮೈಸೂರು

*ಆದಿವಾಸಿ ಯುವಕ/ಯವತಿ ಯಾರಿಗೆ ರಂಗಭೂಮಿ ತರಬೇತಿ*

ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ವತಿಯಿಂದ ಮೈಸೂರು ಮತ್ತು ಕೊಡಗಿನ ಕೆಲವು ಆಯ್ದ ಹಾಡಿಯ ಯುವಕ/ತಿ ಯರಿಗೆ ತರಬೇತಿ.

ಈ ಸಂದರ್ಭದಲ್ಲಿ ಆದಿವಾಸಿ ಮುಖಂಡ ಶೈಲೇಂದ್ರ ಕುಮಾರ್ ಸಂಪನ್ಮೂಲ ವ್ಯಕ್ತಿಯಾದ ಜೀವಿಕ ಉಮೇಶ್ ರವರು ಸರಳವಾಗಿ ಮತ್ತು ವಿಭಿನ್ನವಾದ ಶೈಲಿಯಲ್ಲಿ ನಮ್ಮ ಆದಿವಾಸಿ ಸಮುದಾಯಕ್ಕೆ ಹತ್ತಿರವಾದ ಮತ್ತು ನಮ್ಮ ಭಾಷೆಯಲ್ಲಿಯೇ ಹೊಂದಿಕೊಂಡ ನಾಟಕಗಳನ್ನು ಅದ್ಬುತವಾಗಿ ಕಲಿಸಿದ್ದಾರೆ.
ಹಾಡಿಯಿಂದ ಹೊರಗೆ ಬಾರದಿದ್ದವರು ಇಂದು ನೂರಾರು ಜನರ ಮುಂದೆ ನಿಂತು ಯಾವುದೇ ಭಯವಿಲ್ಲದೆ ಅಭಿನಯಿಸುವ ಕಲೆಗಳನ್ನು ಕಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ಹಾಡಿಯ ಯುವಕ/ತಿರನ್ನು ಗುರುತಿಸಿ ರಂಗಭೂಮಿ ತರಬೇತಿ ನೀಡಿ ನಟನೆ, ನಾಟಕ, ಕಥೆ, ಹಾಡು, ಮುಂತಾದ ರಂಗ ಚಟುವಟಿಕೆಗಳ ತರಬೇತಿಯನ್ನು ನೀಡಿ ಅವರೇ ಹಾಡಿಯ ಪ್ರಸ್ತುತ ಸಮಸ್ಯೆಗಳ ಕುರಿತಾಗಿ ಸಣ್ಣ ಸಣ್ಣ ನಾಟಕಗಳು, ಹಾಡುಗಳು, ರೂಪಕ, ಸಂವಾದ ಮಾಡುವ ಮೂಲಕ ಹಾಡಿ ಜನರಿಗೆ ಅರಿವು ಮೂಢಿಸಲಾಗುತ್ತಿದೆ.

ಈ ಜಾಗೃತಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಜಮ್ಮ ಆದಿವಾಸಿ ಮುಖಂಡ . ಪುಟ್ಟಬಸವ. ಪುಟ್ಟಿ. ಕಿರ್ತು. ವಹಿಸಿದ್ದು
ಕಲಾವಿದರಾಗಿ ಸತೀಶ್. ಶಿವು. ಸೋಮೇಶ್. ಮನು. ನಂದಿನಿ. ಮಧುರ. ರೇಖಾ. ರಕ್ಷೀತಾ. ವಿನೋದ. ದಾಸಪ್ಪ. ಭಾಗವಹಿಸಿದ್ದರು.

Leave a Reply

Your email address will not be published. Required fields are marked *