ತಿ.ನರಸೀಪುರ ತಾಲೂಕು ಮಹರ್ಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ನಿಂದ ದಿನ ದರ್ಶಿಕೆ ಬಿಡುಗಡೆ

ಮಾಧು/ ನಂದಿನಿ ಮೈಸೂರು

ತಿ.ನರಸೀಪುರ ತಾಲೂಕು ಮಹರ್ಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊರತರಲಾಗಿರುವ ನೂತನ ವರ್ಷದ ದಿನ ದರ್ಶಿಕೆಯನ್ನು ಪಟ್ಟಣದ ಕಬಿನಿ‌ ಅತಿಥಿಗೃಹದಲ್ಲಿ ನಾಯಕ ಸಮಾಜದ ಮುಖಂಡರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ವಾಲ್ಮೀಕಿ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಸಂಘದ ವತಿಯಿಂದ ಕ್ಯಾಲೆಂಡರ್ ಹೊರತರಲಾಗಿದ್ದು,ಬೀದರ್ ನಲ್ಲಿ ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಸ್ವಾಮಿಗಳ ಸಮ್ಮುಖದಲ್ಲಿ ಜ್ಞಾನ ಪ್ರಕಾಶ್ ಹಾಗು ಇನ್ನಿತರೆ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಮಾಡಲಾಗಿದೆ.ದೂರದೂರಿಗೆ ಸಮಾಜದವರು ಬರಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಇಲ್ಲಿ ಮತ್ತೊಮ್ಮೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಾಲ್ಮೀಕಿ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ದೇವರಾಜ್ ಪಾಳೇಗಾರ್,ವಾಲ್ಮೀಕಿ ಮಹಾಸಭಾ ಯುವ ಘಟಕದ ಅಧ್ಯಕ್ಷ ಟಿ.ಆರ್.ತುಳಸೀರಾಮ್,ವಾಲ್ಮೀಕಿ ಚಾರಿಟಬಲ್ ಅಧ್ಯಕ್ಷ ಯಡದೊರೆ ಮಹೇಶ್ ನಾಯಕ್,ಸ್ವಾಮಿ ನಾಯಕ,ಮರಿಸ್ವಾಮಿ ನಾಯಕ,ತಲಕಾಡು ಮಂಜುನಾಥ್, ಆಲಗೂಡು ರಂಗಸ್ವಾಮಿ,ಮಹದೇವ,ಯಡದೊರೆ ನಾಗಣ್ಣ,ದೊಡ್ಡಸ್ವಾಮಿ, ಇಂಡವಾಳು ಸತೀಶ್, ಮಲ್ಲಿಕಾರ್ಜುನ, ಉದ್ಯಮಿ ಓಂ ಗುರು ಮತ್ತಿತರರಿದ್ದರು.

Leave a Reply

Your email address will not be published. Required fields are marked *