ಶಾಲಾ ವಾಹನ ಡಿಕ್ಕಿ 1ವರೆ ವರ್ಷದ ಮಗು ಸಾವು

 

ಪಿರಿಯಾಪಟ್ಟಣ:3 ಜುಲೈ 2022

ಶಾಲಾ ವಾಹನ ಢಿಕ್ಕಿ ಹೊಡೆದ ಪರಿಣಾಮ ಒಂದುವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ.

ತಾಲ್ಲೂಕಿನ ಹಡಗನಹಳ್ಳಿ ಗ್ರಾಮದ ಸಾಧಿಕ್ ಅಹಮದ್ ರವರ ಪುತ್ರ ಮಹಮದ್ ಅದಂ ಮೃತಪಟ್ಟ ಬಾಲಕನಾಗಿದ್ದಾನೆ. ಈತ ಶನಿವಾರ ಮಧ್ಯಾಹ್ನ 1.45 ರ ಸಮಯದಲ್ಲಿ ಸಾಧಿಕ್ ಅಹಮದ್ ಅಣ್ಣ ಸಿದ್ದಿಕ್ ಅಹಮದ್ ಎಂಬುವವರ ಮಗ ಜೂಹರಾನ್ ಎಂಬಾತ ತಾಲ್ಲೂಕಿನ ಬೆಟ್ಟದಪುರ ಎಸ್ಎಂಎಸ್ ಕಾನ್ವೆಂಟ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಶನಿವಾರ ಮಾರ್ನಿಂಗ್ ಕ್ಲಾಸ್ ಆಗಿದ್ದರಿಂದ ಶಾಲಾ ವಾಹನವು 1.45 ರ ಸಮಯಕ್ಕೆ ಹಡಗನಹಳ್ಳಿ ಗ್ರಾಮದ ಪಂಚಾಯಿತಿ ಮುಂಭಾಗ ವಿದ್ಯಾರ್ಥಿ ಜೂಹರಾನ್ ಎಂಬಾತ ಶಾಲಾ ಬಸ್ ನಿಂದ ಇಳಿದಿದ್ದಾನೆ. ಆ ಸಂದರ್ಭದಲ್ಲಿ ಅಣ್ಣನನ್ನು ನೋಡುತ್ತ ನಿಂತಿದ್ದ ಬಾಲಕ ಮಹಮದ್ ಅದಂ ನಿಂತಿದ್ದನ್ನು ನೋಡದ ಚಾಲಕ ಬಸ್ ಎಡಗಡೆ ನಿಂತಿದ್ದನ್ನು ಮಗುವನ್ನು ಗಮನಿಸಿದೆ ತನ್ನ ಅಜಾಗರುಕತೆಯಿಂದ ಮಗುವಿಗೆ ಢಿಕ್ಕಿ ಹೊಡೆದಿದ್ದಾನೆ ಇದರಿಂದ ಮಗು ಸ್ಥಳದಲ್ಲೇ ಮೃತಪಟ್ಟಿದ್ದು ಈ ಬಗ್ಗೆ ಮಗುವಿನ ತಂದೆ ಬೆಟ್ಟದಪುರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

Leave a Reply

Your email address will not be published. Required fields are marked *