ನಂದಿನಿ ಮೈಸೂರು
ಮೈಸೂರಿನಲ್ಲಿ ಇಂದು ಅಹಿಂದ(ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ಸಮುದಾಯದ ಪ್ರಮುಖ ಮುಖಂಡರುಗಳು BJP ಖಾಲಿ ಚೊಂಬು ಪ್ರದರ್ಶನ ಮಾಡುವ ಮೂಲಕ ಸುದ್ದಿಗೋಷ್ಠಿಯನ್ನು ಪತ್ರಕರ್ತರ ಭವನದಲ್ಲಿ ನಡೆಸಲಾಯಿತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಧ್ಯಕ್ಷರಾದ ಕೆ ಎಸ್ ಶಿವರಾಮ್ ರವರು ಮಾತನಾಡಿ ಬಿಜೆಪಿಯ ವಿರುದ್ಧ ಮತಚಲಾಯಿಸಿ ನುಡಿದಂತೆ ನಡೆದ ಗ್ಯಾರಂಟಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕರೆಕೊಟ್ಟರು.
ನಾಳೆ 11 ಘಂಟೆಗೆ ಗುರು ರೆಸಿಡೆನ್ಸಿ ಯಲ್ಲಿ ನಡೆಯುವ ಅಹಿಂದ ದುಂಡು ಮೇಜಿನ ಅಧಿವೇಶನದ ಸಭೆಗೆ ಎಲ್ಲಾ ಅಹಿಂದ ಸಮುದಾಯದ ಮುಖಂಡರುಗಳು ಭಾಗವಹಿಸಿ ಸಾದಕ ಭಾದಕಗಳ ಕುರಿತು ಚರ್ಚಿಸಲಾಗುವುದು.
ಸಂವಿಧಾನ ರಕ್ಷಣಾ ಹೋರಾಟ ಸಮಿತಿ ರಾಜ್ಯಕ್ಷರಾದ ಏನ್ ಭಾಸ್ಕರ್, ರೆಸ್ಪೋಸಿಬಲ್ ಸಿಟಿಜನ್ ಆಫ್ ವಾಯ್ಸ್ ಅಧ್ಯಕ್ಷರಾದ FM ಕಲೀಂ, SC, ST ವಕೀಲರ ಸಂಘದ ಉಪಾಧ್ಯಕ್ಷರಾದ AR ಕಾಂತರಾಜು, ಉಪ್ಪಾರರ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್ ಯೋಗೀಶ ಉಪ್ಪಾರ, ಕುಂಬಾರರ ಸಮಾಜದ ಜಿಲ್ಲಾಧ್ಯಕ್ಷರಾದ ಎಚ್ಎಸ್ ಪ್ರಕಾಶ್, ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷರಾದ ಎಸ್ ರವಿನಂದನ್, ವಿಶ್ವಕರ್ಮ ಬಡಗಿ ಸಂಘದ ಜಿಲ್ಲಾಧ್ಯಕ್ಷರಾದ ಮೊಗಣ್ಣಚಾರ್, ಲೋಕೇಶ್ ಕುಮಾರ್ ಮಾದಾಪುರ ಸೇರಿದಂತೆ ಇತರರು ಹಾಜರಿದ್ದರು.