ಮಾಧು / ನಂದಿನಿ ಮೈಸೂರು
*ತಿ.ನರಸೀಪುರ.ಜ.08* -ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 150 ಕ್ಕೂ ಹೆಚ್ಚು ಸ್ಥಾನಗಳಿಸಿ ಅಭೂತ ಪೂರ್ವ ಜಯಗಳಿಸಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ವೆಂಕಟರಮಣಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ತಿ.ನರಸೀಪುರ ತಾಲೂಕಿನ ಆಲಗೂಡು ಗ್ರಾಮದಲ್ಲಿ (ಬೈರಾಪುರ ಶಕ್ತಿಕೇಂದ್ರದ ಬೂತ್ ಸಂಖ್ಯೆ 140) ನಡೆದ ಬಿಜೆಪಿಯ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಬೂತ್ ಅಧ್ಯಕ್ಷ ಮಂಟಪ್ಪನಾಯಕರವರ ನಿವಾಸಕ್ಕೆ ಪಕ್ಷದ ಬಾವುಟವನ್ನು ಕಟ್ಟಿದ ಬಳಿಕ ಮಾತನಾಡಿದ ಅವರು ಬೂತ್ ವಿಜಯ ಸಂಕಲ್ಪ ಯಾತ್ರೆ ಮಾಡಿದ್ದ ಹಿನ್ನೆಲೆಯಲ್ಲಿ ಪಕ್ಷ ತ್ರಿಪುರಾ,ಉ.ಪ್ರದೇಶ,ಗುಜರಾತ್ ಚುನಾವಣೆಯಲ್ಲಿ ದೊಡ್ಡ ಯಶಸ್ಸು ಗಳಿಸಿದೆ.ಹಾಗಾಗಿ ಕರ್ನಾಟಕದಲ್ಲೂ ಯಶಸ್ಸು ಗಳಿಸಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕೆಂಬ ನಿಟ್ಟಿನಲ್ಲಿ ಪಕ್ಷದ ಹಿರಿಯರ ನಿರ್ದೇಶನದಂತೆ ರಾಜ್ಯದ 58150 ಬೂತ್ ಗಳಲ್ಲಿ ಏಕ ಕಾಲದಲ್ಲಿ ಬೂತ್ ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ವರುಣಾ ಕ್ಷೇತ್ರದ ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ದ್ವಜ ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ಕನಿಷ್ಠ ಪ್ರತಿ ಬೂತ್ ನಲ್ಲಿ 25 ಮನೆ ಮೇಲೆ ಬಾವುಟ ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ವರುಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಬೇಕಾದ ಉತ್ತಮ ವಾತಾವರಣ ನಿರ್ಮಾಣ ಮಾಡಲು ಕಾರ್ಯಕರ್ತರು ಕಂಕಣ ಬದ್ದರಾಗಿದ್ಧೇವೆ ಎಂದರು.
ಜಿಲ್ಲಾ ಕಾರ್ಯದರ್ಶಿ ಎ.ಎನ್.ರಂಗೂನಾಯಕ್ ಮಾತನಾಡಿ ರಾಜ್ಯದಲ್ಲಿ ಮೇ ತಿಂಗಳಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ರವರು ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಕರೆ ಕೊಟ್ಟಿದ್ದಾರೆ.ಪ್ರತಿ ಬೂತ್ ನಲ್ಲಿ ಪಕ್ಷದ ಸದಸ್ಯರ ವ್ಯಾಟ್ಸಪ್,ಗ್ರೂಪ್ ರಚಿಸಿ,ಪೇಜ್ ಪ್ರಮುಖ್ ಹಾಗು ಬೂತ್ ಸಮಿತಿ ಸದಸ್ಯರು,ಬಿಎಲ್ ಎ 2 ಕಾರ್ಯದರ್ಶಿಗಳನ್ನೊಳಗೊಂಡಂತೆ ಪ್ರತಿ ಬೂತ್ ನಲ್ಲಿ ಸಮಿತಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ.ಕೇಂದ್ರ ಹಾಗು ರಾಜ್ಯ ಸರ್ಕಾರದ ಸಾಧನೆಗಳ ವಿವರವುಳ್ಳ ಕರ ಪತ್ರವನ್ನು ಪ್ರತಿ ಮನೆ ಮನೆ ಮನೆಗೆ ತಲುಪಿಸುವಂತೆ ಪಕ್ಷ ಕರೆ ಕೊಟ್ಟ ಹಿನ್ನೆಲೆಯಲ್ಲಿ ಕಾರ್ಯಕರ್ತರು ಬೂತ್ ಅಧ್ಯಕ್ಷರು ಬೂತ್ ವಿಜಯ ಅಭಿಯಾನದ ಮೂಲಕ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಅವರು ತಿಳಿಸಿದರು. ಈಗಾಗಲೇ100 ಕ್ಕೂ ಹೆಚ್ಚು ಬೂತ್ ಗಳಲ್ಲಿ ಅಭಿಯಾನದ ಕೆಲಸ ಯಶಸ್ವಿಯಾಗಿ ಮುಗಿದಿದ್ದು,12 ನೇ ತಾರೀಖಿನ ವರೆಗೆ 261 ಬೂತ್ ಗಳಲ್ಲಿ ಅಭಿಯಾನ ಕಾರ್ಯಕ್ರಮ ನಡೆಯಲಿದೆ.ರಾಷ್ಟ್ರೀಯ ನಾಯಕರು ಮುಂಬರುವ ಚುನಾವಣೆಯಲ್ಲಿ150 ಕ್ಕೂ ಹೆಚ್ಚು ಸ್ಥಾನ ಪಡೆದು ಪಕ್ಷ ಅಧಿಕಾರ ಹಿಡಿಯಬೇಕೆಂದು ನೀಡಿರುವ ಕರೆ ಸಾಕಾರಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.ಹಾಗೆಯೇ ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತೊಮ್ಮೆ ವಿಜಯದೊಂದಿಗೆ ಪಕ್ಷದ ಬಾವುಟವನ್ನು ಹಾರಿಸಲಿದೆ ಎಂದು ಆತ್ಮ ವಿಶ್ವಾಸ ದಿಂದ ನುಡಿದರು.
ಪುರಸಭಾ ಸದಸ್ಯ ಚಿಕ್ಕಮಹದೇವ,ಎಸ್ ಸಿ ಮೋರ್ಚಾ ಉಪಾಧ್ಯಕ್ಷ ಮಂಜು, ಮುಖಂಡರಾದ ಶ್ರೀಕಂಠ,ಸ್ವಾಮಿ,ಕುಮಾರ,ಮಂಜುನಾಥ್, ರಮೇಶ್, ರಾಜು,ಸೋಮಣ್ಣ ಹಾಜರಿದ್ದರು.
ಸಬ್ಸ್ರೈಬ್ ಮಾಡಿ
https://youtube.com/@BharathNewstvin