ಮಧ್ಯದ ಬಾಟಲು ಮುಟ್ಟದೇ ಡ್ರೈ ಫ್ರೂಟ್ಸ್ ಮಾತ್ರ ಮಿಕ್ಸ್ ಮಾಡಿದ ಬಹುಭಾಷಾ ನಟ ಪ್ರಭುದೇವ್

ನಂದಿನಿ ಮೈಸೂರು

ಸಾಂಸ್ಕೃತಿಕ ನಗರೀ ಮೈಸೂರಿನಲ್ಲಿ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೈಸೂರಿನ ಸಂದೇಶ್ ದ ಪ್ರಿನ್ಸ್ ಹೋಟೆಲ್ ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನಡೆದ ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್ ಗೆ ಬಹುಭಾಷಾ ಖ್ಯಾತ ನಟ ಪ್ರಭುದೇವ ರವರು ವಿವಿಧ ಬಗೆಯ ಡ್ರೈ ಫ್ರೂಟ್ಸ್ ಗಳನ್ನು ಮಾತ್ರ ಮಿಕ್ಸ್ ಮಾಡಿದರು.

ಸಾಮನ್ಯವಾಗಿ ಕೇಕ್ ಗೆ
ಆಲ್ಕೋಹಾಲ್ ಹಾಕಬೇಕು ಆದರೇ ಪ್ರಭುದೇವ್ ರವರು ಅಲ್ಕೋಹಾಲ್ ಮಿಶ್ರಿತ ಮದ್ಯದ ಬಾಟಲಿಗಳನ್ನು ಮುಟ್ಟದೇ ಸುಮ್ಮನೇ‌ ನೋಡುತ್ತಾ ನಿಂತಿದ್ದರು.

ನಟ ಪ್ರಭುದೇವ್ ಗೆ
ಸಂದೇಶ್ ದ ಪ್ರಿನ್ಸ್ ಹೋಟೆಲ್ ಮಾಲೀಕ ಹಾಗು ವಿಧಾ‌ನ ಪರಿಷತ್ ನ ಮಾಜಿ ಸದಸ್ಯ ಸಂದೇಶ್ ನಾಗರಾಜ್ ಹಾಗು ಅವರ ಪುತ್ರ ಸೇರಿದಂತೆ ಕುಟುಂಬ ಸದಸ್ಯರು, ಹೋಟೆಲ್ ನ ಸಿಬ್ಬಂದಿಗಳು ಕ್ರಿಸ್ ಮಸ್ ಕೇಕ್ ಮಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರು.

ಕೇಕ್ ಮಿಕ್ಸಿಂಗ್ ಸಮಾರಂಭ ಮುಗಿಯುತ್ತಿದ್ದಂತೆ ನಟ ಪ್ರಭುದೇವ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದರು.

ಕಳೆದ 25 ವರ್ಷಗಳಿಂದ ಪ್ರತಿ ವರ್ಷ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದ್ದೇವೆ.ರೆಬಲ್ ಸ್ಟಾರ್ ಅಂಬರೀಶ್ ,ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಹಲವಾರು ನಾಯಕರು ಈ ಹಿಂದೆ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.ಇಂದು ಬಹುಭಾಷಾ ನಟ ಪ್ರಭುದೇವ್ ರವರು ಮಧ್ಯದ ಬಾಟಲು ಮುಟ್ಟದೇ ಬರೀ ಡ್ರೈಫ್ರೋಟ್ಸ್ ಹಾಕಿ ಮಿಕ್ಸ್ ಮಾಡುವ ಮೂಲಕ ಕೇಕ್ ಮಿಕ್ಸಿಂಗ್ ಗೆ ಚಾಲನೆ ನೀಡಿದ್ದಾರೆ.ನಮ್ಮ ಬ್ಯಾನರ್ ನಡಿ ಪ್ರಭುದೇವ್ ರವರ ಜೊತೆ ವುಲ್ಫ್ ಸಿನಿಮಾ ಮಾಡುತ್ತಿದ್ದೇವೆ.ಚಿತ್ರೀಕರಣ ನಡೆಯುತ್ತಿದೆ ಎಂದರು.

*ಮುಂದಿನ ರಾಜಕೀಯ ನಿಲುವಿನ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಸ್ಪಷ್ಟನೆ ನೀಡದ ಮಾಜಿ ಎಂಎಲ್ಸಿ ಸಂದೇಶ್ ನಾಗರಾಜ್*

ಸದ್ಯಕ್ಕೆ ನಾನೀಗ ಫುಲ್ ಹ್ಯಾಪಿಯಾಗಿದ್ದೇನೆ.
ನನ್ನ ಮುಂದಿನ ರಾಜಕೀಯ ನಿಲುವಿನ ಬಗ್ಗೆ ಸದ್ಯಕ್ಕೆ ಚಿಂತನೆ ಮಾಡಿಲ್ಲ.
ಮುಂಬರುವ ದಿನಗಳಲ್ಲಿ ಹಿರಿಯರು ಹಾಗು ಹಿತೈಷಿಗಳೊಂದಿಗೆ ಚರ್ಚಿಸಿ ನನ್ನ ಮುಂದಿನ ರಾಜಕೀಯ ನಿಲುವನ್ನು ತಿಳಿಸುತ್ತೇನೆ.

– ಸಂದೇಶ್ ನಾಗರಾಜ್.

Leave a Reply

Your email address will not be published. Required fields are marked *