ನಂದಿನಿ ಮೈಸೂರು
*ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ದರ್ಶನ ಪಡೆದ ಗ್ಲೋಬಲ್ ಸ್ಟಾರ್ ರಾಮ್ ಚರಣ್*
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮುಂಬೈನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಎಂದಿನಂತೆ ದುಬಾರಿ ಬಣ್ಣದ ಬಟ್ಟೆ ಶೋ, ಕ್ಲಾಸ್ ಧರಿಸಿಯಲ್ಲ. ಕಪ್ಪು ಬಣ್ಣದ ಸಾಧಾರಣಾ ಕುರ್ತಾ ಶರ್ಟ್ ಧರಿಸಿ, ಬರಿಗಾಲಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ತೇಜ ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿದ್ದರು. ಅದೇ ಕಾರಣಕ್ಕೆ ಕಪ್ಪು ಬಣ್ಣದ ಸರಳ ಉಡುಗೆ ಧರಿಸಿ, ನಿಯಮದಂತೆ ಚಪ್ಪಲಿ ತ್ಯಜಿಸಿ ಬರಿಗಾಲಲ್ಲಿ ಓಡುತ್ತಿದ್ದರು. ಚೆರ್ರಿ ನಿನ್ನೆ ಮುಂಬೈನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ. ಮಗಳು ಕ್ಲಿನ್ ಕ್ಲಾರ್ ಜನಿಸಿದ ಬಳಿಕ ಅಯ್ಯಪ್ಪಮಾಲೆ ಧರಿಸಿದ್ದ ರಾಮ್ ನಿನ್ನ ದೀಕ್ಷೆಯನ್ನು ಮುಕ್ತಾಯಗೊಳಿಸಿದ್ದಾರೆ.
ತ್ರಿಬಲ್ ಆರ್ ಸೂಪರ್ ಡೂಪರ್ ಹಿಟ್ ಬಳಿಕ ರಾಮ್ ಚರಣ್ ಮಾಲೆ ಧರಿಸಿದ್ದ ಅವರು, ಕೇವಲ ಒಂದೆರಡು ದಿನಗಳಿಗಾಗಿ ಮಾಲೆ ಧರಿಸಿರಲಿಲ್ಲ. ಬದಲಿಗೆ ಬರೋಬ್ಬರಿ 41 ದಿನಗಳ ಕಾಲ ಅವರು ಮಾಲಾಧಾರಿಯಾಗಿ ಅಯ್ಯಪ್ಪನ ಸ್ಮರಣೆ ಮಾಡಿದ್ದರು. ಮಾಲಾಧಾರಿ ಪಾಲಿಸಬೇಕಾದ ಕಠಿಣ ನಿಯಮಗಳು 41 ದಿನಗಳ ವರೆಗೆ ಪಾಲಿಸಿದ್ದರು, ಇದೀಗ ಮಗಳ ಹುಟ್ಟಿದ ಬಳಿಕ ಮಾಲೆ ಧರಿಸಿದ್ದ ರಾಮ್ ಚರಣ್ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನದ ಬಳಿಕ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ. ದೇಗುಲಕ್ಕೆ ಚೆರ್ರಿ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದರು. ಸದ್ಯ ರಾಮ್ ಚರಣ್ ಶಂಕರ್ ನಿರ್ದೆಶನದ ಗೇಮ್ ಚೇಂಜರ್ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.